ಹಾಗಲಕಾಯಿ ಎಲ್ಲರಿಗೂ ಇಷ್ಟವಾಗುವ ತರಕಾರಿ ಅಲ್ಲ. ಆದರೆ ನಾವಿಂದು ಹೇಳಿಕೊಡುತ್ತಿರುವ ಕ್ರಿಸ್ಪಿ ಹಾಗಲಕಾಯಿ ಫ್ರೈಸ್ ಅನ್ನು ನೀವು ಚಪ್ಪರಿಸಿ ಸವಿಯೋದಂತೂ ಖಂಡಿತಾ. ಏಕೆಂದರೆ ಈ ರೆಸಿಪಿಯಲ್ಲಿ ಹಾಗಲಕಾಯಿ ಹೆಚ್ಚು ಕಹಿ ಎನಿಸಲ್ಲ. ಇದು ಗೋವಾ ಸ್ಟೈಲ್‌ನ ಆಹಾರವಾಗಿದ್ದು, ಊಟಕ್ಕೆ ಸೈಡ್ ಡಿಶ್ ಆಗಿ ಸವಿಯಲು ಪರ್ಫೆಕ್ಟ್ ಆಗಿದೆ. ಕ್ರಿಸ್ಪಿ ಹಾಗಲಕಾಯಿ ಫ್ರೈಸ್ ಮಾಡೋದು ಹೇಗೆಂದು ನೋಡೋಣ.
Advertisement
ಬೇಕಾಗುವ ಪದಾರ್ಥಗಳು:
ಹಾಗಲಕಾಯಿ – 5
ರವೆ/ಒರಟಾದ ಅಕ್ಕಿ ಹಿಟ್ಟು – ಕಾಲು ಕಪ್
ಕಾಶ್ಮೀರಿ ಕೆಂಪು ಮೆಣಸಿನ ಪುಡಿ – 1 ಟೀಸ್ಪೂನ್
ಅರಿಶಿನ ಪುಡಿ – ಅರ್ಧ ಟೀಸ್ಪೂನ್
ಉಪ್ಪು – 1 ಟೀಸ್ಪೂನ್
ನಿಂಬೆ – 1
ಎಣ್ಣೆ – 4 ಟೀಸ್ಪೂನ್ ಇದನ್ನೂ ಓದಿ: ಮಹಾರಾಷ್ಟ್ರ ಶೈಲಿಯ ಶೇಂಗಾ ಚಟ್ನಿ ಪುಡಿ ತಿಂದು ನೋಡಿ
Advertisement
Advertisement
ಮಾಡುವ ವಿಧಾನ:
* ಮೊದಲಿಗೆ ಹಾಗಲಕಾಯಿಯ ಸಿಪ್ಪೆ ಸುಲಿದು, ತೆಳುವಾದ, ಉದ್ದದ ಪಟ್ಟಿಗಳಾಗಿ ಕತ್ತರಿಸಿಕೊಳ್ಳಿ.
* ಅದಕ್ಕೆ ಉಪ್ಪು ಹಾಗೂ ನಿಂಬೆ ರಸವನ್ನು ಹಾಕಿ ಮಿಶ್ರಣ ಮಾಡಿ ಸುಮಾರು 15 ನಿಮಿಷಗಳ ಕಾಲ ಪಕ್ಕಕ್ಕಿಡಿ. ಈ ವೇಳೆ ಹಾಗಲಕಾಯಿಯಿಂದ ನೀರು ಬಿಡುಗಡೆಯಾಗಿ ಕಹಿ ಕಡಿಮೆಯಾಗುತ್ತದೆ.
* ಈಗ ರವೆ ಅಥವಾ ಒರಟಾದ ಅಕ್ಕಿ ಹಿಟ್ಟನ್ನು ಒಂದು ಬಟ್ಟಲಿಗೆ ಹಾಕಿ. ಅದಕ್ಕೆ ಅರಶಿನ ಮತ್ತು ಕೆಂಪು ಮೆಣಸಿನ ಪುಡಿಯನ್ನು ಹಾಕಿ ಮಿಶ್ರಣ ಮಾಡಿ ಪಕ್ಕಕ್ಕಿಡಿ.
* ಹಾಗಲಕಾಯಿಯಿಂದ ಬಿಡುಗಡೆಯಾದ ನೀರನ್ನು ಹರಿಸಿಕೊಳ್ಳಿ.
* ಅಕ್ಕಿ ಹಿಟ್ಟಿನ ಮಿಶ್ರಣಕ್ಕೆ ಹಾಗಲಕಾಯಿ ತುಂಡುಗಳನ್ನು ಹಾಕಿ ಸುತ್ತಲೂ ಕೋಟ್ ಆಗುವಂತೆ ಮಿಶ್ರಣ ಮಾಡಿಕೊಳ್ಳಿ.
* ಈಗ ಪ್ಯಾನ್ ಅನ್ನು ಬಿಸಿ ಮಾಡಿ, ಅದಕ್ಕೆ ಎಣ್ಣೆ ಹಾಕಿ.
* ಈಗ ಹಾಗಲಕಾಯಿ ತುಂಡುಗಳನ್ನು ಕಾದ ಎಣ್ಣೆಯಲ್ಲಿ ಬಿಟ್ಟು ಸುತ್ತಲೂ ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ ಫ್ರೈ ಮಾಡಿ.
* ಇದೀಗ ಕ್ರಿಸ್ಪಿ ಹಾಗಲಕಾಯಿ ಫ್ರೈಸ್ ತಯಾರಾಗಿದ್ದು, ಊಟದೊಂದಿಗೆ ಬಡಿಸಿ. ಇದನ್ನೂ ಓದಿ: ಪ್ರಯಾಗ್‌ರಾಜ್‌ನ ಪ್ರಸಿದ್ಧ ಕಚೋರಿ ಸಬ್ಜಿ ಸವಿದಿದ್ದೀರಾ?