ಕನ್ನಡಿಗರೇ ಆಗಿ ಹೋಗಿದ್ದ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಬದುಕಿನ ಕುರಿತಾಗಿ ‘ಮೇಜರ್’ ಸಿನಿಮಾ ದೇಶಾದ್ಯಂತ ಬಿಡುಗಡೆ ಆಗಿದೆ. ತಮಿಳು, ತೆಲುಗು ಮತ್ತು ಹಿಂದಿ ಭಾಷೆಗಳಲ್ಲಿ ಈ ಸಿನಿಮಾ ಲೀಸ್ ಆಗಿದ್ದು, ಕನ್ನಡಕ್ಕೆ ಡಬ್ ಮಾಡದೇ ತಮಿಳಿನಲ್ಲೇ ಈ ಚಿತ್ರವನ್ನು ರಿಲೀಸ್ ಮಾಡಲಾಗಿದೆ. ಹಾಗಾಗಿ ಕನ್ನಡದಲ್ಲೂ ಈ ಸಿನಿಮಾ ರಿಲೀಸ್ ಆಗಲಿ ಎಂದು ಅಭಿಮಾನಿಗಳು ಒತ್ತಾಯಿಸಿದ್ದಾರೆ.
Advertisement
ಬೆಂಗಳೂರಿನಲ್ಲೇ ಬಾಳಿ ಬದುಕಿ, ಕೊನೆಗೆ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಹುತಾತ್ಮರಾದಾಗಲೂ ಅವರ ಸಮಾಧಿಯನ್ನು ಬೆಂಗಳೂರಿನಲ್ಲೇ ಮಾಡಲಾಗಿದೆ. ಈ ಹೊತ್ತಿಗೂ ಸಂದೀಪ್ ಅವರ ಕುಟುಂಬ ಬೆಂಗಳೂರಿನಲ್ಲೇ ನೆಲೆಯೂರಿದೆ. ಕನ್ನಡಿಗರ ನೆಚ್ಚಿನ ಮೇಜರ್ ಆಗಿದ್ದ ಸಂದೀಪ್ ಅವರ ಸಿನಿಮಾವನ್ನು ಕನ್ನಡ ಭಾಷೆಯಲ್ಲಿ ಏಕೆ ಬಿಡುಗಡೆ ಮಾಡುತ್ತಿಲ್ಲ ಎಂದು ಸೋಷಿಯಲ್ ಮೀಡಿಯಾದಲ್ಲಿ ಪ್ರಶ್ನೆ ಮಾಡಲಾಗುತ್ತಿದೆ. ಇದನ್ನೂ ಓದಿ : Exclusive : ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಮೊದಲ ವರ್ಷದ ಪುಣ್ಯಸ್ಮರಣೆ : ಪುತ್ಥಳಿ ಅನಾವರಣ
Advertisement
Advertisement
ಈ ಸಿನಿಮಾದ ಪ್ರಚಾರಕ್ಕೆಂದು ಸಿನಿಮಾ ತಂಡ ಬೆಂಗಳೂರಿಗೂ ಬಂದಿತ್ತು. ಈ ಸಂದರ್ಭದಲ್ಲಿ ಕನ್ನಡದಲ್ಲಿ ಯಾಕೆ ಈ ಸಿನಿಮಾ ಬರುತ್ತಿಲ್ಲ ಎಂಬ ಪ್ರಶ್ನೆ ಕೂಡ ಚಿತ್ರತಂಡಕ್ಕೆ ಎದುರಾಯಿತು. ಸ್ಸಾರಿ ಮಾಡುವುದಕ್ಕೆ ಆಗಲಿಲ್ಲ, ಕ್ಷಮಿಸಿ ಎಂದಷ್ಟೇ ಉತ್ತರ ಸಿಕ್ಕಿತು. ಕನ್ನಡಿಗರೇ ಆಗಿದ್ದ ಸಂದೀಪ್ ಅವರ ಬಗ್ಗೆ ಕನ್ನಡದಲ್ಲೇ ಸಿನಿಮಾ ನೋಡಬೇಕು ಎನ್ನುವುದು ಹಲವರ ಅಭಿಪ್ರಾಯವಾಗಿತ್ತು. ಆದರೆ, ಈ ಸಿನಿಮಾವನ್ನು ಪರಭಾಷೆಯಲ್ಲಿ ನೋಡುವುದು ಅನಿವಾರ್ಯವಾಗಿದೆ. ಇದನ್ನೂ ಓದಿ : ಕೆಜಿಎಫ್ 2 ಐವತ್ತು ದಿನ ಪೂರೈಸಿದ ಬೆನ್ನಲ್ಲೆ ಮತ್ತೊಂದು ಹೊಸ ಸಿನಿಮಾ ರಿಲೀಸ್ ಘೋಷಣೆ
Advertisement
ಸಂದೀಪ್ ಉನ್ನಿಕೃಷ್ಣ ಅವರ ಬಯೋಪಿಕ್ ಗೆ ‘ಮೇಜರ್’ ಎಂದು ಹೆಸರಿಡಲಾಗಿದೆ. ತೆಲುಗಿನ ನಟ ಅರಿವಿ ಶೇಷ ಅವರು ಸಂದೀಪ್ ಅವರ ಪಾತ್ರವನ್ನು ನಿರ್ವಹಿಸಿದ್ದಾರೆ. ಖ್ಯಾತ ತೆಲುಗು ನಟ ಪ್ರಿನ್ಸ್ ಮಹೇಶ್ ಬಾಬು ಅವರು ಈ ಸಿನಿಮಾದ ಹಿಂದಿದ್ದಾರೆ.