ಮಂಡ್ಯ: ಇಂದು ಉತ್ತರಾಯನಕ್ಕೆ ಸೂರ್ಯ ಪಥ ಬದಲಿಸಿದ ಹಿನ್ನೆಲೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ದಕ್ಷಿಣ ಕಾವೇರಿ ತೀರದಲ್ಲಿರುವ ಚಂದ್ರಮೌಳೇಶ್ವರ ದೇವಸ್ಥಾನದ ಶಿವಲಿಂಗದ ಮೇಲೆ ಸೂರ್ಯ ರಶ್ಮಿ ಸ್ಪರ್ಶ ಮಾಡಿತು.
ಬೆಳಗ್ಗೆ 7.10ರ ವೇಳೆಗೆ ಸೂರ್ಯ ರಶ್ಮಿ ಶಿವಲಿಂಗದ ಮೇಲೆ ಸ್ಪರ್ಶಿಸಿದ್ದು, ಈ ದೃಶ್ಯವನ್ನು ಸಾವಿರಾರು ಮಂದಿ ಭಕ್ತರು ಕಣ್ತುಂಬಿಕೊಂಡರು. ಇಂದು ಸೂರ್ಯ ರಶ್ಮಿ ಸ್ಪರ್ಶ ಹಿನ್ನೆಲೆ ಮುಂಜಾನ ಮೂರು ಗಂಟೆಯಿಂದ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಗಿತ್ತು.
Advertisement
Advertisement
ನಂತರ ಬೆಳಗ್ಗೆ 7.10ಕ್ಕೆ ಸೂರ್ಯ ರಶ್ಮಿ ಸ್ಪರ್ಶವಾಗಿದ್ದು, ಸುಮಾರು ಎರಡು ನಿಮಿಷಗಳ ಕಾಲ ಸೂರ್ಯ ರಶ್ಮಿ ಶಿವಲಿಂಗದ ಮೇಲೆ ಇತ್ತು. ನಂತರ ಚಂದ್ರವನ ಆಶ್ರಮ ಪೀಠಾಧ್ಯಕ್ಷ ತ್ರೀನೇತ್ರ ಮಹಂತ ಶಿವಯೋಗಿ ಸ್ವಾಮೀಜಿ ಅವರ ನೇತೃತ್ವದಲ್ಲಿ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು. ದೇವಸ್ಥಾನಕ್ಕೆ ಬಂದಿದ್ದ ಭಕ್ತರಿಗೆ ಎಳ್ಳು ಬೆಲ್ಲ ನೀಡಿ ಶುಭವಾಗಲೆಂದು ಸ್ವಾಮೀಜಿಗಳು ಆಶೀರ್ವಾದ ಮಾಡಿದರು. ಬಳಿಕ ಗೋ ಪೂಜೆ ಮಾಡುವ ಮೂಲಕ ರಾಸುಗಳ ಏಳಿಗೆಗಾಗಿ ಬಸವಣ್ಣನಲ್ಲಿ ಪ್ರಾರ್ಥನೆ ಮಾಡಿದರು.