ಬೇಕರಿಗಳಲ್ಲಿ ಮಕ್ಕಳ ಗಮನ ಸೆಳೆಯೋದು ಸಿಹಿ ಹಾಗೂ ರುಚಿಕರವಾದ ಡೋನಟ್‌ಗಳು. ಆದರೆ ಹೆಚ್ಚಿನ ಕಡೆಗಳಲ್ಲಿ ಮೊಟ್ಟೆ ಬಳಸದೇ ಡೋನಟ್ ಮಾಡೋದು ವಿರಳ. ಆದರೆ ನಾವಿಂದು ಹೇಳಿಕೊಡುತ್ತಿರುವ ಡೋನಟ್ ರೆಸಿಪಿ ಶುದ್ಧ ಸಸ್ಯಾಹಾರಿಗಳಿಗಾಗಿ. ಇಲ್ಲಿ ನಾವು ಮೊಟ್ಟೆ ಬಳಸಿಲ್ಲ. ವೆಗನ್ ಡಯಟ್‌ನಲ್ಲಿರುವವರಿಗೂ ಈ ರೆಸಿಪಿ ಸೂಕ್ತವಾಗಲಿದೆ. ಇಲ್ಲಿ ಸಾಮಾನ್ಯ ಬೆಣ್ಣೆ ಬಳಸೋ ಬದಲು ವೆಗನ್ ಬೆಣ್ಣೆಯನ್ನು ಬಳಸಿ ಈ ಡೋನಟ್ ಅನ್ನು ಮಾಡಬಹುದು. ಹಾಗಿದ್ದರೆ ಸಸ್ಯಾಹಾರಿಗಳಿಗಾಗಿ ಡೋನಟ್ ಹೇಗೆ ಮಾಡೋದು ಎಂದು ನೋಡೋಣ.
Advertisement
ಬೇಕಾಗುವ ಪದಾರ್ಥಗಳು:
ಮೈದಾ ಹಿಟ್ಟು – 2 ಕಪ್
ಬಾದಾಮಿ ಅಥವಾ ಸೋಯಾ ಮಿಲ್ಕ್ – ಅರ್ಧ ಕಪ್
ಆಕ್ಟಿವ್ ಒಣ ಈಸ್ಟ್ – 1 ಟೀಸ್ಪೂನ್
ಬ್ರೌನ್ ಶುಗರ್ – 2 ಟೀಸ್ಪೂನ್
ಬೆಣ್ಣೆ – 2 ಟೀಸ್ಪೂನ್
ವೆನಿಲ್ಲಾ ಸಾರ – 1 ಟೀಸ್ಪೂನ್
ಉಪ್ಪು – ಅರ್ಧ ಟೀಸ್ಪೂನ್
ಎಣ್ಣೆ – ಹುರಿಯಲು ಬೇಕಾಗುವಷ್ಟು ಇದನ್ನೂ ಓದಿ: ಚಾಕ್ಲೇಟ್, ಕುಂಬಳಕಾಯಿ ಕಾಂಬಿನೇಷನ್‌ನಲ್ಲಿ ಮಾಡಿ ರುಚಿಕರ ಪ್ಯಾನ್‌ಕೇಕ್
Advertisement
Advertisement
ಮಾಡುವ ವಿಧಾನ:
* ಮೊದಲಿಗೆ ಒಂದು ಬಟ್ಟಲಿನಲ್ಲಿ ಮೈದಾ ಹಿಟ್ಟು, ಈಸ್ಟ್, ಸಕ್ಕರೆ, ಉಪ್ಪು, ಕರಗಿದ ಬೆಣ್ಣೆ, ವೆನಿಲ್ಲಾ ಸಾರ ಹಾಗೂ ಬಾದಾಮಿ ಹಾಲನ್ನು ಸೇರಿಸಿ ನಯವಾದ ಹಿಟ್ಟಿನಂತೆ ಬೆರೆಸಿಕೊಳ್ಳಿ.
* ಒಂದು ಪಾತ್ರೆಗೆ ಎಣ್ಣೆ ಸವರಿ, ಅದರಲ್ಲಿ ಹಿಟ್ಟನ್ನು ಇಟ್ಟು, ಒಂದು ಶುಭ್ರವಾದ ಬಟ್ಟೆಯಿಂದ ಮುಚ್ಚಿ 1 ಗಂಟೆ ಬೆಚ್ಚಗಿನ ಸ್ಥಳದಲ್ಲಿ ಇಡಿ. ಈ ವೇಳೆ ಹಿಟ್ಟು ಉಬ್ಬಿಕೊಳ್ಳುತ್ತದೆ.
* ಈಗ ಹಿಟ್ಟನ್ನು ಲಟ್ಟಣಿಗೆಯಿಂದ ಸುಮಾರು 4 ಇಂಚು ದಪ್ಪವಿರುವಂತೆ ಸುತ್ತಿಕೊಳ್ಳಿ. ಡೋನಟ್ ಕಟರ್ ಸಹಾಯದಿಂದ ಅದಕ್ಕೆ ಡೋನಟ್ ಆಕಾರ ನೀಡಿ. ಈ ಹಿಟ್ಟಿನಲ್ಲಿ ಸಾಮಾನ್ಯ ಗಾತ್ರದ ಸುಮಾರು 7-8 ಡೋನಟ್‌ಗಳಾಗುತ್ತವೆ.
* ಈಗ ಬೇಕಿಂಗ್ ಟ್ರೇಯಲ್ಲಿ ಡೋನಟ್‌ಗಳನ್ನು ಇರಿಸಿ, ಅದನ್ನು ಮತ್ತೆ ಶುಭ್ರ ಬಟ್ಟೆಯಿಂದ ಮುಚ್ಚಿ, ಇನ್ನೊಂದು ಗಂಟೆ ಬೆಚ್ಚಗಿನ ಸ್ಥಳದಲ್ಲಿ ಉಬ್ಬಲು ಬಿಡಿ.
* ಈಗ ಒಂದು ದೊಡ್ಡ ಪ್ಯಾನ್ ತೆಗೆದುಕೊಂಡು ಅದರಲ್ಲಿ 2 ಇಂಚಿನಷ್ಟು ಎತ್ತರಕ್ಕೆ ಎಣ್ಣೆ ಸುರಿದು ಮಧ್ಯಮ ಉರಿಯಲ್ಲಿ ಬಿಸಿಗೆ ಇಡಿ. ಬಳಿಕ ಒಂದೊಂದೇ ಡೋನಟ್‌ಗಳನ್ನು ಎಣ್ಣೆಯಲ್ಲಿ ಹಾಕಿ, ಎರಡೂ ಬದಿ ಗೋಲ್ಡನ್ ಬ್ರೌನ್ ಬಣ್ಣ ಹಾಗೂ ಗರಿಗರಿಯಾಗುವವರೆಗೆ ಹುರಿದುಕೊಳ್ಳಿ.
* ಬಳಿಕ ಡೋನಟ್‌ಗಳನ್ನು ಎಣ್ಣೆಯಿಂದ ತೆಗೆದು ಟಿಶ್ಯೂ ಪೇಪರ್ ಮೇಲೆ ಹರಡಿ ಹಾಗೂ ತಣ್ಣಗಾಗಲು ಬಿಡಿ.
* ಇದೀಗ ಮೊಟ್ಟೆ ಬಳಸದ ಟೇಸ್ಟಿ ಡೋನಟ್ ತಯಾರಾಗಿದೆ. ನೀವು ಬೇಕೆಂದರೆ ನಿಮ್ಮಿಷ್ಟದ ವೈಟ್ ಅಥವಾ ನಾರ್ಮಲ್ ಚಾಕ್ಲೆಟ್‌ನಲ್ಲಿ ಅರ್ಧಕ್ಕೆ ಡಿಪ್ ಮಾಡಿ ಚಾಕ್ಲೆಟ್ ಚಿಪ್ಸ್‌ನಿಂದ ಅಲಂಕರಿಸಿ ಸವಿಯಬಹುದು. ಇದನ್ನೂ ಓದಿ: ಹೀಗೆ ಮಾಡಿ ಇನ್ಸ್ಟೆಂಟ್ ಮಗ್ ಬ್ರೌನಿ
Advertisement
Web Stories