ಬೆಂಗಳೂರು: ನಮ್ಮ ಹೆಮ್ಮೆಯ ಬೆಂಗಳೂರನ್ನು ದೇಶದ ಎರಡನೇ ರಾಜಧಾನಿಯನ್ನಾಗಿ ಘೋಷಿಸುವಂತೆ ಕರ್ನಾಟಕ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದೆ.
ಭಾರತದಲ್ಲಿ ಎಲ್ಲಾ ಭಾಷೆಗಳನ್ನೂ ಆಡುವ ಜನರು ಸಿಲಿಕಾನ್ ಸಿಟಿಯಲ್ಲಿ ನೆಲೆಸಿದ್ದಾರೆ. ತಾಂತ್ರಿಕ, ವೈದ್ಯಕೀಯ, ಏರೋಸ್ಪೇಸ್, ಮಾಹಿತಿ-ತಂತ್ರಜ್ಞಾನ, ಸಂಗೀತ, ಸಾಹಿತ್ಯ ಹೀಗೆ ಎಲ್ಲಾ ಕ್ಷೇತ್ರಗಳ ಸಾಧಕರು ಇಲ್ಲಿದ್ದಾರೆ. ದೇಶದ 2ನೇ ರಾಜಧಾನಿಗೆ ಬೆಂಗಳೂರಿಗಿಂತ ಒಳ್ಳೆಯ ನಗರ ಮತ್ತೊಂದಿಲ್ಲ ಅಂತ ಬೃಹತ್ ಕೈಗಾರಿಕಾ ಸಚಿವ ಆರ್.ವಿ. ದೇಶಪಾಂಡೆ ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ.
Advertisement
Advertisement
ಬೆಂಗಳೂರು 2ನೇ ರಾಜಧಾನಿಯಾದರೆ ದಕ್ಷಿಣದ ರಾಜ್ಯಗಳಿಗೆ ನೆರವಾಗುತ್ತದೆ. ಅಷ್ಟೇ ಅಲ್ಲದೇ ಇಲ್ಲೇ ಚಳಿಗಾಲದ ಸಂಸತ್ ಅಧಿವೇಶನ ನಡೆಸಬಹುದು. ಸುಪ್ರೀಂಕೋರ್ಟ್ ಪೀಠ, ಯುಪಿಎಸ್‍ಸಿ ಕಚೇರಿ, ವಿದೇಶಗಳ ವೀಸಾ ಕಚೇರಿಗಳನ್ನು ತೆರೆಯಬಹುದು ಎಂದು ದೇಶಪಾಂಡೆ ಪತ್ರದಲ್ಲಿ ಹೇಳಿದ್ದಾರೆ.