ಚಿಕ್ಕಬಳ್ಳಾಪುರ: ಮಕರ ಸಂಕ್ರಾತಿಯ ಶುಭದಿನದಂದು ಆವಲಗುರ್ಕಿ ಬಳಿ ಇಶಾ ಫೌಂಡೇಶನ್ (Isha Foundation) ವತಿಯಿಂದ ನಿರ್ಮಾಣಗೊಂಡಿದ್ದ 112 ಅಡಿ ಎತ್ತರದ ಆದಿಯೋಗಿಯ (Adiyogi) ಪ್ರತಿಮೆಯನ್ನು ಸಿಎಂ ಬಸವರಾಜ ಬೊಮ್ಮಾಯಿ (CM Basavaaj Bommai) ಅನಾವರಣಗೊಳಿಸಿದ್ದಾರೆ.
Advertisement
ಈ ಆದಿಯೋಗಿಯ ಮುಖ ಪ್ರತಿಮೆಯು ಕೊಯಮತ್ತೂರಿನ ಈಶ ಯೋಗ ಕೇಂದ್ರದ ಪ್ರತಿರೂಪವಾಗಿದೆ. ಅನಾವರಣದ ನಂತರ ʼಆದಿಯೋಗಿ ದಿವ್ಯ ದರ್ಶನಂʼ ಹೆಸರಿನಲ್ಲಿ 112 ಅಡಿ ಆದಿಯೋಗಿಯ ಮೇಲೆ 14 ನಿಮಿಷಗಳ ವಿಶಿಷ್ಟ ಬೆಳಕು ಮತ್ತು ಧ್ವನಿ ಪ್ರದರ್ಶನ ನಡೆಯಿತು. ಈ ಕಾರ್ಯಕ್ರಮದಲ್ಲಿ ಬೊಮ್ಮಾಯಿ ಜೊತೆಗೆ ಸಚಿವ ಸುಧಾಕರ್ ಮತ್ತು ನಾಗೇಶ್ ಪಾಲ್ಗೊಂಡಿದ್ದರು.
Advertisement
ಆದಿಯೋಗಿಯ ಅನಾವರಣಕ್ಕೆ ಸಾವಿರಾರು ಮಂದಿ ಸಾಕ್ಷಿಯಾದರು. ಕಳೆದ ವರ್ಷ ಅಕ್ಟೋಬರ್ 09 ರಂದು ನಾಗಪ್ರತಿಷ್ಟೆಯನ್ನು ಸದ್ಗುರು ಜಗ್ಗಿ ವಾಸುದೇವ್ ನೆರವೇರಿಸಿದ್ದರು. ಆದಿಯೋಗಿಗೆ ಮಹಾ ಮಂಗಳಾರತಿಯ ನೃತ್ಯ, ಕೇರಳದ ತೆಯ್ಯಂ ಬೆಂಕಿ ನೃತ್ಯ, ಹಾಗೂ ಜಗ್ಗಿ ವಾಸುದೇವ್ ಅವರ ಪುತ್ರಿಯ ಭರತನಾಟ್ಯ ಎಲ್ಲರ ಮನಸೊರೆಗೊಂಡಿತ್ತು
Advertisement
#Adiyogi offers All the Possibility of becoming a Conscious response to Life & creating a #ConsciousPlanet. The Future belongs to those who strive to become a Responsible & Responsive solution in the world. May you know this Joy & the Grace of Adiyogi. Love & Blessings. -Sg pic.twitter.com/Z6a76iyYov
— Sadhguru (@SadhguruJV) January 15, 2023
Advertisement
ಭಾರತ ಸರ್ಕಾರದ ಪ್ರವಾಸೋದ್ಯಮ ಸಚಿವಾಲಯವು ಕೊಯಮತ್ತೂರಿನ ಇಶಾ ಯೋಗ ಕೇಂದ್ರದಲ್ಲಿ ಯೋಗದ ಮೂಲವಾದ ಆದಿಯೋಗಿಯ 112-ಅಡಿ ಪ್ರತಿಮಾರೂಪದ ಚಿತ್ರವನ್ನು ‘ಇನ್‌ಕ್ರೆಡಿಬಲ್ ಇಂಡಿಯಾ’ ತಾಣವೆಂದು ಪಟ್ಟಿ ಮಾಡಿದೆ. ಈ ಪ್ರತಿಮೆಯು ಗಿನ್ನೆಸ್ ವಿಶ್ವ ದಾಖಲೆಗಳಿಂದ ವಿಶ್ವದ ‘ಅತಿದೊಡ್ಡ ಬಸ್ಟ್ ಶಿಲ್ಪ’ ಎಂದು ಗುರುತಿಸಲ್ಪಟ್ಟಿದೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k