ಸೈಡ್ ಡಿಶ್‌ಗಳಿಲ್ಲದ ಊಟ ಬೋರ್ ಎನಿಸುವುದು ಸಹಜ. ಕೆಲಸ ಜಾಸ್ತಿ ಆಗುತ್ತಲ್ಲಾ ಅಂತ ಹೆಚ್ಚಿನವರು ಅದನ್ನು ಮಾಡುವ ಗೋಜಿಗೇ ಹೋಗಲ್ಲ. ಆದರೆ ನಿಮ್ಮ ಊಟ ತುಂಬಾ ಸಿಂಪಲ್ ಎನಿಸಿದಾಗ ಈ ಒಂದು ಸಿಂಪಲ್ ರೆಸಿಪಿ ಮಾಡಿ ನೋಡಿ. ಫಟಾಫಟ್ ಹಾಗೂ ಸುಲಭವಾಗಿ ಮಾಡಬಹುದಾದ ಕ್ಯಾಬೇಜ್ ರೋಸ್ಟ್ (Cabbage Roast) ರೆಸಿಪಿ ಇಲ್ಲಿದೆ.
Advertisement
ಬೇಕಾಗುವ ಪದಾರ್ಥಗಳು:
ಎಲೆಕೋಸು (ಕ್ಯಾಬೇಜ್) – 1
ಎಣ್ಣೆ – 2 ಟೀಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು
ಕರಿಮೆಣಸಿನ ಪುಡಿ – ಅರ್ಧ ಟೀಸ್ಪೂನ್
ಬೆಳ್ಳುಳ್ಳಿ ಪುಡಿ – ಕಾಲು ಟೀಸ್ಪೂನ್
ನಿಂಬೆ ರಸ – 2 ಟಿಸ್ಪೂನ್
ಕೊತ್ತಂಬರಿ ಸೊಪ್ಪು – 2 ಟೀಸ್ಪೂನ್ ಇದನ್ನೂ ಓದಿ: ಮಕ್ಕಳ ಫೇವರಿಟ್ ರುಚಿಯಾದ ವೆಜ್ ರೋಲ್ ರೆಸಿಪಿ
Advertisement
Advertisement
ಮಾಡುವ ವಿಧಾನ:
* ಮೊದಲಿಗೆ ಓವನ್ ಅನ್ನು 425 ಡಿಗ್ರಿ ಎಫ್‌ಗೆ ಕಾಯಿಸಿಟ್ಟುಕೊಳ್ಳಿ.
* ಕ್ಯಾಬೇಜ್ ಅನ್ನು ಸ್ವಚ್ಛಗೊಳಿಸಿ, 8 ಭಾಗಗಳಾಗಿ ಕತ್ತರಿಸಿ ಇಡಿ.
* ಶೀಟ್ ಪ್ಯಾನ್ ತೆಗೆದುಕೊಂಡು, ಅದಕ್ಕೆ ಸ್ವಲ್ಪ ಎಣ್ಣೆಯನ್ನು ಗ್ರೀಸ್ ಮಾಡಿ.
* ಕ್ಯಾಬೇಜ್ ತುಂಡುಗಳನ್ನು ಪ್ಯಾನ್ ಮೇಲೆ ಜೋಡಿಸಿ, ಅದಕ್ಕೆ 2 ಟೀಸ್ಪೂನ್ ಎಣ್ಣೆಯನ್ನು ಚಿಮುಕಿಸಿ.
* ಉಪ್ಪು, ಕರಿಮೆಣಸಿನ ಪುಡಿ ಹಾಗೂ ಬೆಳ್ಳುಳ್ಳಿ ಪುಡಿಯನ್ನು ಅದರ ಮೇಲೆ ಹರಡಿ.
* ಈಗ ಪ್ಯಾನ್ ಅನ್ನು ಓವನ್‌ನಲ್ಲಿ ಇಟ್ಟು 20 ನಿಮಿಷ ಕಾಯಿಸಿಕೊಳ್ಳಿ.
* ಕ್ಯಾಬೇಜ್ ಮೃದು ಹಾಗೂ ಸ್ವಲ್ಪ ಕಂದು ಬಣ್ಣ ಬಂದ ಬಳಿಕ ಅದನ್ನು ಓವನ್‌ನಿಂದ ತೆಗೆಯಿರಿ.
* ಈಗ ಅದರ ಮೇಲೆ ನಿಂಬೆ ರಸವನ್ನು ಚಿಮುಕಿಸಿ, ಹಾಗೂ ಕೊತ್ತಂಬರಿ ಸೊಪ್ಪನ್ನು ಹರಡಿ.
* ಇದೀಗ ಊಟಕ್ಕೆ ಸೈಡ್ ಡಿಶ್ ಕ್ಯಾಬೇಜ್ ರೋಸ್ಟ್ ಸಿದ್ಧವಾಗಿದೆ. ಇದನ್ನೂ ಓದಿ: ಚೈನೀಸ್ ಸ್ಟೈಲ್‌ನ ಯಮ್ಮೀ ಯಮ್ಮೀ ಆರೆಂಜ್ ಚಿಕನ್ ರೆಸಿಪಿ