ರಾಯ್‍ಪುರ: ಛತ್ತೀಸ್‍ಗಢ ಚುನಾವಣೆಗೆ ಬೆರಳಣಿಕೆ ದಿನಗಳು ಅಷ್ಟೇ ಬಾಕಿ ಉಳಿದಿದ್ದು, ಕಾಂಗ್ರೆಸ್ ಬಿಗ್ ಶಾಕ್‍ಗೆ ಸಿಲುಕಿಕೊಂಡಿದೆ. ರಾಜ್ಯ ಕಾಂಗ್ರೆಸ್ ಕಾರ್ಯಾಧ್ಯಕ್ಷ ರಾಮದಯಾಳ್ ಅವರು ಪಕ್ಷ ತೊರೆದು ಬಿಜೆಪಿ ಸೇರ್ಪಡೆಯಾಗಿದ್ದಾರೆ.
ಬಿಸ್ಲಾಪುರ್ ದಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹಾಗೂ ಛತ್ತೀಸ್‍ಗಢ ಮುಖ್ಯಮಂತ್ರಿ ರಮಣ್ ಸಿಂಗ್ ನೇತೃತ್ವದಲ್ಲಿ ಇಂದು ರಾಮದಯಾಳ್ ಅವರು ಬಿಜೆಪಿ ಸೇರಿಕೊಂಡಿದ್ದಾರೆ.
Advertisement
ಕಾಂಗ್ರೆಸ್ ಬುಡಕಟ್ಟು ಜನಾಂಗವನ್ನು ಕಡೆಗಣಿಸುತ್ತಿದೆ. ಇದರಿಂದಾಗಿ ನನಗೆ ಪಕ್ಷದ ಬಗ್ಗೆ ಬೇಸರ ಉಂಟಾಗಿತ್ತು. ಇತ್ತ ಸಿಎಂ ರಮಣ್ ಸಿಂಗ್ ಅವರು ಬುಡಕಟ್ಟು ಜನರ ಕ್ಷೇಮಾಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಅವರ ಕಾರ್ಯದಿಂದ ಪ್ರೇರಣೆಯಾಗಿ ನಾನು ಬಿಜೆಪಿ ಸೇರ್ಪಡೆಯಾಗಿರುವೆ ಎಂದು ರಾಮದಯಾಳ್ ಹೇಳಿದ್ದಾರೆ. ಇದನ್ನು ಓದಿ: ಟೈಮ್ಸ್ ನೌ ಸಮೀಕ್ಷೆ – ರಾಜಸ್ಥಾನದಲ್ಲಿ ಕೈ, ಮಧ್ಯಪ್ರದೇಶ, ಛತ್ತೀಸ್‍ಗಢದ ಮತ್ತೆ ಅರಳಲಿದೆ ಕಮಲ
Advertisement
Congress Chhattisgarh working president and Pali-Tanakhar MLA, Ramdayal Uike joined BJP in presence of Amit Shah and CM Dr.Raman Singh pic.twitter.com/m2MuwrTraO
— ANI (@ANI) October 13, 2018
Advertisement
ಪಾಲಿ ವಿಧಾನಸಭಾ ಕ್ಷೇತ್ರದಿಂದ ನಾಲ್ಕು ಬಾರಿ ರಾಮದಯಾಳ್ ಉಕೆ ಅವರು ಆಯ್ಕೆಯಾಗಿದ್ದಾರೆ. ಅವರ ದಿಢೀರ್ ನಿರ್ಧಾರದಿಂದ ಕಾಂಗ್ರೆಸ್ ರಾಜ್ಯ ಕಾರ್ಯಾಧ್ಯಕ್ಷರ ಸ್ಥಾನ ಖಾಲಿ ಉಳಿದಿದ್ದು, ಯಾವುದೇ ನಾಯಕರನ್ನು ನೇಮಕ ಮಾಡಿಲ್ಲ. ಛತ್ತೀಸ್‍ಗಢದಲ್ಲಿ ನವೆಂಬರ್ 20 ರಂದು ಚುನಾವಣೆ ನಡೆಯಲಿದ್ದು ಹೀಗಾಗಿ ಶೀಘ್ರವೇ ನೂತನ ಅಧ್ಯಕ್ಷರನ್ನು ರಾಹುಲ್ ಗಾಂಧಿ ನೇಮಿಸಲಿದ್ದಾರೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv