ಸಾಮಾನ್ಯವಾಗಿ ಯಾವುದೇ ಹಬ್ಬಬಂತೆಂದರೂ ಸಿಹಿ ಇರಲೇಬೇಕು. ಹಿಂದೂ ಹಬ್ಬಗಳಲ್ಲಿ ಯಾವುದೇ ಹಬ್ಬವಿದ್ದರೂ ಸಿಹಿ ತಿನಿಸುಗಳು ಇದ್ದೇ ಇರುತ್ತವೆ. ಹಾಗೆಯೇ ರಂಜಾನ್ ಹಬ್ಬದ (Ramadan Festival) ಸಂದರ್ಭದಲ್ಲಿ ಸುರಕುಂಭ (Surkumbha) ಅಥವಾ ಶೀರ್ ಕೂರ್ಮ (Sheer Kurma) ಎಂದು ಕರೆಯಲಾಗುವ ಪಾಯಸದ ರೀತಿಯಲ್ಲಿ ಮಾಡಲಾಗುತ್ತದೆ. ಮನೆಯಲ್ಲಿ ನೀವು ಸುಲಭವಾಗಿ ಸುರಕುಂಭ ಮಾಡುವ ವಿಧಾನ ಇಲ್ಲಿದೆ.
ಬೇಕಾಗುವ ಸಾಮಗ್ರಿಗಳು:
- Advertisement -
- ಹಾಲು
- ಶ್ಯಾವಿಗೆ
- ಸಕ್ಕರೆ
- ಬಾದಾಮಿ
- ಪಿಸ್ತಾ
- ಏಲಕ್ಕಿ ಪುಡಿ
- ತುಪ್ಪ
- ಗೋಡಂಬಿ
- ವಾಲ್ ನಟ್ಸ್
- ಕಲ್ಲಂಗಡಿ ಬೀಜ, ಇನ್ನಿತರೆ ಡ್ರೈ ಫ್ರೂಟ್ಸ್ ಗಳನ್ನು ಬಳಸಬಹುದು.
ಮಾಡುವ ವಿಧಾನ
ನೀವು ಬಳಸುವ ಎಲ್ಲಾ ಡ್ರೈ ಫ್ರುಟ್ಸ್ ಗಳನ್ನು ಮೊದಲು ನೀರಿನಲ್ಲಿ ಹಾಕಿ, 4 ಗಂಟೆಗಳ ಕಾಲ ಇಡಬೇಕು. ಬಳಿಕ ಅವುಗಳ ಸಿಪ್ಪೆ ಸುಲಿದು ಚಿಕ್ಕದಾಗಿ ಕತ್ತರಿಸಿಕೊಳ್ಳಬೇಕು. ಅಥವಾ ತಕ್ಷಣವಾಗಿ ಮಾಡಬೇಕು ಅಂತಿದ್ದರೆ ಬಳಸುವ ಎಲ್ಲಾ ಡ್ರೈ ಫ್ರುಟ್ಸ್ ಗಳನ್ನು ಕುಡಿಯುವ ನೀರಿನಲ್ಲಿ ಹಾಕಿ ೨ ನಿಮಿಷಗಳ ಕಾಲ ಕುದಿಸಬೇಕು, ಬಳಿಕ ಅವುಗಳ ಸಿಪ್ಪೆ ಸುಲಿದು ಚಿಕ್ಕದಾಗಿ ಕತ್ತರಿಸಿಕೊಳ್ಳಬಹುದು
- Advertisement -
ಮೊದಲು ಒಂದು ಪಾತ್ರೆಗೆ ಹಾಲು ಹಾಕಿ ಕಾಯಿಸಲು ಇಡಬೇಕು. ಬಳಿಕ ಸಂಪೂರ್ಣ ಕಾಯ್ದ ನಂತರ 10 ನಿಮಿಷ ಹಾಲನ್ನು ಆರಲು ಬಿಡಬೇಕು. ಬಳಿಕ ಒಂದು ಪಾತ್ರೆಗೆ ತುಪ್ಪವನ್ನು ಬಿಸಿ ಮಾಡಲು ಇಟ್ಟು, ಒಂದೊಂದಾಗಿ ಡ್ರೈ ಫ್ರೂಟ್ಸ್ ಹಾಗೂ ಶ್ಯಾವಿಗೆಯನ್ನು ಹುರಿದುಕೊಳ್ಳಬೇಕು.
- Advertisement -
ಬಳಿಕ ಇನ್ನೊಂದು ಪಾತ್ರೆಗೆ ತುಪ್ಪ ಹಾಕಬೇಕು. ತುಪ್ಪ ಕಾಯ್ದ ನಂತರ ಅದಕ್ಕೆ ಸ್ವಲ್ಪ ನೀರು ಹಾಕಿಕೊಳ್ಳಬೇಕು. ಅದಕ್ಕೆ ರುಚಿಗೆ ತಕ್ಕಷ್ಟು ಸಕ್ಕರೆಯನ್ನು ಹಾಕಿ, ಕರಗುವ ತನಕ ಬಿಡಬೇಕು. ಸಕ್ಕರೆ ಕುದಿಯಲು ಶುರು ಮಾಡಿದಾಗ ಹುರಿದಿಟ್ಟುಕೊಂಡಂತಹ ಡ್ರೈ ಫ್ರೂಟ್ಸ್ ಗಳನ್ನು ನೀರಿಗೆ ಹಾಕಬೇಕು. ಬಳಿಕ ಇದಕ್ಕೆ ಶ್ಯಾವಿಗೆ ಹಾಕಬೇಕು. ಎಲ್ಲವೂ ಸಂಪೂರ್ಣವಾಗಿ ಮಿಶ್ರಣಗೊಂಡ ನಂತರ ಅದಕ್ಕೆ ಹಾಲನ್ನು ಹಾಕಿ ಚೆನ್ನಾಗಿ ಕುದಿಯಲು ಬಿಡಬೇಕು. ಈಗ ಬಿಸಿ ಬಿಸಿಯಾದ ಸುರಕುಂಭ ತಯಾರಾಗುತ್ತದೆ.