ನೀವು ರೆಸ್ಟೊರೆಂಟ್‌ಗಳಿಗೆ ಹೋದಾಗ ಸಾಮಾನ್ಯವಾಗಿ ಕುಲ್ಚಾವನ್ನು ಸವಿದಿರುತ್ತೀರಿ. ಅತ್ಯಂತ ಮೃದುವಾದ ಅದ್ಭುತ ರುಚಿಯ ಈ ಕುಲ್ಚಾವನ್ನು ಅದ್ಹೇಗೆ ತಯಾರಿಸುತ್ತಾರೆ ಎಂದು ನೀವು ಆಶ್ಚರ್ಯಪಟ್ಟಿರುತ್ತೀರಿ. ಕುಲ್ಚಾದಲ್ಲೂ ವಿವಿಧ ರೀತಿಯಲ್ಲಿ ಸ್ಟಫ್ಡ್ ಕುಲ್ಚಾಗಳನ್ನು ಮಾಡಲಾಗುತ್ತದೆ. ಪ್ರತಿ ಬಗೆಯ ಕುಲ್ಚಾಗಳು ಕೂಡಾ ಭಿನ್ನವಿಭಿನ್ನವಾದ ರುಚಿ ನೀಡುತ್ತದೆ. ನಾವಿಂದು ಸಖತ್ ಟೇಸ್ಟಿ ಚೀಸ್ ಕುಲ್ಚಾ ಮಾಡೋದು ಹೇಗೆಂದು ಹೇಳಿಕೊಡುತ್ತೇವೆ. ಸರಳವಾಗಿ ಮಾಡಬಹುದಾದ ಈ ಕುಲ್ಚಾ ರೆಸ್ಟೊರೆಂಟ್‌ನ ಕುಲ್ಚಾದಂತೆ ಅದ್ಭುತವಾಗಿರುತ್ತದೆ. ಇದನ್ನು ನೀವೂ ಟ್ರೈ ಮಾಡಿ ನೋಡಿ.
Advertisement
ಬೇಕಾಗುವ ಪದಾರ್ಥಗಳು:
ತುರಿದ ಪನೀರ್ – 1 ಕಪ್
ತುರಿದ ಮಾಝಿರೆಲ್ಲಾ ಚೀಸ್ – 1 ಕಪ್
ಸಣ್ಣಗೆ ಹೆಚ್ಚಿದ ಈರುಳ್ಳಿ – ಅರ್ಧ ಕಪ್
ಹೆಚ್ಚಿದ ಬೆಳ್ಳುಳ್ಳಿ – 1 ಟೀಸ್ಪೂನ್
ಕೊತ್ತಂಬರಿ ಸೊಪ್ಪು – 2 ಟೀಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು
ಮೈದಾ ಹಿಟ್ಟು – 1 ಕಪ್
ಗೋಧಿ ಹಿಟ್ಟು – 1 ಕಪ್
ಬೇಕಿಂಗ್ ಪೌಡರ್ – ಅರ್ಧ ಟೀಸ್ಪೂನ್
ಅಡುಗೆ ಸೋಡಾ – ಅರ್ಧ ಟೀಸ್ಪೂನ್
ಎಣ್ಣೆ – 1 ಟೀಸ್ಪೂನ್
ಮೊಸರು – ಅರ್ಧ ಕಪ್
ಬೆಚ್ಚಗಿನ ಹಾಲು – ಅರ್ಧ ಕಪ್
ನೀರು – ಹಿಟ್ಟನ್ನು ಬೆರೆಸಲು ಅಗತ್ಯವಿರುವಂತೆ ಇದನ್ನೂ ಓದಿ: ಐದೇ ಸಾಮಾಗ್ರಿ ಸಾಕು – ಮೊಟ್ಟೆಯಿಂದ ಮಾಡಿ ಈ ರುಚಿಕರ ತಿಂಡಿ
Advertisement
ಮಾಡುವ ವಿಧಾನ:
* ಮೊದಲಿಗೆ ಒಂದು ದೊಡ್ಡ ಬಟ್ಟಲನ್ನು ತೆಗೆದುಕೊಂಡು ತುರಿದ ಪನೀರ್, ಮಾಝಿರೆಲ್ಲಾ ಚೀಸ್, ಈರುಳ್ಳಿ, ಕೊತ್ತಂಬರಿ ಸೊಪ್ಪು, ಬೆಳ್ಳುಳ್ಳಿ ಹಾಕಿ ಮಿಶ್ರಣ ಮಾಡಿ ಪಕ್ಕಕ್ಕಿಡಿ.
* ಇನ್ನೊಂದು ಬೌಲ್ ತೆಗೆದುಕೊಂಡು ಮೈದಾ ಹಿಟ್ಟು, ಗೋಧಿ ಹಿಟ್ಟು, ಬೇಕಿಂಗ್ ಸೋಡಾ, ಉಪ್ಪು ಮತ್ತು ಬೇಕಿಂಗ್ ಪೌಡರ್ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
* ಅದಕ್ಕೆ ಎಣ್ಣೆ, ಮೊಸರು ಮತ್ತು ಹಾಲು ಸೇರಿಸಿ ಮತ್ತು ಮೃದುವಾದ ಹಿಟ್ಟನ್ನು ತಯಾರಿಸಿ.
* ಬಳಿಕ ಹಿಟ್ಟನ್ನು ಸ್ವಚ್ಛವಾದ ಬಟ್ಟೆಯಿಂದ ಮುಚ್ಚಿ ಮತ್ತು 2 ಗಂಟೆಗಳ ಕಾಲ ವಿಶ್ರಾಂತಿ ನೀಡಿ.
* ಈಗ ಹಿಟ್ಟಿನಿಂದ ಮಧ್ಯಮ ಗಾತ್ರದ ಉಂಡೆಗಳನ್ನು ಮಾಡಿ. ಅದನ್ನು ಸ್ವಲ್ಪ ಲಟ್ಟಿಸಿ, ಮಧ್ಯದಲ್ಲಿ ಸ್ವಲ್ಪ ಚೀಸ್ ಮಿಶ್ರಣವನ್ನು ತುಂಬಿ, ಮಡಚಿ, ಚಪಾತಿ ಆಕಾರದಲ್ಲಿ ಸ್ವಲ್ಪ ದಪ್ಪವಾಗಿ ಲಟ್ಟಿಸಿಕೊಳ್ಳಿ.
* ಈಗ ಬಿಸಿ ತವಾದ ಮೇಲೆ ಕುಲ್ಚಾವನ್ನು ಇಟ್ಟು, ಕಂದು ಬಣ್ಣ ಬರುವವರೆಗೆ ಬೇಯಿಸಿಕೊಳ್ಳಿ. ಕುಲ್ಚಾದ ಎರಡೂ ಬದಿ ಎಣ್ಣೆಯನ್ನು ಹರಡಿ.
* ಇದೀಗ ರುಚಿಯಾದ ಚೀಸ್ ಕುಲ್ಚಾ ತಯಾರಾಗಿದ್ದು, ಬಿಸಿಬಿಸಿಯಾಗಿ ಬಡಿಸಿ. ಇದನ್ನೂ ಓದಿ: ಫೇಮಸ್ ಸ್ಟ್ರೀಟ್ ಫುಡ್ – ಆಲೂಗಡ್ಡೆ ಟ್ವಿಸ್ಟರ್ ಸಿಂಪಲ್ ಆಗಿ ಮನೆಯಲ್ಲೇ ಮಾಡಿ