ಇಸ್ಲಾಮಾಬಾದ್: ದೇಶದಲ್ಲಿ ಕಾಗದದ ಬಿಕ್ಕಟ್ಟಿನ ಕಾರಣ ಆಗಸ್ಟ್‌ನಿಂದ ಪ್ರಾರಂಭವಾಗುವ ಹೊಸ ಶೈಕ್ಷಣಿಕ ವರ್ಷದಲ್ಲಿ ವಿದ್ಯಾರ್ಥಿಗಳಿಗೆ ಪುಸ್ತಕಗಳು ಲಭ್ಯವಿರುವುದಿಲ್ಲ ಎಂದು ಪಾಕಿಸ್ತಾನ್ ಪೇಪರ್ ಅಸೋಸಿಯೇಷನ್ ಎಚ್ಚರಿಸಿದೆ.
ಕಾಗದದ ಬಿಕ್ಕಟ್ಟಿಗೆ ಜಾಗತಿಕ ಹಣದುಬ್ಬರವಷ್ಟೇ ಅಲ್ಲ, ಪಾಕಿಸ್ತಾನ ಸರ್ಕಾರಗಳ ತಪ್ಪು ನೀತಿಗಳು ಮತ್ತು ಸ್ಥಳೀಯ ಕಾಗದದ ಉದ್ಯಮಗಳ ಏಕಸ್ವಾಮ್ಯವೂ ಪ್ರಮುಖ ಕಾರಣ ಎನ್ನಲಾಗಿದೆ. ಇದನ್ನೂ ಓದಿ: ಗನ್ ನಿಯಂತ್ರಣ ಮಸೂದೆ ಅಂಗೀಕರಿಸಿದ US ಸೆನೆಟ್; 30 ವರ್ಷಗಳ ಇತಿಹಾಸದಲ್ಲೇ ಮಹತ್ವದ ಶಾಸನ
Advertisement
Advertisement
ಆಲ್ ಪಾಕಿಸ್ತಾನ್ ಪೇಪರ್ ಮರ್ಚೆಂಟ್ ಅಸೋಸಿಯೇಷನ್, ಪಾಕಿಸ್ತಾನ್ ಅಸೋಸಿಯೇಷನ್ ಆಫ್ ಪ್ರಿಂಟಿಂಗ್ ಗ್ರಾಫಿಕ್ ಆರ್ಟ್ ಇಂಡಸ್ಟ್ರಿ (PAPGAI), ಕಾಗದದ ಉದ್ಯಮಕ್ಕೆ ಸಂಬಂಧಿಸಿದ ಇತರ ಸಂಸ್ಥೆಗಳ ಸಹಯೋಗದಲ್ಲಿ ಅರ್ಥಶಾಸ್ತ್ರಜ್ಞ ಡಾ. ಕೈಸರ್ ಬೆಂಗಾಲಿ ಜಂಟಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ಕಾಗದದ ಬಿಕ್ಕಟ್ಟಿನಿಂದಾಗಿ ಆಗಸ್ಟ್‌ನಿಂದ ಪ್ರಾರಂಭವಾಗುವ ಹೊಸ ಶೈಕ್ಷಣಿಕ ವರ್ಷದಲ್ಲಿ ವಿದ್ಯಾರ್ಥಿಗಳಿಗೆ ಪುಸ್ತಕಗಳು ಲಭ್ಯವಿರುವುದಿಲ್ಲ ಎಂದು ಅವರು ಎಚ್ಚರಿಸಿದ್ದಾರೆ.
Advertisement
Advertisement
ದೇಶದಲ್ಲಿ ತೀವ್ರ ಕಾಗದದ ಬಿಕ್ಕಟ್ಟು ಇದೆ. ಕಾಗದ ತುಂಬಾ ದುಬಾರಿಯಾಗಿದ್ದು, ಬೆಲೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಪ್ರಕಾಶಕರು ಪುಸ್ತಕಗಳ ಬೆಲೆಯನ್ನು ನಿರ್ಧರಿಸಲು ಸಾಧ್ಯವಾಗುತ್ತಿಲ್ಲ ಎಂದು ಪಾಕಿಸ್ತಾನದ ಸ್ಥಳೀಯ ಮಾಧ್ಯಮ ವರದಿ ಮಾಡಿದೆ. ಬಿಕ್ಕಟ್ಟಿನ ಪರಿಣಾಮವಾಗಿ ಸಿಂಧ್, ಪಂಜಾಬ್ ಮತ್ತು ಖೈಬರ್ ಪಖ್ತುಂಖ್ವಾ ಪಠ್ಯಪುಸ್ತಕ ಮಂಡಳಿಗಳು ಪಠ್ಯಪುಸ್ತಕಗಳನ್ನು ಮುದ್ರಿಸಲು ಸಾಧ್ಯವಾಗಿಲ್ಲ. ಇದನ್ನೂ ಓದಿ: ಒಂದೇ ಆಸ್ಪತ್ರೆಯ, ಒಂದೇ ವಾರ್ಡ್‌ನ 14 ನರ್ಸ್‌ಗಳು ಒಂದೇ ಸಮಯದಲ್ಲಿ ಪ್ರೆಗ್ನೆಂಟ್!