ನಮ್ಮಲ್ಲಿ ಸಸ್ಯಾಹಾರಿಗಳು ಎಂದರೆ ಪನೀರ್ ಅಭಿಮಾನಿಗಳೇ ಹೆಚ್ಚಿನವರು ಸಿಗುತ್ತಾರೆ. ನಾವಿಂದು ಗರಿಗರಿಯಾದ ಪನೀರ್ ನಗ್ಗೆಟ್ಸ್ (Paneer Nuggets) ಮಾಡುವುದು ಹೇಗೆ ಎಂದು ಹೇಳಿ ಕೊಡುತ್ತೇವೆ. ಸಸ್ಯಾಹಾರಿ ನಗ್ಗೆಟ್ಸ್ ಅಥವಾ ಚಿಕನ್ ನಗ್ಗೆಟ್ಸ್ ರೆಸ್ಟೋರೆಂಟ್‌ಗಳಲ್ಲಿ ಸಾಮಾನ್ಯವಾಗಿಯೇ ಸಿಗುತ್ತದೆ. ನೀವು ಪನೀರ್ ಅಭಿಮಾನಿಯಾಗಿದ್ದರೆ ಈ ರೆಸಿಪಿಯನ್ನು ಒಮ್ಮೆ ಮನೆಯಲ್ಲಿ ಟ್ರೈ ಮಾಡಿ ನೋಡಿ.
Advertisement
ಬೇಕಾಗುವ ಪದಾರ್ಥಗಳು:
ಘನಾಕಾರದಲ್ಲಿ ಕತ್ತರಿಸಿದ ಪನೀರ್ – 200 ಗ್ರಾಂ
ಕಾರ್ನ್ ಫ್ಲೋರ್ – ಕಾಲು ಕಪ್
ಅರಿಶಿನ – ಕಾಲು ಟೀಸ್ಪೂನ್
ಕೆಂಪು ಮೆಣಸಿನ ಪುಡಿ – 1 ಟೀಸ್ಪೂನ್
ಕರಿಮೆಣಸಿನ ಪುಡಿ – ಅರ್ಧ ಟೀಸ್ಪೂನ್
ಓರೆಗಾನೊ – 1 ಟೀಸ್ಪೂನ್
ಶುಂಠಿ ಬೆಳ್ಳುಳ್ಳಿ ಪೇಸ್ಟ್ – 1 ಟೀಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು
ಎಣ್ಣೆ – ಡೀಪ್ ಫ್ರೈಗೆ ಬೇಕಾಗುವಷ್ಟು
ಬ್ರೆಡ್ ಕ್ರಂಬ್ಸ್ – ಅಗತ್ಯಕ್ಕೆ ತಕ್ಕಂತೆ ಇದನ್ನೂ ಓದಿ: ಫ್ರೀ ಟೈಂನಲ್ಲಿ ಮಾಡಿ ನೋಡಿ ಚೈನೀಸ್ ಪಕೋಡಾ
Advertisement
Advertisement
ಮಾಡುವ ವಿಧಾನ:
* ಮೊದಲಿಗೆ ಒಂದು ಪಾತ್ರೆಯಲ್ಲಿ ಕಾರ್ನ್ ಫ್ಲೋರ್, ಅರಿಶಿನ, ಮೆಣಸಿನ ಪುಡಿ, ಕರಿಮೆಣಸಿನ ಪುಡಿ, ಓರೆಗಾನೊ, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ.
* ಅದಕ್ಕೆ ಸ್ವಲ್ಪ ಸ್ವಲ್ಪವೇ ನೀರನ್ನು ಸೇರಿಸಿ, ಕಲಸಿಕೊಳ್ಳುತ್ತಾ ದಪ್ಪಗಿನ ಬ್ಯಾಟರ್ ತಯಾರಿಸಿ.
* ಈಗ ಪನೀರ್ ತುಂಡುಗಳನ್ನು ಬ್ಯಾಟರ್‌ಗೆ ಹಾಕಿ, ಚೆನ್ನಾಗಿ ಲೇಪನವಾಗುವಂತೆ ಮಿಶ್ರಣ ಮಾಡಿಕೊಳ್ಳಿ.
* 5-10 ನಿಮಿಷ ಮಿಶ್ರಣಕ್ಕೆ ವಿಶ್ರಾಂತಿ ನೀಡಿ.
* ಈಗ ಬ್ರೆಡ್ ಕ್ರಂಬ್ಸ್ ಅನ್ನು ತಟ್ಟೆಯಲ್ಲಿ ಹರಡಿ, ಪನೀರ್ ತುಂಡುಗಳನ್ನು ಒಂದೊಂದಾಗಿ ಬ್ರೆಡ್ ಕ್ರಂಬ್ಸ್ ಮೇಲೆ ರೋಲ್ ಮಾಡಿ.
* ಪನೀರ್ ತುಂಡುಗಳಿಗೆ ಸಂಪೂರ್ಣವಾಗಿ ಬ್ರೆಡ್ ಕಂಬ್ಸ್ ಕೋಟ್ ಆಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ.
* ಈಗ ನೀವು ಪನೀರ್ ಅನ್ನು 15-20 ನಿಮಿಷಗಳ ವರೆಗೆ ಫ್ರಿಜ್‌ನಲ್ಲಿಡಿ.
* ಬಳಿಕ ಬಿಸಿ ಎಣ್ಣೆಯಲ್ಲಿ ಪನೀರ್ ತುಂಡುಗಳನ್ನು ಡೀಪ್ ಫ್ರೈ ಮಾಡಿ.
* ಪನೀರ್ ತುಂಡುಗಳು ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ ಚೆನ್ನಾಗಿ ಕರಿಯಿರಿ. ಬಳಿಕ ಅವುಗಳನ್ನು ಎಣ್ಣೆಯಿಂದ ತೆಗೆದು ಟಿಶ್ಯೂ ಪೇಪರ್ ಮೇಲೆ ಹರಡಿ.
* ಇದೀಗ ಗರಿಗರಿಯಾದ ಪನೀರ್ ನಗ್ಗೆಟ್ಸ್ ತಯಾರಾಗಿದ್ದು, ಕೆಚಪ್ ಜೊತೆ ಬಿಸಿಬಿಸಿಯಾಗಿ ಸವಿಯಿರಿ. ಇದನ್ನೂ ಓದಿ: ಚಹಾದೊಂದಿಗೆ ಸವಿಯಿರಿ ಕುರುಕಲು ಟೊಮೆಟೊ ಸೇವ್