ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ (Jammu And Kashmir) ಅಂತಾರಾಷ್ಟ್ರೀಯ ಗಡಿಯಲ್ಲಿ (ಐಬಿ) ಭಾರೀ ಶಸ್ತ್ರಾಸ್ತ್ರಗಳೊಂದಿಗೆ ಒಳನುಸುಳಲು ಯತ್ನಿಸಿದ ಭಯೋತ್ಪಾದಕರನ್ನು ಸೇನೆ (Indian Army) ತಡೆದಿದೆ. ಈ ವೇಳೆ ನಡೆದ ಎನ್‍ಕೌಂಟರ್‌ನಲ್ಲಿ ಓರ್ವ ಉಗ್ರ ಬಲಿಯಾಗಿದ್ದಾನೆ. ಆತನ ದೇಹವನ್ನು ಜೊತೆಗಿದ್ದ ಉಗ್ರರು ಪಾಕಿಸ್ತಾನದ (Pakistan) ಕಡೆಗೆ ಎಳೆದೊಯ್ದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಾಲ್ವರು ಶಸ್ತ್ರಸಜ್ಜಿತ ಭಯೋತ್ಪಾದಕರ ಗುಂಪು ಅಖ್ನೂರ್‍ನ ಖೌರ್ ಸೆಕ್ಟರ್‍ನಲ್ಲಿ ಗಡಿಯಿಂದ ಈ ಕಡೆಗೆ ನುಸುಳುತ್ತಿರುವುದನ್ನು ಗಮನಿಸಿದಾಗ ಕಾರ್ಯಾಚರಣೆ ನಡೆದಿದೆ. ಡಿ.23ರ ಮುಂಜಾನೆ ಭಯೋತ್ಪಾದಕರ ಚಲನವಲನಗಳು ಕಂಡು ಬಂದಿದೆ. ಈ ದೃಶ್ಯ ಗಡಿಯಲ್ಲಿನ ಸೇನೆಯ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ಹಿಂದೂ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ತರಗತಿಗೆ ಹೋಗುವಂತೆ ನಾನು ಕರೆ ಕೊಡುತ್ತೇನೆ: ಯತ್ನಾಳ್
Advertisement
Advertisement
ರಕ್ಷಣಾ ಸಿಬ್ಬಂದಿ ಹಂಚಿಕೊಂಡ ವೀಡಿಯೋ ಕ್ಲಿಪ್‍ನಲ್ಲಿ, ನಾಲ್ವರು ಭಯೋತ್ಪಾದಕರು ಕತ್ತಲಲ್ಲಿ ಗಡಿಯಾಚೆಯಿಂದ ಭಾರತಕ್ಕೆ ಪ್ರವೇಶಿಸಲು ಪ್ರಯತ್ನಿಸುತ್ತಿರುವುದು ಸೆರೆಯಾಗಿದೆ. ಈ ವೇಳೆ ಉಗ್ರರ ಮೇಲೆ ಸೇನೆ ಗುಂಡು ಹಾರಿಸಿದ್ದು, ಓರ್ವ ಸಾವಿಗೀಡಾಗಿದ್ದಾನೆ. ಕ್ಯಾಮೆರಾದಲ್ಲಿನ ವೀಡಿಯೋ ಪರಿಶೀಲಿಸಿದಾಗ ಉಳಿದ ಉಗ್ರರು ಮೃತ ಉಗ್ರನ ದೇಹವನ್ನು ಎಳೆದೊಯ್ದಿರುವುದು ಬೆಳಕಿಗೆ ಬಂದಿದೆ.
Advertisement
Advertisement
ರಕ್ತದ ಕಲೆಗಳು ಭಯೋತ್ಪಾದಕನ ಹತ್ಯೆಯನ್ನು ದೃಢಪಡಿಸಿದ್ದು, ಈ ಪ್ರದೇಶದಲ್ಲಿ ತೀವ್ರ ನಿಗಾ ಇರಿಸಲಾಗಿದೆ. ಉಗ್ರರಿಗಾಗಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಹಿಜಬ್ ನಿಷೇಧ ಆದೇಶ ವಾಪಸ್‌ಗೆ ಇನ್ನೂ ತೀರ್ಮಾನಿಸಿಲ್ಲ- ಇಂದು ಉಲ್ಟಾ ಹೊಡೆದ್ರಾ ಸಿಎಂ?