ಕೊಪ್ಪಳ: ಜಿಲ್ಲೆಯ ಹುಲಿಗಿ ಗ್ರಾಮದ ಹುಲಿಗೆಮ್ಮ ದೇವಿ (Hulegemma Devi) ದೇವಸ್ಥಾನ ಹಾಗೂ ಗಂಗಾವತಿ ತಾಲೂಕು ತಳವಾರಘಟ್ಟ, ಆನೆಗೊಂದಿ ಗ್ರಾಮದ ಸಮೀಪದಲ್ಲಿ ಹರಿಯುವ ತುಂಗಭದ್ರಾ ನದಿಯಲ್ಲಿ (Tungabhadra) ಲಕ್ಷಾಂತರ ಜನರು ಪುಣ್ಯ ಸ್ನಾನ ಮಾಡಿದರು. ನದಿ ಸ್ನಾನ ಮುಗಿಸಿಕೊಂಡು, ದೇವಸ್ಥಾನಕ್ಕೆ ತೆರಳಿ ದೇವರ ದರ್ಶನ ಪಡೆದರು.
ಮನೆಯಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಮಕರ ಸಂಕ್ರಾಂತಿ ಆಚರಣೆ ಮಾಡಿದರು. ಇನ್ನು ಜಿಲ್ಲಾದ್ಯಂತ ನಗರ ಮತ್ತು ಗ್ರಾಮೀಣ ಭಾಗದಲ್ಲಿ ಮಹಿಳೆಯರು ಮಕ್ಕಳು ಬೆಳಗ್ಗೆಯಿಂದಲೇ ಹೊಸ ಬಟ್ಟೆ ಧರಿಸಿ, ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು. ಮನೆಯ ಮುಂದೆ ರಂಗೋಲಿ ಬಿಡಿಸಿ, ಸೂರ್ಯ ಪಥ ಬದಲಿಸುವ ಹಬ್ಬಕ್ಕೆ ಶುಭಾಶಯ ಕೋರಿದ್ದು ಕಂಡುಬಂತು. ಮಹಿಳೆಯರು ಎಳ್ಳು ಹಚ್ಚಿದ ರೊಟ್ಟಿ ಸೇರಿ ನಾನಾ ಖಾದ್ಯ ಪರಸ್ಪರ ವಿನಿಮಯ ಮಾಡಿಕೊಂಡರೆ, ಮಕ್ಕಳು ಎಳ್ಳು-ಬೆಲ್ಲ ಹಂಚಿ ಶುಭ ಕೋರಿದರು. ಇದನ್ನೂ ಓದಿ:ಗ್ಯಾಮ್ಲಿಂಗ್‌ನಲ್ಲಿ ಹಣ ಕಳೆದುಕೊಂಡೆ, 3 ವರ್ಷಗಳಿಂದ ಮನೆಯಿಂದಾಚೆಯಿದ್ದೀನಿ, ಇವರಿಂದ ಬದುಕೋಕೆ ಆಗ್ತಿಲ್ಲ: ಸಮೃದ್ಧಿ ರಾಮ್ ಕಣ್ಣೀರು
ಪುಣ್ಯಸ್ನಾನ ಮಾಡಿ, ಅಂಜನಾದ್ರಿ ದರ್ಶನ:
ಗಂಗಾವತಿ ನಗರ ಸೇರಿ ತಾಲೂಕಾದ್ಯಂತ ಸಂಕ್ರಾಂತಿ ಸಂಭ್ರಮದಿಂದ ಆಚರಿಸಲಾಯಿತು. ಅನೇಕರು ಕುಟುಂಬ ಸಮೇತ ತಾಲೂಕಿನ ಆನೆಗೊಂದಿ, ಚಿಂತಾಮಣಿ, ತಳವಾರಗಟ್ಟ, ನವಬೃಂದಾವನ, ಹನುಮನಹಳ್ಳಿ, ಹಂಪಿ ಸೇರಿ ನಾನಾಕಡೆ ಹರಿಯುವ ತುಂಗಭದ್ರಾ ನದಿಗೆ ಹೋಗಿ ನದಿಯಲ್ಲಿ ಪುಣ್ಯಸ್ನಾನ ಮಾಡಿದರು. ಗಂಗೆಗೆ ವಿಶೇಷ ಪೂಜೆ ಸಲ್ಲಿಸಿ, ಅಲ್ಲಿಯೇ ಸಾಮೂಹಿಕ ಭೋಜನ ಮಾಡುವ ಮೂಲಕ ಸಂಭ್ರಮಿಸಿದರು.
ಸಿಬ್ಬಂದಿ ನಿಯೋಜನೆ:
ಜಿಲ್ಲೆ ಮಾತ್ರವಲ್ಲದೇ ನೆರೆ ಜಿಲ್ಲೆಯಿಂದಲೂ ತುಂಗಭದ್ರಾ ನಂದಿ ಸ್ನಾನಕ್ಕೆ ಹುಲಗಿ, ಆನೆಗೊಂದಿ, ಹನುಮನಹಳ್ಳಿ ಗ್ರಾಮ ಸಮೀಪದ ತುಂಗಭದ್ರಾ ನದಿಗೆ ಆಗಮಿಸಿದ್ದರು. ನದಿ ಸ್ನಾನ ಮಾಡುವಾಗ ಅಹಿತಕರ ಘಟನೆ ನಡೆಯದಂತೆ ತಡೆಯಲು ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿತ್ತು. ರಸ್ತೆಯಲ್ಲಿ ಟ್ರಾಫಿಕ್ ಸಮಸ್ಯೆ ಕಂಡು ಬರಬಾರದು ಎಂಬ ಉದ್ದೇಶದಿಂದ ಹನುಮನಹಳ್ಳಿ ಖುಷಿಮುಖ ಪರ್ವತ, ಆನೆಗೊಂದಿಯ ಚಿಂತಾಮಣಿ, ಅಂಜನಾದ್ರಿ ಪರ್ವತ, ನವಬೃಂದಾವನ ಸೇರಿದಂತೆ ನಾನಾ ಕಡೆ ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಯಿತು. ಇದನ್ನೂ ಓದಿ: ಮೋಸ ಮಾಡಿದವ್ರು ಉದ್ಧಾರ ಆಗಲ್ಲ – ಸಮೃದ್ಧಿ ರಾಮ್ ವಿರುದ್ಧ ಪ್ರತಿಭಾ ಶೆಟ್ಟಿ ಗರಂ

