ಕೇಕ್ ಎಂದರೆ ಎಲ್ಲಾ ಮಕ್ಕಳಿಗೂ ಇಷ್ಟ. ಬೇಕರಿಗಳಲ್ಲಿ ಸಿಗೋ ಈ ಸಿಹಿಯಾದ ತಿಂಡಿಗೆ ಮಕ್ಕಳು ಹಠ ಹಿಡಿಯೋದೂ ಸಹಜ. ನಾವಿಂದು ಈ ಮಕ್ಕಳಿಗಾಗಿ ಟೇಸ್ಟಿ ಕ್ಯಾರೆಟ್ ಕೇಕ್ ಅನ್ನು ಮನೆಯಲ್ಲೇ ಮಾಡೋದು ಹೇಗೆಂದು ಹೇಳಿಕೊಡುತ್ತೇವೆ. ಇದನ್ನು ಪ್ರತಿಯೊಬ್ಬರೂ ಮನೆಯಲ್ಲಿ ಟ್ರೈ ಮಾಡಿ, ಮಕ್ಕಳಿಗೆ ಸವಿಯಲು ನೀಡಿ.
Advertisement
ಬೇಕಾಗುವ ಪದಾರ್ಥಗಳು:
ತುರಿದ ಕ್ಯಾರೆಟ್ – 2 ಕಪ್
ಕತ್ತರಿಸಿದ ಖರ್ಜೂರ – 2 ಕಪ್
ಮೈದಾ – 2 ಕಪ್
ಅಡುಗೆ ಸೋಡಾ – 1 ಟೀಸ್ಪೂನ್
ಮೊಟ್ಟೆ – 3
ಸಕ್ಕರೆ ಪುಡಿ – ಅರ್ಧ ಕಪ್
ಜಾಯಿಕಾಯಿ ಪುಡಿ – 1 ಟೀಸ್ಪೂನ್
ಎಣ್ಣೆ – 1 ಕಪ್
ವೆನಿಲ್ಲಾ ಸಾರ – 1 ಟೀಸ್ಪೂನ್
ಲವಂಗ, ದಾಲ್ಚಿನ್ನಿ ಮತ್ತು ಏಲಕ್ಕಿ ಪುಡಿ – 1 ಟೀಸ್ಪೂನ್
ಬಾದಾಮಿ, ಪಿಸ್ತಾ, ವಾಲ್ನಟ್ – ಅರ್ಧ ಕಪ್ (ಐಚ್ಛಿಕ) ಇದನ್ನೂ ಓದಿ: ಮದ್ರಾಸ್ ಮಸಾಲಾ ಮಿಲ್ಕ್ ರೆಸಿಪಿ
Advertisement
Advertisement
ಮಾಡುವ ವಿಧಾನ:
* ಮೊದಲಿಗೆ ಓವನ್ ಅನ್ನು 160 ಡಿಗ್ರಿ ಸೆಲ್ಸಿಯಸ್‌ಗೆ ಪೂರ್ವಭಾವಿಯಾಗಿ ಬಿಸಿ ಮಾಡಿಕೊಳ್ಳಿ.
* ಒಂದು ಮೊಟ್ಟೆಯನ್ನು ತೆಗೆದುಕೊಂಡು ಅದನ್ನು 2 ನಿಮಿಷಗಳ ಕಾಲ ಬೀಟ್ ಮಾಡಿಕೊಳ್ಳಿ. ಬಳಿಕ 3 ಮೊಟ್ಟೆಗಳನ್ನು ಅದಕ್ಕೆ ಸೇರಿಸಿ ಬೀಟ್ ಮಾಡಿ.
* ಸಕ್ಕರೆ ಪುಡಿಯನ್ನು ಸೇರಿಸಿ ಮತ್ತು ನಯವಾಗುವತನಕ ಬೀಟ್ ಮಾಡಿ.
* ಎಣ್ಣೆ, ತುರಿದ ಕ್ಯಾರೆಟ್, ಖರ್ಜೂರ ಮತ್ತು ಒಣ ಹಣ್ಣುಗಳನ್ನು ಸೇರಿಸಿ ಇನ್ನೆರಡು ನಿಮಿಷಗಳ ಕಾಲ ಬೀಟ್ ಮಾಡಿ.
* ಅಡುಗೆ ಸೋಡಾ ಹಾಗೂ ಮೈದಾವನ್ನು ಶೋಧಿಸಿ. ವೆನಿಲ್ಲಾ ಸಾರ ಮತ್ತು ಪುಡಿ ಮಾಡಿದ ಮಸಾಲೆ ಸೇರಿಸಿ. ಇದನ್ನು ಮೊಟ್ಟೆಯ ಮಿಶ್ರಣಕ್ಕೆ ಸೇರಿಸಿ ಮತ್ತು ಒಂದು ನಿಮಿಷ ಬೀಟ್ ಮಾಡಿ.
* ಮಿಶ್ರಣವನ್ನು ಗ್ರೀಸ್ ಮಾಡಿದ ಟ್ರೇಗೆ ಹಾಕಿ ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ ಸುಮಾರು 50 ನಿಮಿಷಗಳ ಕಾಲ ಓವನ್‌ನಲ್ಲಿ ಬೇಯಿಸಿ.
* ಬಳಿಕ ಟೂತ್ ಪಿಕ್ ಬಳಸಿ ಕೇಕ್ ಬೆಂದಿದೆಯೇ ಎಂಬುದನ್ನು ಪರಿಶೀಲಿಸಿ.
* ಇದೀಗ ಟೇಸ್ಟಿ ಕ್ಯಾರೆಟ್ ಕೇಕ್ ತಯಾರಾಗಿದ್ದು ಸವಿಯಲು ಸಿದ್ಧವಾಗಿದೆ. ಇದನ್ನೂ ಓದಿ: ಧಿಡೀರ್ ಅಂತಾ ಮಾಡಿ ರವಾ ಉತ್ತಪ್ಪ
Advertisement
Web Stories