-ಹಿಂಗಾರು ಮಳೆಯ ಆರ್ಭಟಕ್ಕೆ ತತ್ತರಿಸಿದ ಹಾವೇರಿ ಜಿಲ್ಲೆಯ ಅನ್ನದಾತರು
ಹಾವೇರಿ: ಕಳೆದ ಕೆಲವು ದಿನಗಳಿಂದ ಸುರಿದ ಧಾರಾಕಾರ ಮಳೆಗೆ ಗುಡ್ಡೆ ಹಾಕಿದಲ್ಲೇ ಮೆಕ್ಕೆಜೋಳದ ತೆನೆಗಳು ಮೊಳಕೆ ಒಡೆಯುತ್ತಿದೆ. ಇದರಿಂದಾಗಿ ಹಾವೇರಿ (Haveri) ಜಿಲ್ಲೆ ಬ್ಯಾಡಗಿ ತಾಲೂಕಿನ ಮಲ್ಲೂರು ಗ್ರಾಮದ ರೈತರು ಕಂಗಾಲಾಗಿದ್ದಾರೆ.
ಮೆಕ್ಕೆಜೋಳ ಬೆಳೆದ ರೈತರ ಪರಿಸ್ಥಿತಿಯಂತೂ ತೀರ ಹದಗೆಟ್ಟಿದೆ. ಗ್ರಾಮದ ಶಿವನಗೌಡ ಸೊಲಬಗೌಡ್ರ ಎಂಬ ರೈತ ತಮ್ಮ ಮೂರು ಎಕರೆ ಜಮೀನಿನಲ್ಲಿ ಮೆಕ್ಕೆಜೋಳ ಬೆಳೆದಿದ್ದು, ಭರ್ಜರಿ ಫಸಲು ಕೂಡ ಬಂದಿತ್ತು. ಮೆಕ್ಕೆಜೋಳ ಕಟಾವು ಮಾಡಿ ರಾಶಿ ಮಾಡಲು ಗುಡ್ಡೆ ಹಾಕಿದ್ದರು. ಆದರೆ ನಿರಂತರವಾಗಿ ಸುರಿದ ಧಾರಾಕಾರ ಮಳೆಯಿಂದ ಮೆಕ್ಕೆಜೋಳ ಗುಡ್ಡೆ ಹಾಕಿದಲ್ಲೇ ಮೊಳಕೆ ಒಡೆಯುತ್ತಿದೆ. ಇದನ್ನೂ ಓದಿ: ಚನ್ನಪಟ್ಟಣ ಉಪಕಣ; ನಾಮಪತ್ರ ಸಲ್ಲಿಕೆಗೆ ಸಿ.ಪಿ.ಯೋಗೇಶ್ವರ್ ಸಿದ್ಧತೆ
ಜಿಲ್ಲೆಯಲ್ಲಿ ಶೇ.80ರಷ್ಟು ರೈತರು ಮೆಕ್ಕೆಜೋಳ ಬೆಳೆಯುತ್ತಾರೆ. ನಿರಂತರ ಮಳೆಗೆ ಅನ್ನದಾತರು ಕಂಗಾಲಾಗಿದ್ದಾರೆ. ಮೆಕ್ಕೆಜೋಳದ ತೆನೆಗಳು ಮೊಳಕೆಯೊಡೆದು ಹಾಳಾಗಿವೆ. ಮೂರು ಎಕರೆ ಜಮೀನಿನಲ್ಲಿ ಬೆಳೆದಿದ್ದ ಮೆಕ್ಕೆಜೋಳದ ತೆನೆಗಳಲ್ಲಿ ಬಹುತೇಕ ತೆನೆಗಳು ಮೊಳಕೆಯಿಡೆದು ಹಾಳಾಗಿವೆ. ಇದು ರೈತರನ್ನು ಅಕ್ಷರಶಃ ಕಂಗಾಲಾಗಿಸಿದೆ. ಸುಮಾರು ಎರಡು ಲಕ್ಷ ರೂ. ಅಧಿಕ ಮೌಲ್ಯದ ಮೆಕ್ಕೆಜೋಳದ ಫಸಲು ಹಾಳಾಗಿದ್ದು, ರೈತನಿಗೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಇದನ್ನೂ ಓದಿ: ನ್ಯಾಯಯುತವಾಗಿ ಚನ್ನಪಟ್ಟಣ ಟಿಕೆಟ್ ನಮಗೇ ಬರಬೇಕು: ಹೆಚ್‌ಡಿಕೆ ಪಟ್ಟು