ಚಿಕ್ಕಮಗಳೂರು: ತಾಲೂಕಿನ ವಿವಾದಿತ ಪ್ರದೇಶ ಎಂದೇ ಖ್ಯಾತಿಯಾಗಿರುವ ಇನಾಂ ದತ್ತಾತ್ರೇಯ ಬಾಬಾಬುಡನ್ ಗಿರಿ ಸ್ವಾಮಿ ದರ್ಗಾಕ್ಕೆ(Inam Dattatreya Baba Budan Giri Swamy Dargah) ಡ್ರೆಸ್ ಕೋಡ್ (Dress Code) ಜಾರಿಗೆ ತನ್ನಿ ಎಂದು ಸಯೈದ್ ಬುಡೇನ್ ಶಾ ಖಾದ್ರಿ ವಂಶಸ್ಥರು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದಾರೆ.
ಮುಸ್ಲಿಮರು (Muslims) ಈ ಜಾಗ ನಮ್ಮದು ಅಂದರೆ ಹಿಂದೂಗಳು (Hindu) ನಮ್ಮದು ಅಂತಾರೆ. ಅದರ ಉಮೇದುವಾರಿಕೆಗಾಗಿ 3 ದಶಕಗಳಿಂದ ಹೋರಾಟ ನಡೆಯುತ್ತಲೇ ಇದೆ. ಆ ಹೋರಾಟದ ಮಧ್ಯೆಯೂ ಮುಸ್ಲಿಂ ಸಂಘಟನೆಗಳು ದತ್ತಪೀಠದಲ್ಲಿ ಡ್ರೆಸ್ ಕೋಡ್ ಜೊತೆಗೆ ಹೆಸರು ಬದಲಾವಣೆ ಮಾಡುವಂತೆ ಮನವಿ ಸಲ್ಲಿಸಿವೆ.
ದತ್ತಪೀಠದಲ್ಲಿ ಡ್ರೆಸ್ ಕೋಡ್ ಜಾರಿಗೆ ತರುವುದರ ಜೊತೆ ರಸ್ತೆಯುದ್ಧಕ್ಕೂ ಇರುವ ದತ್ತಪೀಠ ನಾಮಫಲಕಗಳ ಬದಲಾಗಿ ಗೆಜೆಟೆಡ್ ದಾಖಲೆಯಂತೆ ಇನಾಂ ದತ್ರಾತ್ರೇಯ ಬಾಡಾಬುಡನ್ ಸ್ವಾಮಿ ದರ್ಗಾ ಎಂದು ಬದಲಿಸಬೇಕು. ಬಿಜೆಪಿ ಸರ್ಕಾರ (BJP Government) ದರ್ಗಾವನ್ನು ಮಾಯಮಾಡಿದೆ ಎಂದು ದೂರಿದ್ದಾರೆ.
ದತ್ತಪೀಠಕ್ಕೆ ವರ್ಷಪೂರ್ತಿ ಪ್ರವಾಸಿಗರು ಬರುತ್ತಾರೆ. ನಿರ್ಬಂಧ ಹೊರತುಪಡಿಸಿ ದತ್ತಪೀಠಕ್ಕೆ ಪ್ರವಾಸಿಗರಿಲ್ಲದ ದಿನವೇ ಇಲ್ಲ. ಇಲ್ಲಿನ ಪ್ರಕೃತಿ ಸೌಂದರ್ಯ ಸವಿಯಲು ಬರುವವರು ಭಕ್ತಿ-ಭಾವದಿಂದ ಬರುವವರು ಇಬ್ಬರು ಸಮನಾಗಿದ್ದಾರೆ.
ಇನಾಂ ದತ್ತಾತ್ರೇಯ ಬಾಬಾಬುಡನ್ ಗಿರಿ ಸ್ವಾಮಿ ದರ್ಗಾ ಪವಿತ್ರವಾದ ಸ್ಥಳ. ಅಲ್ಲಿ ಆರಂಭದಲ್ಲಿ ಹೇಗೆ ಭಾರತೀಯ ಸಾಂಪ್ರಾದಾಯಿಕ ಉಡುಗೆ-ತೊಡುಗೆ ಹಾಕಿಕೊಂಡು ಹೋಗುತ್ತಿದ್ದರೋ ಈಗಲೂ ಅದೇ ರೀತಿ ಡ್ರೆಸ್ ಕೋಡ್ ಜಾರಿಗೆ ತರುವಂತೆ ಶಾಖಾದ್ರಿ ವಂಶಸ್ಥರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಅವರ ಉಡುಗೆ ಅವರ ಸ್ವಾತಂತ್ರ್ಯ. ಆದರೆ ಇಲ್ಲಿಗೆ ಬರುವಾಗ ಸೀರೆ-ಚೂಡಿ-ಬುರ್ಖಾ-ಕುರ್ತಾ ಇರಲೆಂದು ಮನವಿ ಮಾಡಿದ್ದಾರೆ. ಅಲ್ಲಿ ದರ್ಗಾ, ಗೋರಿ, ಮಸೀದಿ, ದೇವರು ಎಲ್ಲಾ ಇದ್ದಾರೆ. ಅಲ್ಲಿ ಆಧುನಿಕ ಡ್ರೆಸ್ ಹಾಕಿಕೊಂಡು ಬರುವುದು ಎಷ್ಟು ಸರಿ ಎಂದು ಸರ್ಕಾರಕ್ಕೆ ಡ್ರೆಸ್‍ಕೋಡ್ ಜಾರಿ ಮಾಡುವಂತೆ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಕರ್ನಾಟಕದ ಅಯೋಧ್ಯೆ ಎಂದೇ ಖ್ಯಾತಿಯಾಗಿರೋ ಕಾಫಿನಾಡ ದತ್ತಪೀಠದ ಇತಿಹಾಸ ಏನು ಗೊತ್ತಾ?
ಶಾಖಾದ್ರಿ ವಂಶಸ್ಥರು ದತ್ತಪೀಠದ ಹೆಸರನ್ನೂ ಬದಲಿಸುವಂತೆ ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ. ಗೆಜೆಟೆಡ್ ದಾಖಲೆಗಳಲ್ಲಿ ದತ್ತಪೀಠದ ಹೆಸರು ಇನಾಂ ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾ ಎಂದು ಇದೆ. ಆದರೆ ಪ್ರವಾಸೋದ್ಯಮ ಇಲಾಖೆಯ ನಾಮಫಲಕಗಳಲ್ಲಿ ದತ್ತಪೀಠ ಎಂದು ಇದೆ. ಆದರೆ ಇನಾಂ ದತ್ತಾತ್ರೇಯ ಪೀಠ ಗ್ರಾಮದ ಹೆಸರು. 1991ರ ಕೋರ್ಟ್ ತೀರ್ಪೀನಲ್ಲಿ ದತ್ತಾತ್ರೇಯ 1, ದತ್ತಾತ್ರೇಯ 2 ಎಂದು ಹಳ್ಳಿಗಳಿದೆ. ಆ ಹಳ್ಳಿಗಳಿಗೆ ದತ್ತಾತ್ರೇಯ ಪೀಠ ಎಂದು ಹೆಸರು ಕೊಟ್ಟಿದ್ದಾರೆ. ಆದರೆ ಇತ್ತೀಚೆಗೆ ಅಲ್ಲಿ ದರ್ಗಾ ಹೆಸರೇ ಇಲ್ಲ. ಹಾಗಾಗಿ ದರ್ಗಾದ ಹೆಸರನ್ನೂ ಅಲ್ಲಿ ಹಾಕಬೇಕು ಎಂದು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ.
ಗೆಜೆಟೆಡ್ ದಾಖಲೆಗಳಲ್ಲಿ ಇನಾಂ ದತ್ತಾತ್ರೇಯ ಬಾಬಾಬುಡನ್ ಗಿರಿ ಸ್ವಾಮಿ ದರ್ಗಾ ಎಂದು ಇದೆ. ಅದೇ ಹೆಸರು ಇರಬೇಕು ಎಂದು ಹೇಳಿದ್ದಾರೆ. ಅದು ಗ್ರಾಮವಾಗಬೇಕು. ಇಲ್ಲ ದರ್ಗಾ ಅಂತ ಇರಬೇಕು. ಗ್ರಾಮ ಬೇಕಾದವರು ಗ್ರಾಮಕ್ಕೆ ಹೋಗುತ್ತಾರೆ. ದರ್ಗಾ ಬೇಕಾದವರು ದರ್ಗಾಕ್ಕೆ ಹೋಗುತ್ತಾರೆ. ಅದು ಬಾಬಾಬುಡನ್ ಗಿರಿ ದರ್ಗಾ ಅಂತ ಇತ್ತು. ಆದರೆ ಹಿಂದಿನ ಬಿಜೆಪಿ ಸರ್ಕಾರ ಅದರ ಹೆಸರನ್ನು ಬದಲಿಸಿದೆ ಎಂದು ಹಿಂದಿನ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.