ಬೆಂಗಳೂರು: ಪಾಕ್ ಪ್ರಜೆಗಳ ಬಂಧನ ಪ್ರಕರಣದ ಪ್ರಮುಖ ರೂವಾರಿ ಪರ್ವೇಜ್‌ನನ್ನು ಜಿಗಣಿ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರಿನ ರೈಲ್ವೆ ನಿಲ್ದಾಣದಲ್ಲಿ ನಿಖರ ಮಾಹಿತಿ ಮೇರೆಗೆ ಜಿಗಣಿ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ ಪ್ರಮುಖ ಆರೋಪಿಯನ್ನು ಬಂಧಿಸಿದ್ದಾರೆ. ಸದ್ಯ ಪರ್ವೇಜ್ ಜಿಗಣಿ ಪೊಲೀಸರ ವಶದಲ್ಲಿ ಇದ್ದಾನೆ.
- Advertisement
ಪಾಕಿಸ್ತಾನಿ ಪ್ರಜೆಗಳು ಭಾರತಕ್ಕೆ ಬರಲು ಇವನೇ ಪ್ರಮುಖ ಕಾರಣ. ಭಾರತೀಯ ದಾಖಲೆಗಳನ್ನು ಸಹ ಎಲ್ಲಾ ಪಾಕಿಸ್ತಾನಿ ಪ್ರಜೆಗಳಿಗೆ ಈತನೇ ಮಾಡಿಕೊಟ್ಟಿದ್ದ. ಅಲ್ಲದೇ, ಯೂನಸ್ ಆಲ್ಗೋರ್ ಧರ್ಮ ಗುರುಗಳ ಪ್ರವಚನಗಳ ಪ್ರಚಾರಕ. ಬಂಧಿತ ಪ್ರಜೆಗಳೆಲ್ಲರೂ ಸಹ ಇವನ ಸಂಪರ್ಕದಲ್ಲಿ ಇದ್ದರು. ಇವನ ಸೂಚನೆಯ ಮೇರೆಗೆ ಧರ್ಮ ಗುರುಗಳ ಪ್ರವಚನವನ್ನು ಪಾಕ್ ಪ್ರಜೆಗಳು ಭಾರತದಲ್ಲಿ ಮಾಡುತ್ತಿದ್ದರು ಎಂಬ ಮಾಹಿತಿ ಸಹ ಲಭ್ಯವಾಗಿದೆ.
- Advertisement
ಸದ್ಯ ಜಿಗಣಿ ಪೊಲೀಸರು ಆರೋಪಿಯ ವಿಚಾರಣೆ ನಡೆಸುತ್ತಿದ್ದು, ಇನ್ನಷ್ಟು ಅಂಶಗಳು ಹೊರಬರಬೇಕಿದೆ.