ಈ ಸೀಸನ್‌ನಲ್ಲಿ ಸೀಬೆ ಹಣ್ಣು ಹೇರಳವಾಗಿ ಬೆಳೆಯುತ್ತದೆ. ಬಾಯಲ್ಲಿ ನೀರು ತರುವ ಸೀಬೆ ಹಣ್ಣಿನ ಜ್ಯೂಸ್ ಅಥವಾ ಸಲಾಡ್ ಅನ್ನು ನಾವು ಸವಿದಿರುತ್ತೇವೆ. ಇದು ಜೀರ್ಣಕ್ರಿಯೆಗೂ ಉತ್ತಮವಾಗಿದೆ. ಇಂದು ನಾವು ಈ ರುಚಿಕರವಾದ ಸೀಬೆ ಹಣ್ಣಿನಿಂದ ಬರ್ಫಿ (Guava Barfi) ಮಾಡೋಣ. ಸೀಬೆ ಹಣ್ಣಿನಿಂದ ಬರ್ಫಿ ಮಾಡುವ ವಿಧಾನ ಇಲ್ಲಿದೆ.
Advertisement
ಬೇಕಾಗುವ ಪದಾರ್ಥಗಳು:
ತಾಜಾ ಹಾಲು – ಅರ್ಧ ಕಪ್
ಸೀಬೆ ಹಣ್ಣಿನ ತಿರುಳು – 1 ಕಪ್
ಫ್ರೆಶ್ ಕ್ರೀಂ – 2 ಟೀಸ್ಪೂನ್
ಸಕ್ಕರೆ – 1 ಕಪ್
ತುರಿದ ತೆಂಗಿನಕಾಯಿ – 3 ಕಪ್
ತುಪ್ಪ – 2 ಟೀಸ್ಪೂನ್
ನಿಂಬೆ ಸರ – 1 ಟೀಸ್ಪೂನ್
ಒಣ ಹಣ್ಣುಗಳು – ಅಲಂಕಾರಕ್ಕೆ
Advertisement
Advertisement
ಮಾಡುವ ವಿಧಾನ:
* ಮೊದಲಿಗೆ ಪಾತ್ರೆಯಲ್ಲಿ ಹಾಲನ್ನು ಬಿಸಿ ಮಾಡಿ, ಅದು ಅರ್ಧದಷ್ಟಾಗುವವರೆಗೆ ಕುದಿಸಿ.
* ಅದಕ್ಕೆ ಸಕ್ಕರೆ ಹಾಗೂ ತೆಂಗಿನ ತುರಿ ಸೇರಿಸಿ ದಪ್ಪ ಮಿಶ್ರಣ ಮಾಡಿ.
* ಇನ್ನೊಂದು ಪಾತ್ರೆಯಲ್ಲಿ ಸೀಬೆ ಹಣ್ಣಿನ ತಿರುಳನ್ನು ತುಪ್ಪದೊಂದಿಗೆ ಬೇಯಿಸಿ.
* ಹಣ್ಣಿನ ತಿರುಳು ತುಪ್ಪವನ್ನು ಬಿಡಲಾರಂಭಿಸಿದಾಗ ಅದಕ್ಕೆ ಫ್ರೆಶ್ ಕ್ರೀಂ ಸೇರಿಸಿ.
* ನಂತರ ನಿಂಬೆ ರಸವನ್ನು ಸೇರಿಸಿ, ಹಾಲಿನ ಮಿಶ್ರಣವನ್ನೂ ಅದಕ್ಕೆ ಹಾಕಿ ಮಿಕ್ಸ್ ಮಾಡಿ.
* ಈ ಮಿಶ್ರಣವನ್ನು ಇನ್ನೂ 10 ನಿಮಿಷ ಬೇಯಿಸಿ, ದಪ್ಪವಾಗಲು ಬಿಡಿ.
* ಕೊನೆಯದಾಗಿ ಏಲಕ್ಕಿ ಪುಡಿ ಸೇರಿಸಿ, ತುಪ್ಪ ಸವರಿದ ಬಟ್ಟಲಿನಲ್ಲಿ ಹಾಕಿ ಆಕಾರ ನೀಡಿ.
* ಈಗ ಒಣ ಹಣ್ಣುಗಳಿಂದ ಅಲಂಕರಿಸಿ, ತಣ್ಣಗಾದ ಬಳಿಕ ಸೀಬೆ ಹಣ್ಣಿನ ಬರ್ಫಿಯನ್ನು ಸವಿಯಿರಿ.