ನೀವು ಆರೋಗ್ಯಕರ ಹೊಸ ರುಚಿಯನ್ನು ರಸಂನಲ್ಲಿ ಆಸ್ವಾದಿಸಲು ಬಯಸಿದರೆ ಒಮ್ಮೆ ನೀವು ದೊಡ್ಡಪತ್ರೆ ಸೊಪ್ಪಿನ ರಸಂ (Doddapatre Rasam) ಮಾಡಿ ನೋಡಲೇಬೇಕು. ವಿಭಿನ್ನ ಸುವಾಸನೆ ನೀಡುವ ಈ ಸೊಪ್ಪಿನ ಅಡುಗೆ ನಿಮ್ಮ ದೇಹಕ್ಕೂ ಉಲ್ಲಾಸ ನೀಡುತ್ತದೆ. ಅಜೀರ್ಣ, ಶೀತಕ್ಕೂ ಮನೆಮದ್ದಾಗಿರುವ ದೊಡ್ಡಪತ್ರೆ ಸೊಪ್ಪಿನ ಸಿಂಪಲ್ ರಸಂ ರೆಸಿಪಿ ಇಲ್ಲಿದೆ.
Advertisement
ಬೇಕಾಗುವ ಪದಾರ್ಥಗಳು:
ದೊಡ್ಡ ಪತ್ರೆ ಎಲೆಗಳು – 10-15
ಟೊಮೆಟೊ – 1
ಸೀಳಿದ ಹಸಿರು ಮೆಣಸಿನಕಾಯಿ – 2
ನೆನೆಸಿದ ಹುಣಸೆಹಣ್ಣು – ಗೋಳಿ ಗಾತ್ರದಷ್ಟು
ಬೆಲ್ಲ – 1 ಟೀಸ್ಪೂನ್
ಅರಿಶಿನ ಪುಡಿ – ಕಾಲು ಟೀಸ್ಪೂನ್
ಹೆಚ್ಚಿದ ಕೊತ್ತಂಬರಿ ಸೊಪ್ಪು – 2 ಟೀಸ್ಪೂನ್
ಕರಿಬೇವಿನ ಎಲೆ – ಕೆಲವು
ಉಪ್ಪು – ರುಚಿಗೆ ತಕ್ಕಷ್ಟು
ಮಸಾಲೆ ತಯಾರಿಸಲು:
ತೊಗರಿ ಬೇಳೆ – ಒಂದೂವರೆ ಟೀಸ್ಪೂನ್
ಕೊತ್ತಂಬರಿ – 1 ಟೀಸ್ಪೂನ್
ಜೀರಿಗೆ – ಅರ್ಧ ಟೀಸ್ಪೂನ್
ಕರಿಮೆಣಸು – ಅರ್ಧ ಟೀಸ್ಪೂನ್
ಕೆಂಪು ಮೆಣಸಿನಕಾಯಿ – 2
ಒಗ್ಗರಣೆ ತಯಾರಿಸಲು:
ಎಣ್ಣೆ – 2 ಟೀಸ್ಪೂನ್
ಸಾಸಿವೆ – 1 ಟೀಸ್ಪೂನ್
ಹಿಂಗ್ – ಚಿಟಿಕೆ
ಕರಿಬೇವಿನ ಎಲೆ – ಕೆಲವು ಇದನ್ನೂ ಓದಿ: ರುಚಿಕರ, ಆರೋಗ್ಯಕರ ಊಟಕ್ಕಾಗಿ ಮಾಡಿ ಪಾಲಕ್ ದಾಲ್
Advertisement
Advertisement
ಮಾಡುವ ವಿಧಾನ:
* ಮೊದಲಿಗೆ ದೊಡ್ಡಪತ್ರೆ ಎಲೆಗಳನ್ನು ತೊಳೆದು, ಕತ್ತರಿಸಿಡಿ.
* ಒಂದು ಪಾತ್ರೆಯಲ್ಲಿ ಬೆಚ್ಚಗಿನ ನೀರು ತೆಗೆದುಕೊಂಡು, ಅದರಲ್ಲಿ ಕೆಲವು ನಿಮಿಷಗಳ ಕಾಲ ಟೊಮೆಟೊವನ್ನು ನೆನೆಸಿಡಿ. ಬಳಿಕ ತಣ್ಣಗಾಗಲು ಪಕ್ಕಕ್ಕಿಡಿ. ನೀವು ಬೇಕೆಂದರೆ ಟೊಮೆಟೊ ಸಿಪ್ಪೆಯನ್ನು ತೆಗೆಯಬಹುದು.
* ಈಗ ಒಂದು ಪಾತ್ರೆಯಲ್ಲಿ ನೀರು ಹಾಕಿ, ಹುಣಸೆ ಹಣ್ಣಿನ ರಸ ಹಾಗೂ ಸೀಳಿದ ಹಸಿರು ಮೆಣಸಿನ ಕಾಯಿ ಹಾಕಿ ಮಧ್ಯಮ ಉರಿಯಲ್ಲಿ ಕುದಿಯಲು ಇಡಿ.
* ಈ ನಡುವೆ ಒಂದು ಕಡಾಯಿಗೆ ಸ್ವಲ್ಪ ಎಣ್ಣೆ ಹಾಕಿ, ತೊಗರಿ ಬೇಳೆ, ಕೊತ್ತಂಬರಿ, ಜೀರಿಗೆ, ಕರಿಮೆಣಸು, ಹಾಗೂ ಕೆಂಪು ಮೆಣಸಿನಕಾಯಿ ಹಾಕಿ ಹುರಿದುಕೊಳ್ಳಿ.
* ಬೇಳೆ ಗೋಲ್ಡನ್ ಬ್ರೌನ್ ಬಣ್ಣ ಬಂದ ಬಳಿಕ ಕತ್ತರಿಸಿಟ್ಟಿದ್ದ ದೊಡ್ಡಪತ್ರೆ ಎಲೆಯನ್ನು ಹಾಕಿ ಸ್ವಲ್ಪ ಒಣಗುವವರೆಗೆ 2-3 ನಿಮಿಷ ಹುರಿಯಿರಿ.
* ಹುರಿದ ಮಸಾಲೆಯನ್ನು ಈಗ ಮಿಕ್ಸರ್ ಜಾರ್ಗೆ ವರ್ಗಾಯಿಸಿ, ಟೊಮೆಟೊವನ್ನು ಕತ್ತರಿಸಿ ಹಾಕಿ ಹಾಗೂ ಅರಿಶಿನ ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ.
* ಈಗ ರುಬ್ಬಿದ ಮಸಾಲೆಯನ್ನು ಕುದಿಯುತ್ತಿರುವ ಹುಣಸೆಹಣ್ಣಿನ ರಸಕ್ಕೆ ಹಾಕಿ.
* ಉಪ್ಪು, ಬೆಲ್ಲ, ಅಗತ್ಯಕ್ಕೆ ತಕ್ಕಂತೆ ನೀರು ಸೇರಿಸಿ, ಮಧ್ಯಮ ಉರಿಯಲ್ಲಿ ಕುದಿಯಲು ಬಿಡಿ.
* ರಸಂ ಚೆನ್ನಾಗಿ ಕುದಿದ ಬಳಿಕ ಕೊತ್ತಂಬರಿ ಸೊಪ್ಪು ಸೇರಿಸಿ ಉರಿಯನ್ನು ಆಫ್ ಮಾಡಿ.
* ಈಗ ಒಗ್ಗರಣೆ ತಯಾರಿಸಲು ಒಂದು ಸಣ್ಣ ಕಡಾಯಿ ತೆಗೆದುಕೊಂಡು ಅದಕ್ಕೆ ಎಣ್ಣೆ, ಸಾಸಿವೆ, ಹಿಂಗ್ ಕರಿಬೇವಿನ ಎಲೆ ಹಾಕಿ ಸಿಡಿಸಿ. ಬಳಿಕ ಇದನ್ನು ರಸಂಗೆ ಹಾಕಿ.
ಇದೀಗ ದೊಡ್ಡಪತ್ರೆ ಸೊಪ್ಪಿನ ರಸಂ ತಯಾರಾಗಿದ್ದು, ಬಿಸಿ ಬಿಸಿಯಾಗಿ ಅನ್ನದೊಂದಿಗೆ ಬಡಿಸಿ. ನೀವಿದನ್ನು ಸೂಪ್ನಂತೆಯೂ ಸೇವಿಸಬಹುದು. ಇದನ್ನೂ ಓದಿ: ಸುಲಭದ ಪಾಲಕ್ ಸೂಪ್ ಮಾಡಿ ರುಚಿ ನೋಡಿ
Advertisement
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k