ಬೆಂಗಳೂರು: 40 ವರ್ಷಗಳ ಇತಿಹಾಸ ಇರುವ ಮೆಜೆಸ್ಟಿಕ್ ಬಸ್ ನಿಲ್ದಾಣಕ್ಕೆ (Mejestic Bus Station) ಹೊಸ ರೂಪ ಸಿಗಲಿದೆ. ಮೂರ್ನಾಲ್ಕು ಅಂತಸ್ತಿನ ಬಿಲ್ಡಿಂಗ್ ಇಲ್ಲಿ ತಲೆ ಎತ್ತಲಿದ್ದು, ಇಲ್ಲಿಂದಲೇ ಬಸ್‌ಗಳ ಕಾರ್ಯಾಚರಣೆ ಆಗಲಿವೆ.
ಮೆಜೆಸ್ಟಿಕ್ ಬಸ್ ನಿಲ್ದಾಣಕ್ಕೆ ಶೀಘ್ರದಲ್ಲಿಯೇ ಹೊಸ ಸ್ಪರ್ಶ ಸಿಗಲಿದೆ. ಬಿಎಂಟಿಸಿ, ಕೆಎಸ್‌ಆರ್‌ಟಿಸಿ ನಿಲ್ದಾಣಕ್ಕೆ ಮೂರ್ನಾಲ್ಕು ಅಂತಸ್ತಿನ ಬಿಲ್ಡಿಂಗ್ ನಿರ್ಮಾಣ ಮಾಡಲು ಪ್ಲ್ಯಾನ್ ನಡೆಯುತ್ತಿದೆ. ಈಗಾಗಲೇ ಅಧಿಕಾರಿಗಳ ಜೊತೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ (Ramalinga Reddy) ಚರ್ಚಿಸಿದ್ದಾರೆ. ಕಟ್ಟಡ ನಿರ್ಮಾಣಕ್ಕೆ ನಕ್ಷೆ ತಯಾರಿಸುವ ಸಿದ್ಧತೆಗಳನ್ನ ಮಾಡಿಕೊಳ್ಳಲಾಗುತ್ತಿದೆ. ಇದನ್ನೂ ಓದಿ: ಚಾಂಪಿಯನ್ಸ್ ಪಟ್ಟಕ್ಕಾಗಿ ದುಬೈನಲ್ಲಿ ಗುದ್ದಾಟ – ಟ್ರೋಫಿ ಗೆದ್ದು ಇತಿಹಾಸ ನಿರ್ಮಿಸಲು ಟೀಂ ಇಂಡಿಯಾ ಸನ್ನದ್ಧ
ಮುಂದಿನ ಐದಾರು ತಿಂಗಳಲ್ಲಿ ಬಸ್ ನಿಲ್ದಾಣದ ಬಿಲ್ಡಿಂಗ್ ನಿರ್ಮಾಣಕ್ಕೆ ಸಂಬಂಧಪಟ್ಟಂತೆ ಟೆಂಡರ್, ಇತರೆ ಪ್ರಕ್ರಿಯೆಗಳು ಪ್ರಾರಂಭವಾಗಲಿವೆ ಎನ್ನಲಾಗುತ್ತಿದೆ. ಮೆಜೆಸ್ಟಿಕ್‌ನ ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಿಂದ ನಿತ್ಯ 10 ಸಾವಿರಕ್ಕೂ ಹೆಚ್ಚು ಬಸ್‌ಗಳು ಸಂಚಾರ ಮಾಡುತ್ತಿವೆ. ಮೂರು ಅಂತಸ್ತಿನ ಬಿಲ್ಡಿಂಗ್ ನಿರ್ಮಿಸಿ ಬಸ್‌ಗಳನ್ನ ಆಪರೇಟ್ ಮಾಡೋದು, ಬಿಲ್ಡಿಂಗ್‌ನ ಕೆಲವು ಮಳಿಗೆಗಳನ್ನ ಬಾಡಿಗೆಗೆ ನೀಡಿ, ನಿಗಮದ ಬೊಕ್ಕಸ ತುಂಬಿಸುವ ಬಗ್ಗೆಯೂ ಚಿಂತಿಸಲಾಗುತ್ತಿದೆ. ಇದನ್ನೂ ಓದಿ: ರಾಷ್ಟ್ರಪತಿ ಆಡಳಿತ ಜಾರಿ ಬಳಿಕ ಮಣಿಪುರದಲ್ಲಿ ಘರ್ಷಣೆ – ಓರ್ವ ಸಾವು, 20ಕ್ಕೂ ಹೆಚ್ಚು ಮಂದಿಗೆ ಗಾಯ
ಮೆಟ್ರೋ, ರೈಲು ನಿಲ್ದಾಣಗಳಿಗೆ ಹೋಗುವ ಪ್ರಯಾಣಿಕರಿಗೆ ಅನುಕೂಲ ಆಗುವಂತೆ ಬಸ್ ನಿಲ್ದಾಣವನ್ನು ವಿನ್ಯಾಸ ಮಾಡುವ ಚಿಂತನೆ ಮಾಡಲಾಗುತ್ತಿದೆ. ಹೈಟೆಕ್ ಸ್ಪರ್ಶ ನೀಡುವುದರ ಜೊತೆಗೆ ಎಐ ಕ್ಯಾಮೆರಾಗಳು, ಪ್ಲಾಟ್‌ಫಾರಂಗಳಲ್ಲಿ ಎಲ್‌ಇಡಿ ಅಳವಡಿಸಿ ಹೊಸ ರೂಪ ನೀಡಲಿದ್ದಾರೆ. ಇದನ್ನೂ ಓದಿ: IND vs NZ | ಚಾಂಪಿಯನ್ಸ್ ಟ್ರೋಫಿ ಫೈನಲ್ ಬಳಿಕ ರೋಹಿತ್ ಶರ್ಮಾ ನಿವೃತ್ತಿ…?