ಮೀನು ಸಾರು ಎಂದರೆ ನಾನ್ವೆಜ್ ಪ್ರಿಯರ ಬಾಯಲ್ಲಿ ನೀರು ಬರದೇ ಇರಲಾರದು. ಒಂದೊಂದು ಬಗೆಯ ಮೀನುಗಳ ಖಾದ್ಯವನ್ನು ಅದರದೇ ವಿಶಿಷ್ಟ ರೀತಿಯಲ್ಲಿ ಮಾಡಿದರೇನೇ ಹೆಚ್ಚು ರುಚಿ. ನಾವಿಂದು ಹೆಚ್ಚಾಗಿ ಎಲ್ಲಾ ಬಗೆಯ ಮೀನಿಗೂ ಸರಿಯೆನಿಸುವ ರುಚಿಕರವಾದ ಮೀನು ಸಾರು (Fish Curry) ರೆಸಿಪಿ ಹೇಳಿಕೊಡುತ್ತೇವೆ. ಸಿಂಪಲ್ ಆಗಿರುವ ಈ ವಿಧಾನವನ್ನು ನೀವು ಕೂಡಾ ಟ್ರೈ ಮಾಡಿ ನೋಡಿ.
Advertisement
ಬೇಕಾಗುವ ಪದಾರ್ಥಗಳು:
ಮೀನು – ಅರ್ಧ ಕೆಜಿ
ಹುಣಸೆಹಣ್ಣು – ನಿಂಬೆ ಹಣ್ಣು ಗಾತ್ರದಷ್ಟು
ಎಣ್ಣೆ – 2 ಟೀಸ್ಪೂನ್
ಈರುಳ್ಳಿ – 2
ಬೆಳ್ಳುಳ್ಳಿ ಪೇಸ್ಟ್ – ಅರ್ಧ ಟೀಸ್ಪೂನ್
ಸಣ್ಣಗೆ ಹೆಚ್ಚಿದ ಶುಂಠಿ – ಒಂದು ಇಂಚು
ಟೊಮೆಟೊ – 2
ತೆಂಗಿನ ತುರಿ – 1 ಕಪ್
ಹೆಚ್ಚಿದ ಹಸಿ ಮೆಣಸಿನಕಾಯಿ – 2
ಕೆಂಪು ಮೆಣಸಿನ ಪುಡಿ – ಖಾರಕ್ಕೆ ತಕ್ಕಷ್ಟು
ಕರಿಬೇವಿನ ಎಲೆ – ಕೆಲವು
ನೀರು – 1 ಕಪ್
ಉಪ್ಪು – ರುಚಿಗೆ ತಕ್ಕಷ್ಟು
ಕೊತ್ತಂಬರಿ ಸೊಪ್ಪು – ಸ್ವಲ್ಪ ಇದನ್ನೂ ಓದಿ: ಸವಿದಷ್ಟೂ ಬೇಕೆನಿಸುತ್ತೆ ಪೆಪ್ಪರ್ ಮಟನ್
Advertisement
Advertisement
ಮಾಡುವ ವಿಧಾನ:
* ಮೊದಲಿಗೆ ಮೀನನ್ನು ಶುಚಿಗೊಳಿಸಿ, ಬಳಿಕ ಅದಕ್ಕೆ ಹುಣಸೆ ಹಣ್ಣಿನ ರಸ ಹಾಗೂ ಉಪ್ಪು ಹಾಕಿ ಅರ್ಧ ಗಂಟೆ ಪಕ್ಕಕ್ಕಿಡಿ.
* ತೆಂಗಿನ ತುರಿಯನ್ನು ಮಿಕ್ಸರ್ ಜಾರ್ಗೆ ಹಾಕಿ ನೀರು ಸೇರಿಸಿ ನಯವಾದ ಪೇಸ್ಟ್ ತಯಾರಿಸಿ ಪಕ್ಕಕ್ಕಿಡಿ.
* ಈಗ ಮಣ್ಣಿನ ಮಡಕೆಯನ್ನು ಬಿಸಿ ಮಾಡಿ, ಅದರಲ್ಲಿ ಎಣ್ಣೆ ಹಾಕಿ ಬಿಸಿಯಾದ ಬಳಿಕ ಕರಿಬೇವಿನ ಎಲೆ, ಶುಂಠಿ ಹಾಕಿ.
* ನಂತರ ಈರುಳ್ಳಿ ಹಾಕಿ ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ ಫ್ರೈ ಮಾಡಿ.
* ಈಗ ಹಸಿ ಮೆಣಸಿನಕಾಯಿ ಮತ್ತು ಬೆಳ್ಳುಳ್ಳಿ ಪೇಸ್ಟ್ ಹಾಕಿ 2-3 ನಿಮಿಷ ಫ್ರೈ ಮಾಡಿ. ಬಳಿಕ ಟೊಮೆಟೊ ಹಾಕಿ, ಮೆತ್ತಗಾಗುವವರೆಗೆ ಫ್ರೈ ಮಾಡಿ.
* ನಂತರ ರುಬ್ಬಿದ ತೆಂಗಿನ ಪೇಸ್ಟ್, ಖಾರದ ಪುಡಿ, ಅರಿಶಿನ ಪುಡಿ, ಉಪ್ಪು ಹಾಕಿ ಕುದಿಸಿ.
* ಸಾರು ಕುದಿ ಬರುತ್ತಿದ್ದಂತೆಯೇ ಮೀನುಗಳನ್ನು ಹಾಕಿ ಬೇಯಿಸಿ.
* ಮೀನು ಬೆಂದ ಬಳಿಕ ಕೊತ್ತಂಬರಿ ಸೊಪ್ಪನ್ನು ಸೇರಿಸಿ, ಉರಿಯನ್ನು ಆಫ್ ಮಾಡಿ.
* ಇದೀಗ ಸಿಂಪಲ್ ವಿಧಾನದ ಮೀನು ಸಾರು ತಯಾರಾಗಿದ್ದು, ಅನ್ನದೊಂದಿಗೆ ಸವಿಯಿರಿ. ಇದನ್ನೂ ಓದಿ: ಗರಿಗರಿಯಾದ ಚಿಕನ್ ಸಮೋಸ ಮಾಡಿ ನೋಡಿ