ಆರೋಗ್ಯಕರ, ರುಚಿಕರ ಮಾತ್ರವಲ್ಲದೇ ಪ್ರೋಟೀನ್ಯುಕ್ತ ಬೇಳೆಯ ಪರೋಟ ಪ್ರತಿಯೊಬ್ಬರೂ ಒಮ್ಮೆ ಟ್ರೈ ಮಾಡಲೇ ಬೇಕು. ಆಲೂ ಪರೋಟದಂತೆಯೇ ಮಾಡಲಾಗುವ ಈ ವಿಧಾನವನ್ನು ಕಲಿತುಕೊಂಡರೆ, ನಿಮ್ಮ ಹೆಲ್ದಿ ರೆಸಿಪಿ ಲಿಸ್ಟ್ಗಳ ಪಟ್ಟಿಯಲ್ಲಿ ಇದು ಕೂಡಾ ಉಳಿದುಕೊಳ್ಳುತ್ತದೆ. ರುಚಿಕರ ಪರೋಟವನ್ನು ಊಟಕ್ಕೆ ಬಡಿಸಲು ಪರ್ಫೆಕ್ಟ್ ಆಗಿದ್ದು, ಚಟ್ನಿ, ಮೊಸರಿನೊಂದಿಗೂ ಸವಿಯಬಹುದು.
Advertisement
ಬೇಕಾಗುವ ಪದಾರ್ಥಗಳು:
ಕಡಲೆ ಬೇಳೆ – 1 ಕಪ್(3 ಗಂಟೆ ನೆನೆಸಿರಬೇಕು)
ಅರಿಶಿನ – ಕಾಲು ಟೀಸ್ಪೂನ್
ಕಾಶ್ಮೀರಿ ಕೆಂಪು ಮೆಣಸಿನ ಪುಡಿ – ಅರ್ಧ ಟೀಸ್ಪೂನ್
ಆಮ್ಚೂರ್/ಒಣ ಮಾವಿನ ಪುಡಿ – ಅರ್ಧ ಟೀಸ್ಪೂನ್
ಗರಂ ಮಸಾಲಾ – ಅರ್ಧ ಟೀಸ್ಪೂನ್
ಜೀರಿಗೆ ಪುಡಿ – ಅರ್ಧ ಟೀಸ್ಪೂನ್
ಓಂಕಾಳು – ಕಾಲು ಟೀಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು
ಸಣ್ಣಗೆ ಕತ್ತರಿಸಿದ ಕೊತ್ತಂಬರಿ ಸೊಪ್ಪು – 2 ಟೀಸ್ಪೂನ್
ಗೋಧಿ ಹಿಟ್ಟು – 10 ಚಪಾತಿ ಗಾತ್ರದ ಉಂಡೆಗಳು
ಎಣ್ಣೆ – ಹುರಿಯಲು
Advertisement
Advertisement
ಮಾಡುವ ವಿಧಾನ:
* ಮೊದಲಿಗೆ ದೊಡ್ಡ ಪಾತ್ರೆಯಲ್ಲಿ 3 ಗಂಟೆ ನೆನೆಸಿಟ್ಟ ಕಡಲೆ ಬೇಳೆಯನ್ನು ತೆಗೆದುಕೊಳ್ಳಿ.
* ಅದನ್ನು 15 ನಿಮಿಷಗಳ ಕಾಲ ಕುದಿಸಿ ಬೇಯಿಸಿ. ಅಥವಾ ಪರ್ಯಾಯವಾಗಿ 2 ಕಪ್ ನೀರನ್ನು ಸೇರಿಸಿ 2 ಸೀಟಿಗಳಿಗೆ ಪ್ರೆಶರ್ ಕುಕರ್ನಲ್ಲಿ ಬೇಯಿಸಬಹುದು.
* ಬಳಿಕ ನೀರನ್ನು ಸಂಪೂರ್ಣವಾಗಿ ಬಸಿಯಬೇಕು. ಇದಕ್ಕೆ 30 ನಿಮಿಷ ಬಸಿಯಲು ಬದಿಗಿರಿಸಿ.
* ಈಗ ಬೇಯಿಸಿ, ಬಸಿದ ಕಡಲೆ ಬೆಳೆಯನ್ನು ಬ್ಲೆಂಡರ್ಗೆ ಹಾಕಿ, ನೀರನ್ನು ಸೇರಿಸದೇ ನುಣ್ಣಗೆ ಪುಡಿ ಮಾಡಿ.
* ಈಗ ಕಡಲೆ ಬೇಳೆ ಪುಡಿಯನ್ನು ದೊಡ್ಡ ಪಾತ್ರೆಗೆ ವರ್ಗಾಯಿಸಿ, ಅದಕ್ಕೆ ಅರಿಶಿನ, ಮೆಣಸಿನ ಪುಡಿ, ಆಮ್ಚೂರ್ ಅಥವಾ ಒಣ ಮಾವಿನ ಪುಡಿ, ಗರಂ ಮಸಾಲಾ, ಜೀರಿಗೆ ಪುಡಿ, ಓಂಕಾಳು, ಉಪ್ಪು ಮತ್ತು ಕೊತ್ತಂಬರಿ ಸೊಪ್ಪು ಸೇರಿಸಿ ಮಿಕ್ಸ್ ಮಾಡಿ.
* ಈಗ ಚಪಾತಿ ಮಾಡುವ ಗಾತ್ರದ ಗೋಧಿ ಹಿಟ್ಟಿನ ಉಂಡೆಯನ್ನು ತೆಗೆದುಕೊಂಡು, ಸ್ವಲ್ಪ ಲಟ್ಟಿಸಿ, ಅದರ ಮಧ್ಯ 2 ಟೀಸ್ಪೂನ್ ಕಡಲೆ ಬೇಳೆಯ ಮಿಶ್ರಣವನ್ನು ಹಾಕಿ, ಪರೋಟಾದಂತೆ ಸುತ್ತಿಕೊಳ್ಳಿ.
* ಈಗ ಆ ಹಿಟ್ಟನ್ನು ಲಟ್ಟಿಸಿ, ಬಿಸಿ ತವಾದಲ್ಲಿ ಹಾಕಿ, ಬೇಯಿಸಿ.
* ಅದಕ್ಕೆ 1 ಟೀಸ್ಪೂನ್ ಎಣ್ಣೆ ಸವರಿ, ಮತ್ತೆ ಮಗುಚಿ ಹಾಕಿ, ಎರಡೂ ಬದಿ ಕಾಯಿಸಿ.
* ಈಗ ಆರೋಗ್ಯಕರ ಬೇಳೆ ಪರೋಟ ಸವಿಯಲು ಸಿದ್ಧವಾಗಿದೆ.