ಗದಗ: ಮುದ್ರಣ ಕಾಶಿ ಗದಗ್‌ನಲ್ಲಿ (Gadag) ಮಂಗಳವಾರ ಸಂಕ್ರಾಂತಿ ಸಡಗರ ಕಳೆಗಟ್ಟಿತ್ತು. ಬಿಂಕದಕಟ್ಟಿ ಬಳಿಯ ಸಾಲುಮರದ ತಿಮ್ಮಕ್ಕ (Saalumarada Thimmakka) ಸಸ್ಯೋದ್ಯಾನಕ್ಕೆ ಬೆಳಿಗ್ಗೆಯಿಂದಲೇ ಪ್ರವಾಸಿಗರು ಪಾರ್ಕ್‌ಗೆ ದೌಡಾಯಿಸುತ್ತಿದ್ದರು.
ಸಾಲು ಸಾಲು ವೃಕ್ಷಗಳ ಉದ್ಯಾನವನದಲ್ಲಿ ಕುಳಿತು ಒಂದಿಷ್ಟು ಹರಟೆ ಹೊಡೆಯುತ್ತಾ, ತಮ್ಮ ಮಕ್ಕಳು, ಮೊಮ್ಮಕ್ಕಳನ್ನು ಆಟವವಾಡಿಸುತ್ತಾ ಹಬ್ಬದ ಸಂಭ್ರಮದ ಖುಷಿ ಪಟ್ಟರು. ಇದನ್ನೂ ಓದಿ: ಗವಿಗಂಗಾಧರನಿಗೆ ಸೂರ್ಯ ಪೂಜೆ ಆಗಿದೆ: ಸೋಮಸುಂದರ್ ದೀಕ್ಷಿತ್
Advertisement
Advertisement
Advertisement
ಪಾರ್ಕ್‌ನಲ್ಲಿ ವಿಶೇಷವಾಗಿ ಸಾಹಸಮಯ ಕ್ರೀಡೆಗಳನ್ನು ಆಡುವುದಕ್ಕೆ ಅವಕಾಶವಿದ್ದು, ದೊಡ್ಡವರು, ಚಿಕ್ಕವರು ಎನ್ನದೇ ಕುಟುಂಬದ ಸದಸ್ಯರೆಲ್ಲರೂ ತಮ್ಮ ಎಲ್ಲ ಒತ್ತಡದ ಬದುಕನ್ನ ಮರೆತು ಸಂಕ್ರಾಂತಿ ನೆಪದಲ್ಲಿ ಕೆಲಹೊತ್ತು ಸಂಭ್ರಮಿಸಿದರು.
Advertisement
ಸಂಕ್ರಾತಿ ಹಬ್ಬದ ನಿಮಿತ್ತ ವಿವಿಧ ಖಾದ್ಯಗಳನ್ನು ತಯಾರಿಸಿಕೊಂಡು ಬಂದು, ಮನೆಮಂದಿಯೆಲ್ಲಾ ವೃಕ್ಷಗಳ ಮಧ್ಯೆ ಕೂತು, ಎಲ್ಲರೂ ಊಟ ಮಾಡಿ ಸಂತಸ ಪಟ್ಟರು.
ಭಾರತೀಯ ಸಂಸ್ಕೃತಿ ಪರಂಪರೆಯಲ್ಲಿ ಪ್ರತಿ ಹಬ್ಬಕ್ಕೆ ತನ್ನದೇ ಆದ ಮಹತ್ವವಿದ್ದು, ವರ್ಷದ ಮೊದಲ ಹಬ್ಬವನ್ನ ಜಿಲ್ಲೆಯ ಜನರು ಅತ್ಯಂತ, ಸಡಗರ ಸಂಭ್ರಮದಿಂದ ಆಚರಿಸಿದರು.