ಹನಿ ಚಿಲ್ಲಿ ಆಲೂಗಡ್ಡೆ ಜನಪ್ರಿಯ ಇಂಡೋ-ಚೈನೀಸ್ ಖಾದ್ಯ. ಇದು ಪ್ರಪಂಚದಾದ್ಯಂತದ ಆಹಾರಪ್ರಿಯರಲ್ಲಿ ಅಚ್ಚುಮೆಚ್ಚಿನಾಗಿದೆ. ಇದು ಸಿಹಿ ಮತ್ತು ಮಸಾಲೆಯುಕ್ತ ಪರಿಪೂರ್ಣ ಸಂಯೋಜನೆಯಾಗಿದ್ದು ಎಲ್ಲರಿಗೂ ಇಷ್ಟವಾಗುತ್ತದೆ. ಈ ರುಚಿಕರ ಖಾದ್ಯವನ್ನು ಸುಲಭವಾಗಿ ಮನೆಯಲ್ಲೇ ತಯಾರಿಸಬಹುದು. ಇದು ಸ್ಟಾರ್ಟರ್, ಸ್ನ್ಯಾಕ್ಸ್ ಅಥವಾ ಊಟಕ್ಕೆ ಸೈಡ್ ಡಿಶ್ ಆಗಿಯೂ ಸವಿಯಬಹುದು. ಸ್ಪೆಷಲ್ ದಿನಗಳಲ್ಲಿ ಇದನ್ನು ತಯಾರಿಸಿದರೆ ಊಟಕ್ಕೆ ಹೊಸ ಸ್ವಾದವಿರುತ್ತದೆ. ನೀವು ಕೂಡಾ ಇದನ್ನೊಮ್ಮೆ ಟ್ರೈ ಮಾಡಿ, ಮನೆಮಂದಿಯನ್ನು ಮೆಚ್ಚಿಸಿ.
Advertisement
ಬೇಕಾಗುವ ಪದಾರ್ಥಗಳು:
ಆಲೂಗಡ್ಡೆ – 500 ಗ್ರಾಂ
ಕಾರ್ನ್ ಫ್ಲೋರ್ – 3-4 ಟೀಸ್ಪೂನ್
ಮೈದಾ ಹಿಟ್ಟು – 1-2 ಟೀಸ್ಪೂನ್
ಉಪ್ಪು – ಅರ್ಧ ಟೀಸ್ಪೂನ್
ಎಣ್ಣೆ – ಹುರಿಯಲು ಬೇಕಾಗುವಷ್ಟು
ಕೊಚ್ಚಿದ ಬೆಳ್ಳುಳ್ಳಿ – 4-5
ಕೊಚ್ಚಿದ ಹಸಿರು ಮೆಣಸಿನಕಾಯಿ – 2-3
ಹೆಚ್ಚಿದ ಈರುಳ್ಳಿ – 1
ಹೆಚ್ಚಿದ ಕ್ಯಾಪ್ಸಿಕಂ – 1
ಟೊಮೆಟೋ ಸಾಸ್ – 2 ಟೀಸ್ಪೂನ್
ಚಿಲ್ಲಿ ಸಾಸ್ – ಟೀಸ್ಪೂನ್
ಸೋಯಾ ಸಾಸ್ – 1 ಟೀಸ್ಪೂನ್
ಜೇನುತುಪ್ಪ – 2 ಟೀಸ್ಪೂನ್
ವಿನೆಗರ್ – 1 ಟೀಸ್ಪೂನ್
ನೀರು – ಅರ್ಧ ಕಪ್ ಇದನ್ನೂ ಓದಿ: ಟ್ರೈ ಮಾಡಿ ಟೇಸ್ಟಿ ಗ್ರೀನ್ ಚಟ್ನಿ ಸ್ಯಾಂಡ್‌ವಿಚ್
Advertisement
Advertisement
ಮಾಡುವ ವಿಧಾನ:
* ಮೊದಲಿಗೆ ಆಲೂಗಡ್ಡೆಯನ್ನು ತೊಳೆದು ಸಿಪ್ಪೆ ತೆಗೆಯಿರಿ. ಅವುಗಳನ್ನು ತೆಳ್ಳಗೆ ಇಲ್ಲವೇ ಉದ್ದದ ಪಟ್ಟಿಗಳಾಗಿ ಕತ್ತರಿಸಿ.
* ಬಳಿಕ ಆಲೂಗಡ್ಡೆಯನ್ನು 10-15 ನಿಮಿಷಗಳ ಕಾಲ ನೀರಿನಲ್ಲಿ ನೆನೆಸಿ.
* ಬಳಿಕ ನೀರನ್ನು ಹರಿಸಿ ಟಿಶ್ಯೂ ಪೇಪರ್ ಬಳಸಿ ಆಲೂಗಡ್ಡೆಯನ್ನು ಒಣಗಿಸಿ.
* ಒಂದು ಬಟ್ಟಲಿನಲ್ಲಿ ಕಾರ್ನ್‌ಫ್ಲೋರ್, ಮೈದಾ ಹಿಟ್ಟು ಮತ್ತು ಉಪ್ಪನ್ನು ಸೇರಿಸಿ, ಸ್ವಲ್ಪ ಸ್ವಲ್ಪವೇ ನೀರು ಸೇರಿಸುತ್ತಾ ಮೃದುವಾದ ಮಿಶ್ರಣವನ್ನಾಗಿ ಮಾಡಿ.
* ಆಳವಾದ ಪ್ಯಾನ್‌ನಲ್ಲಿ ಎಣ್ಣೆಯನ್ನು ಬಿಸಿ ಮಾಡಿ, ಆಲೂಗೆಡ್ಡೆಯನ್ನು ಹಿಟ್ಟಿನಲ್ಲಿ ಅದ್ದಿ ಮತ್ತು ಬಿಸಿ ಎಣ್ಣೆಯಲ್ಲಿ ಗೋಲ್ಡನ್ ಬ್ರೌನ್ ಮತ್ತು ಗರಿಗರಿಯಾಗುವವರೆಗೆ ಹುರಿಯಿರಿ.
* ಬಳಿಕ ಹುರಿದ ಆಲೂಗಡ್ಡೆಯನ್ನು ತೆಗೆದು ಹೆಚ್ಚುವರಿ ಎಣ್ಣೆಯನ್ನು ತೆಗೆಯಲು ಟಿಶ್ಯೂ ಪೇಪರ್ ಮೇಲೆ ಹರಡಿಕೊಳ್ಳಿ.
* ಮತ್ತೊಂದು ಬಾಣಲೆಯಲ್ಲಿ 2 ಟೀಸ್ಪೂನ್ ಎಣ್ಣೆ ಬಿಸಿ ಮಾಡಿ. ಹೆಚ್ಚಿದ ಬೆಳ್ಳುಳ್ಳಿ, ಹಸಿರು ಮೆಣಸಿನಕಾಯಿ ಮತ್ತು ಕತ್ತರಿಸಿದ ಈರುಳ್ಳಿ ಸೇರಿಸಿ. ಅವು ಅರೆಪಾರದರ್ಶಕವಾಗುವವರೆಗೆ ಹುರಿಯಿರಿ.
* ನಂತರ ಹೆಚ್ಚಿದ ಕ್ಯಾಪ್ಸಿಕಂ ಸೇರಿಸಿ ಮತ್ತು 1 ನಿಮಿಷ ಹುರಿಯಿರಿ.
* ಟೊಮೆಟೋ ಸಾಸ್, ಚಿಲ್ಲಿ ಸಾಸ್, ಸೋಯಾ ಸಾಸ್, ಜೇನುತುಪ್ಪ, ವಿನೆಗರ್ ಮತ್ತು ನೀರನ್ನು ಸೇರಿಸಿ, ಎಲ್ಲವನ್ನೂ ಚೆನ್ನಾಗಿ ಮಿಶ್ರಣ 2-3 ನಿಮಿಷ ಬೇಯಲು ಬಿಡಿ.
* ಹುರಿದ ಆಲೂಗಡ್ಡೆಯನ್ನು ಸಾಸ್‌ಗೆ ಸೇರಿಸಿ ಚೆನ್ನಾಗಿ ಮಿಶ್ರಣವಾಗುವಂತೆ ಟಾಸ್ ಮಾಡಿ.
* ಹೆಚ್ಚಿದ ಸ್ಪ್ರಿಂಗ್ ಆನಿಯನ್‌ನಿಂದ ಅಲಂಕರಿಸಿದರೆ ಹನಿ ಚಿಲ್ಲಿ ಆಲೂಗಡ್ಡೆ ಸವಿಯಲು ಸಿದ್ಧವಾಗುತ್ತದೆ. ಇದನ್ನು ಬಿಸಿಬಿಸಿಯಾಗಿ ಬಡಿಸಿ. ಇದನ್ನೂ ಓದಿ: ಮನೆಯಲ್ಲೇ ಮಾಡಿ ಸ್ವಾದಿಷ್ಟಕರ ಚೀಸ್ ಚಿಕನ್ ಬರ್ಗರ್