ಮೆಜೆಸ್ಟಿಕ್‍ನಲ್ಲಿ ಜನವೋ ಜನ – ಅರಮನೆ ಮೈದಾನದಲ್ಲೂ ಸಾವಿರಾರು ಮಂದಿ ಕ್ಯೂ

Public TV
2 Min Read
mejestick 1

ಬೆಂಗಳೂರು: ಕೊರೊನಾ ಲಾಕ್‍ಡೌನ್‍ನಿಂದ ಅನೇಕ ಕಾರ್ಮಿಕರು ತಮ್ಮ ತಮ್ಮ ಗ್ರಾಮಕ್ಕೆ ಹೋಗಲು ಸಾಧ್ಯವಾಗದೆ ಬೆಂಗಳೂರಿನಲ್ಲಿ ಲಾಕ್ ಆಗಿದ್ದರು. ಆದರೆ ಇಂದು ಲಾಕ್‍ಡೌನ್ ಸಡಿಲಿಕೆ ಆಗಿದ್ದೇ ತಡ ಮೆಜೆಸ್ಟಿಕ್‍ನಲ್ಲಿ ಜನಸಾಗರವೇ ಸೇರಿದೆ.

ಮೆಜೆಸ್ಟಿಕ್‍ನಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನರು ಗುಂಪು ಸೇರಿದ್ದಾರೆ. ಮೆಜೆಸ್ಟಿಕ್ ಶಾಂತಲಾ ಸಿಲ್ಕ್ ಹೌಸ್ ರಸ್ತೆ ಬಳಿ ಜನಸಾಗರವೇ ಸೇರಿದ್ದು, ಕಣ್ಣಾಯಿಸಿದಷ್ಟು ದೂರ ಮೆಜೆಸ್ಟಿಕ್‍ನಲ್ಲಿ ಜನರು ಕಾಣುತ್ತಿದ್ದಾರೆ. ಕನಿಷ್ಠ 2 ಸಾವಿರಕ್ಕೂ ಅಧಿಕ ಪ್ರಯಾಣಿಕರು ಒಂದೆಡೆ ಸೇರಿದ್ದಾರೆ. ಜನರ ಗುಂಪು ನೋಡಿ ಪೊಲೀಸರು ಫುಲ್ ಕನ್‍ಫ್ಯೂಶನ್ ಆಗಿದ್ದು, ಇಡೀ ಮೆಜೆಸ್ಟಿಕ್ ನಿಲ್ದಾಣಕ್ಕೆ ಔಷಧಿ ಸಿಂಪಡನೆ ಮಾಡಲಾಗಿದೆ.

mejstic 1

ಕೊರೊನಾ ಲಾಕ್‍ಡೌನ್ ಪರಿಣಾಮದಿಂದ ಮಾಡಲು ಕೆಲಸವಿಲ್ಲದೆ ಕಾರ್ಮಿಕರು ಬೆಂಗಳೂರಿನಲ್ಲಿ ಲಾಕ್ ಆಗಿದ್ದರು. ಸರ್ಕಾರ ಮೂರು ದಿನ ಕಾರ್ಮಿಕರಿಗೆ ಉಚಿತ ಬಸ್ ಸಂಚಾರದ ವ್ಯವಸ್ಥೆ ಮಾಡಿದ್ದಾರೆ. ಹೀಗಾಗಿ ಮುಂಜಾನೆಯಿಂದಲೇ ಲಾಕ್‍ಡೌನ್ ಪ್ರಯಾಣಿಕರು ತಮ್ಮ ತಮ್ಮ ಲಗೇಜ್‍ಗಳನ್ನು ತುಂಬಿಕೊಂಡು ಮೆಜೆಸ್ಟಿಕ್‍ಗೆ ಬಂದಿದ್ದಾರೆ. ಉಚಿತ ಪ್ರಯಾಣ ಎಂದು ಪತ್ನಿ, ಮಕ್ಕಳು ಮನೆಯವರೆಲ್ಲ ಊರಿಗೆ ವಾಪಸ್ ಹೋಗುತ್ತಿದ್ದಾರೆ.

ಪ್ರಯಾಣಿಕರು ಊರಿಗೆ ಹೋಗುವಾಗ ಅಕ್ಕಿ, ಬೇಳೆ, ಗೋದಿ ಸೇರಿದಂತೆ ಎಲ್ಲಾ ರೇಷನ್ ಸಹ ಜೊತೆಯಲ್ಲಿ ತೆಗೆದುಕೊಂಡು ಹೋಗುತ್ತಿದ್ದಾರೆ. ಪುಟಾಣಿ ಕಂದಮ್ಮ ತೊಡೆಯ ಮೇಲೆ ಹಾಕಿಕೊಂಡು ಬಸ್‍ಗಾಗಿ ಸಾವಿರಾರು ಪ್ರಯಾಣಿಕರು ಕಾದು ಕುಳಿತಿದ್ದಾರೆ. ಹೀಗಾಗಿ ಮೆಜೆಸ್ಟಿಕ್ ಒಳಗೆ ಟ್ರಾಫಿಕ್ ಜಾಮ್ ಉಂಟಾಗಿದೆ.

me

ಆಶಾ ಕಾರ್ಯಕರ್ತೆಯರು, ವೈದ್ಯರು, ಡಾಕ್ಟರ್ ಮೆಜೆಸ್ಟಿಕ್‍ನಲ್ಲಿ ಕೆಲಸ ಆರಂಭಿಸಿದ್ದಾರೆ. ಬಸ್ ಹತ್ತುವ ಮುನ್ನ ಡ್ರೈವರ್, ಕಂಡೆಕ್ಟರ್ ಮತ್ತು ಪ್ರಯಾಣಿಕರು ತಪಾಸಣೆಗೆ ಒಳಪಡಬೇಕು. ಹೀಗಾಗಿ ಪ್ಲಾಟ್ ಫಾರಂ ಬಸ್ ಏರಿ ಟೆಂಪರೇಚರ್ ಚೆಕ್ ಅಪ್ ಮಾಡುತ್ತಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಮೆಜೆಸ್ಟಿಕ್ ಎಲ್ಲಾ ಭಾಗಗಳಿಗೂ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.

ಕೊರೊನಾ ಲಾಕ್‍ಡೌನ್ ಬಂದ್ ಸಡಲಿಕೆ ಹಿನ್ನೆಲೆಯಲ್ಲಿ ಇಂದು ಮೆಜೆಸ್ಟಿಕ್ ತುಂಬ ಬಸ್ಸುಗಳದ್ದೇ ಕಾರುಬಾರು ಆಗಿದೆ. ಈ ಮೂಲಕ ಮೆಜೆಸ್ಟಿಕ್ ನಿಲ್ದಾಣ ಸಹಜ ಸ್ಥಿತಿಯತ್ತ ಬರುತ್ತಿದೆ. ಇಷ್ಟು ದಿನ ಖಾಲಿ ಇದ್ದ ರಸ್ತೆಗಳು ಇಂದು ಬಸ್ಸುಗಳಿಂದ ತುಂಬಿ ಹೋಗಿದೆ. ನೂರಾರು ಕೆಎಸ್‌ಆರ್‌ಟಿಸಿ ಬಸ್ಸುಗಳು ಶೆಡ್ಯೂಲ್ ಪ್ರಕಾರ ಸಂಚಾರಕ್ಕೆ ಸಜ್ಜಾಗಿದೆ. ಇನ್ನೂ ಆಟೋ, ದ್ವಿಚಕ್ರ ವಾಹನ, ಕ್ಯಾಬ್ ಕೂಡ ತಮ್ಮ ತಮ್ಮ ಸಂಚಾರ ಆರಂಭಿಸಿದೆ.

vlcsnap 2020 05 04 08h30m48s114

ಅರಮನೆ ಮೈದಾನದಲ್ಲಿ ರಾಜಸ್ಥಾನದ ಜನರು ತುಂಬಿ ತುಳುಕುತ್ತಿದ್ದಾರೆ. ಲಾಕ್‍ಡೌನ್ ಪರಿಣಾಮ ಬೆಂಗಳೂರಿನಲ್ಲಿ ಬೀಡು ಬಿಟ್ಟದ್ದ ರಾಜಸ್ಥಾನದ ಜನರು ಊರಿಗೆ ಹೋಗಲು ಪ್ಯಾಲೇಸ್ ಗ್ರೌಂಡ್ ಮುಂಭಾಗ ಬಂದಿದ್ದಾರೆ. ಬೆಂಗಳೂರು ಟು ಜೈಪರ್ ಟ್ರೈನ್‍ನಿಂದ ಬರುವಂತೆ ಸೂಚಿಸಿದ್ದಾರೆ. ಹೀಗಾಗಿ ಅರಮನೆ ಮೈದಾನದಿಂದ ಬಸ್ ಮೂಲಕ ಬೆಂಗಳೂರು ರೈಲ್ವೇ ಸ್ಟೇಷನ್‍ಗೆ ಹೋಗುತ್ತಾರೆ. ಹೀಗಾಗಿ ಸಾವಿರಾರು ಜನರು ಒಂದು ಕಿಲೋ ಮೀಟರ್‌ವರೆಗೂ ಕ್ಯೂ ನಿಂತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *