ಪ್ರತಿ ದಿನ ಬೆಳಗ್ಗೆ ಉಪಹಾರಕ್ಕೆ ಹೊಸ ಹೊಸದೇನಾದರೂ ಮಾಡಬೇಕು ಎಂದರೆ ಒಮ್ಮೆ ತೆಂಗಿನಕಾಯಿ ದೋಸೆ (Coconut Dosa) ಮಾಡಿ ನೋಡಿ. ಅಕ್ಕಿ ಹಾಗೂ ತೆಂಗಿನಕಾಯಿ ಸಂಯೋಜನೆಯ ರುಚಿಕರವಾದ ದೋಸೆ ಪರ್ಫೆಕ್ಟ್ ಉಪಹಾರವಾಗಿದೆ. ಸೆಟ್ ದೋಸೆಯನ್ನು ಹೋಲುವ ತೆಂಗಿನಕಾಯಿ ದೋಸೆಯನ್ನು ತಯಾರಿಸಲು ಕೆಲವೇ ನಿಮಿಷಗಳು ಸಾಕು. ಒಮ್ಮೆ ಟ್ರೈ ಮಾಡಿ.
Advertisement
ಬೇಕಾಗುವ ಪದಾರ್ಥಗಳು:
ಅಕ್ಕಿ – 2 ಕಪ್
ಮೆಂತ್ಯ – 1 ಟೀಸ್ಪೂನ್
ತುರಿದ ತೆಂಗಿನಕಾಯಿ – 1 ಕಪ್
ನೀರು – ರುಬ್ಬಲು
ಉಪ್ಪು – 1 ಟೀಸ್ಪೂನ್ ಇದನ್ನೂ ಓದಿ: ರುಚಿಕರವಾದ ಆಲೂಗಡ್ಡೆ ಮಂಚೂರಿಯನ್ ಮಾಡಿ ನೋಡಿದ್ದೀರಾ?
Advertisement
Advertisement
ಮಾಡುವ ವಿಧಾನ:
* ಮೊದಲಿಗೆ ದೊಡ್ಡ ಬಟ್ಟಲಿನಲ್ಲಿ ಅಕ್ಕಿ ಮತ್ತು ಮೆಂತ್ಯ ವನ್ನು ತೆಗೆದುಕೊಂಡು ಅದು ಮುಳುಗುವಷ್ಟು ನೀರು ಹಾಕಿ ಸುಮಾರು 4 ಗಂಟೆಗಳ ಕಾಲ ನೆನೆಸಿಡಿ.
* ಈಗ ಅಕ್ಕಿಯನ್ನು ನೀರಿನಿಂದ ತೆಗೆದು ಮಿಕ್ಸರ್ ಗ್ರೈಂಡರ್‌ನಲ್ಲಿ ಹಾಕಿ, ರುಬ್ಬಿಕೊಳ್ಳಿ.
* ಈಗ ಅಕ್ಕಿಯ ಹಿಟ್ಟನ್ನು ಒಂದು ಬಟ್ಟಲಿಗೆ ವರ್ಗಾಯಿಸಿ, ಪಕ್ಕಕ್ಕಿಡಿ.
* ಈಗ ಮಿಕ್ಸರ್ ಗ್ರೈಂಡರ್‌ನಲ್ಲಿ ತೆಂಗಿನಕಾಯಿ ತುರಿ ಮತ್ತು 1 ಕಪ್ ನೀರು ಹಾಕಿ ಮೃದುವಾಗಿ ರುಬ್ಬಿ.
* ತೆಂಗಿನಕಾಯಿ ಪೇಸ್ಟ್ ಅನ್ನು ಅಕ್ಕಿ ಹಿಟ್ಟಿಗೆ ಹಾಕಿ, ಚೆನ್ನಾಗಿ ಮಿಕ್ಸ್ ಮಾಡಿ. ಇದನ್ನೂ ಓದಿ: ಮಂಗಳೂರು ಬನ್ಸ್ ಮಾಡುವುದು ಹೇಗೆ ಗೊತ್ತಾ?
Advertisement
* ಈಗ ಹಿಟ್ಟನ್ನು ಸ್ವಲ್ಪ ಬೆಚ್ಚಗಿನ ಸ್ಥಳದಲ್ಲಿ ಇಟ್ಟು, 8 ಗಂಟೆಗಳ ಕಾಲ ವಿಶ್ರಾಂತಿ ನೀಡಿ.
* ಈಗ ದಪ್ಪ ದೋಸೆ ತಯಾರಿಸಲು ಬೇಕಾಗುವಷ್ಟು ಹೆಚ್ಚುವರಿ ನೀರನ್ನು ಬಳಸಬಹುದು. ಅದಕ್ಕೆ ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ಒಂದು ಬಾರಿ ಮಿಶ್ರಣ ಮಾಡಿ.
* ಈಗ ಬಿಸಿ ತವಾದ ಮೇಲೆ ಬ್ಯಾಟರ್ ಅನ್ನು ಸುರಿದು ಒಂದೊಂದೇ ದೋಸೆ ತಯಾರಿಸಿ.
* ಮಧ್ಯಮ ಜ್ವಾಲೆಯಲ್ಲಿ ಬ್ಯಾಟರ್ ಸುರಿದು ಅದಕ್ಕೆ ಮುಚ್ಚಿ, ದೋಸೆ ಸಂಪೂರ್ಣ ಬೇಯುವವರೆಗೆ ಕಾಯಿಸಿ.
* ಈಗ ತೆಂಗಿನಕಾಯಿ ದೋಸೆ ತಯಾರಾಗಿದ್ದು, ಚಟ್ನಿಯೊಂದಿಗೆ ಆನಂದಿಸಿ.