– 15 ಪಿಸ್ತೂಲ್ ಸೇರಿ ನಗದು ವಶಕ್ಕೆ
ನವದೆಹಲಿ: ಮಾದಕವಸ್ತು ಜಾಲದ ಮೇಲೆ ದೆಹಲಿ ಪೊಲೀಸರು (Delhi Police) ಯಶಸ್ವಿ ಕಾರ್ಯಾಚರಣೆ ನಡೆಸಿ, 63 ಜನರನ್ನು ಬಂಧಿಸಿದ್ದಾರೆ. ಈ ವೇಳೆ ವಿವಿಧ ಮಾದರಿಯ ಡ್ರಗ್ಸ್, 15 ಪಿಸ್ತೂಲ್ ಸೇರಿ ನಗದನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಶುಕ್ರವಾರ (ಸೆ.19) ರಾತ್ರಿ ನಡೆದ ಈ ಕಾರ್ಯಾಚರಣೆಯಲ್ಲಿ 40 ವಿಶೇಷ ತಂಡಗಳು ಹಾಗೂ 500 ಪೊಲೀಸ್ ಸಿಬ್ಬಂದಿ ಒಳಗೊಂಡಿದ್ದರು. ದೆಹಲಿ ನಗರದಾದ್ಯಂತ ನಡೆಸಿದ ದಾಳಿಯಲ್ಲಿ 15 ಪಿಸ್ತೂಲ್‌ಗಳು, ಅಧಿಕ ಪ್ರಮಾಣದ ವಿವಿಧ ಮಾದರಿಯ ಡ್ರಗ್ಸ್‌ಗಳಾದ MBMA, ಕೊಕೇನ್, ಹೆರಾಯಿನ್ ಹಾಗೂ ನಗದು ಜಪ್ತಿ ಮಾಡಿದ್ದಾರೆ ಹಾಗೂ ದಾಳಿಯಲ್ಲಿ ಒಟ್ಟು 63 ಜನರನ್ನು ಬಂಧಿಸಿದ್ದಾರೆ.ಇದನ್ನೂ ಓದಿ: 18,000 ಬದಲಿಗೆ 8,000 ರೂ. ವೇತನ – ಗುತ್ತಿಗೆದಾರನಿಂದ ಬೇಸತ್ತು ಪೌರಕಾರ್ಮಿಕ ಆತ್ಮಹತ್ಯೆಗೆ ಯತ್ನ
ಈ ಕುರಿತು ಅಧಿಕಾರಿಗಳು ಮಾಹಿತಿ ನೀಡಿದ್ದು, ಮಾದಕ ವಸ್ತುಗಳ ಕಳ್ಳಸಾಗಣೆ ಸೇರಿದಂತೆ ಕಾನೂನುಬಾಹಿರ ಚಟುವಟಿಕೆಗಳನ್ನು ತಡೆಯುವ ಉದ್ದೇಶದಿಂದ ಈ ದಾಳಿ ನಡೆಸಲಾಗಿದೆ. ನಿಖರವಾದ ಮಾಹಿತಿ ಮೇರೆಗೆ ಆಗ್ನೇಯ ದೆಹಲಿಯಲ್ಲಿರುವ ಜಾಲಗಳನ್ನು ಗುರಿಯಾಗಿಸಿಕೊಂಡು ಈ ಕಾರ್ಯಾಚರಣೆ ನಡೆಸಿದ್ದೇವೆ ಎಂದು ತಿಳಿಸಿದ್ದಾರೆ.