ಬೆಂಗಳೂರು: ನಗರದಲ್ಲಿ ಭಾರೀ ದುರಂತವೊಂದು ತಪ್ಪಿದೆ. ತಾಂತ್ರಿಕ ಸಮಸ್ಯೆ ಹಿನ್ನೆಲೆ ಖಾಸಗಿ ವಿಮಾನವೊಂದು (private Plane) ತುರ್ತು ಭೂಸ್ಪರ್ಶ (Emergency Landing) ಮಾಡಿದೆ.
HAL ನಿಂದ ಟೇಕ್ ಆಫ್ ಆಗಿ BIALಗೆ ಹೊರಟಿದ್ದ VT-KBN ಹೆಸರಿನ 1A ವಿಮಾನ ತುರ್ತು ಭೂಸ್ಪರ್ಶ ಮಾಡಿದೆ. ಮುಂಭಾಗದ ವ್ಹೀಲ್‌ನಲ್ಲಿ ತಾಂತ್ರಿಕ ದೋಷ ಕಂಡುಬಂದ ಹಿನ್ನೆಲೆ ತುರ್ತಾಗಿ HALನಲ್ಲೆ ಲ್ಯಾಂಡ್ ಮಾಡಲಾಗಿದೆ.
Advertisement
ಆಘಾತಕಾರಿ ವಿಚಾರವೆಂದರೆ ವಿಮಾನ ಲ್ಯಾಂಡಿಂಗ್ ವೇಳೆ ಮಗುಚಿ ಬೀಳುವ ಹಂತಕ್ಕೆ ಹೋಗಿತ್ತು. ವಿಮಾನದಲ್ಲಿ ಇಬ್ಬರು ಪೈಲಟ್‌ಗಳಿದ್ದು ಸದ್ಯ ಯಾರಿಗೂ ಪ್ರಾಣಾಪಾಯವಾಗಿಲ್ಲ. ಇದನ್ನೂ ಓದಿ: ಉತ್ತರಾಖಂಡದಲ್ಲಿ ಭಾರೀ ಮಳೆ – ಕೇದಾರನಾಥ ಯಾತ್ರೆ ರದ್ದು
Advertisement
Advertisement
ತಾಂತ್ರಿಕ ದೋಷದಿಂದಾಗಿ ಕೆಲ ಕಾಲ ಆತಂಕ ಸೃಷ್ಟಿಯಾಗಿತ್ತು. ಸುರಕ್ಷಿತ ಭೂಸ್ಪರ್ಶಕ್ಕಾಗಿ ರನ್‌ವೇಯಲ್ಲಿ ಕೆಲವು ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಲಾಗಿತ್ತು. ವಿಮಾನವನ್ನು ಕೇವಲ ಎರಡೇ ಚಕ್ರಗಳಲ್ಲಿ ಲ್ಯಾಂಡ್ ಮಾಡಲಾಯಿತು. ಸುರಕ್ಷಿತವಾಗಿ ವಿಮಾನ ಭೂಸ್ಪರ್ಶ ಮಾಡಿದ್ದನ್ನು ಕಂಡು ಹೆಚ್‌ಎಎಲ್ ಸಿಬ್ಬಂದಿ ಚಪ್ಪಾಳೆ ತಟ್ಟಿ ಸಂಭ್ರಮಿಸಿದರು. ಇದನ್ನೂ ಓದಿ: ಒಂದು ವಾರದಲ್ಲಿ ಕೆಆರ್‌ಎಸ್‌ನಲ್ಲಿ 10 ಅಡಿ ಭರ್ತಿ – ಸದ್ಯಕ್ಕೆ ಕುಡಿಯುವ ನೀರಿಗೆ ಇಲ್ಲ ಹಾಹಾಕಾರ
Advertisement
Web Stories