ಬೆಂಗಳೂರು: ಮಕರ ಸಂಕ್ರಾಂತಿಯ ಈ ದಿನ ಗವಿಗಂಗಾಧರೇಶ್ವರನಿಗೆ ಸೂರ್ಯ ರಶ್ಮಿ ಮುತ್ತಿಕ್ಕಿದೆ. ಈ ಬೆನ್ನಲ್ಲೇ ಇದೀಗ ಸ್ವಲ್ಪ ಜಲಕಂಟಕ ಎದುರಾಗುವ ಸಂಭವವಿದೆ ಎಂಬುದಾಗಿ ಗವಿಗಂಗಾಧರ ದೇವಾಲಯದ (Gavigangadhareshwara Temple) ಪ್ರಧಾನ ಅರ್ಚಕ ಸೋಮಸುಂದರ್ ದೀಕ್ಷಿತ್ (Somasundar Deekshit) ಹೇಳಿದ್ದಾರೆ.
Advertisement
ಸೂರ್ಯ ರಶ್ಮಿಯು ಶಿವಲಿಂಗಕ್ಕೆ (Shivalinga) ಸ್ಪರ್ಶ ಮಾಡಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಪ್ರಧಾನ ಅರ್ಚಕರು, ಗವಿಗಂಗಾಧರ ದೇವಾಲಯ ಸ್ವಾಮಿ ದಕ್ಷಿಣಾಭಿಮುಖವಾಗಿ ಇದೆ. ವಿಶೇಷವಾಗಿ ಈ ದೇವಸ್ಥಾನದಲ್ಲಿ ಇಂದು ಸೂರ್ಯರಶ್ಮಿ ಸ್ಪರ್ಶಿಸಿದೆ. ಈ ಮೂಲಕ ಇವತ್ತು ವಿಶೇಷವಾದ ಅನುಗ್ರಹವೊಂದನ್ನು ನೀಡಿದೆ ಎಂದರು. ಇದನ್ನೂ ಓದಿ: ಪ್ರಕೃತಿಯ ವಿಸ್ಮಯಕ್ಕೆ ಸಾಕ್ಷಿಯಾದ ಸನ್ನಿಧಾನ- ಗವಿಗಂಗಾಧರೇಶ್ವರನಿಗೆ ಸ್ಪರ್ಶಿಸಿದ ʼಭಾಸ್ಕರʼ
Advertisement
Advertisement
ಈ ವರ್ಷ ಸೂರ್ಯ 46 ಸೆಕೆಂಡ್ ಗಳ ಕಾಲ ಲಿಂಗದ ಮೇಲಿದ್ದು ಪೂಜಿಸಿದ್ದಾನೆ. ಸ್ವಲ್ಪ ಜಲಕಂಟಕ ಸಂಭವಿಸಬಹುದು. ಯಾಕೆಂದರೆ ಗಂಗೆಯ ದರ್ಶನವನ್ನು ಮಾಡದೇ ಸೂರ್ಯ ಮರೆಯಾಗಿದ್ದಾನೆ. ಹೀಗಾಗಿ ಸಣ್ಣ ಜಲಾವೃತ್ತಿಯಾದ ಅನಾಹುತಗಳು ನಡೆಯುತ್ತವೆ. ಕೋಪಗೊಂಡ ಗಂಗೆಯಿಂದ ನದಿಯ ಪ್ರವಾಹದಂತಹ ಅನಾಹುತಗಳು ಸಂಭವಿಸಬಹುದು. ರುದ್ರಾಭಿಷೇಕ, ಗಂಗಾ ಜಪ ಮಾಡಬೇಕು ಎಂದು ಅವರು ಹೇಳಿದರು.
Advertisement
ಸ್ವಾಮಿಯ ಲಿಂಗದ ಮೇಲೆ 46 ಸೆಕೆಂಡ್ ಪೂಜೆ ಇತ್ತು. ಪಾದದಿಂದ ಪೀಠದವರೆಗೆ 50 ಸೆಕೆಂಡ್ ಸೂರ್ಯರಶ್ಮಿ ಇತ್ತು. 5.38 ರಿಂದ 5.45ರವರೆಗೆ ಪೂಜೆ ಇತ್ತು ಎಂದು ಸೋಮಸುಂದರ್ ದೀಕ್ಷಿತ್ ವಿವರಿಸಿದರು.