– ಚಾಮುಂಡಿ ಬೆಟ್ಟದಲ್ಲಿ ಮಹಿಷ ದಸರಾ ಆಚರಿಸಲು ಬಿಡಲ್ಲ
– `ಚಾಮುಂಡಿ ಚಲೋ’ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಕರೆ
ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರು (Mysuru) ದಸರಾ (Dasara) ಹಬ್ಬದ ಸಂಭ್ರಮಕ್ಕೆ ಸಿದ್ಧವಾಗ್ತಿದೆ. ಈ ಸಂಭ್ರಮದ ನಡುವೆ ಮತ್ತೆ ಮಹಿಷ ದಸರಾ ಕೂಗು ಕೇಳಿ ಬಂದಿದೆ. ಕಳೆದ ಬಾರಿಯಂತೆ ಈ ಬಾರಿಯೂ ಮಹಿಷ ದಸರಾ (Mahisha Dasara) ವಿಚಾರ ಮತ್ತೆ ವಿವಾದ ಸೃಷ್ಟಿ ಮಾಡಿದೆ.
Advertisement
ಮೈಸೂರಿನಲ್ಲಿ ದಸರಾ ಸಂಭ್ರಮ ಅಧಿಕೃತವಾಗಿ ಆರಂಭವಾಗಲು ಇನ್ನೂ ಒಂದು ವಾರ ಮಾತ್ರ ಬಾಕಿ ಇದೆ. ಈ ಹೊತ್ತಿನಲ್ಲೇ ಮಹಿಷ ದಸರಾ ವಿಚಾರವೂ ಮುನ್ನೆಲೆಗೆ ಬಂದಿದೆ. ಸೆಪ್ಟೆಂಬರ್ 29 ರಂದು ಮಹಿಷ ದಸರಾ ಮಾಡುತ್ತೇವೆ ಅಂತ ಮಹಿಷ ದಸರಾ ಆಚರಣ ಸಮಿತಿ ಹೇಳಿದೆ. ಇದನ್ನೂ ಓದಿ: ಪುಣೆ ಏರ್‌ಪೋರ್ಟ್ ಹೆಸರು ಬದಲಾವಣೆ – ಜಗದ್ಗುರು ಸಂತ ತುಕಾರಾಂ ನಿಲ್ದಾಣವಾಗಿ ಮರುನಾಮಕರಣ
Advertisement
Advertisement
ಚಾಮುಂಡಿ ಬೆಟ್ಟದಲ್ಲಿನ ಮಹಿಷ ಮೂರ್ತಿಗೆ ಪುಷ್ಪಾರ್ಚನೆ ಮಾಡಿ ಮಹಿಷ ದಸರಾ ಮಾಡುತ್ತೇವೆ. ಅಲ್ಲದೇ ಈ ಬಾರಿಯಿಂದ ಮಹಿಷಾ ದಸರಾ ಬದಲು `ಮಹಿಷ ಮಂಡಲೋತ್ಸವ’ ಎಂದು ಹೊಸ ಹೆಸರು ಇಟ್ಟಿದ್ದೇವೆ ಅಂತ ಹೇಳಿದೆ. ಇದನ್ನೂ ಓದಿ: ನಿಮ್ಮ ಕೈಯಲ್ಲಿರೋ ಸ್ಮಾರ್ಟ್‌ಫೋನ್ ಹ್ಯಾಕ್ ಮಾಡಿ ಸ್ಫೋಟಿಲು ಸಾಧ್ಯವೇ? ಹ್ಯಾಕಿಂಗ್ ತಪ್ಪಿಸಲು ಏನು ಮಾಡ್ಬೇಕು?
Advertisement
ಮಹಿಷ ದಸರಾ ವಿಚಾರ ಸಹಜವಾಗಿಯೇ ಬಿಜೆಪಿ (BJP) ನಾಯಕರನ್ನು ಸಿಟ್ಟಿಗೇಳುವಂತೆ ಮಾಡಿದೆ. ಮೊದಲಿಂದಲೂ ಮಹಿಷ ದಸರಾಗೆ ವಿರೋಧ ವ್ಯಕ್ತಪಡಿಸುತ್ತಾ ಬಂದಿರುವ ಮಾಜಿ ಸಂಸದ ಪ್ರತಾಪ್ ಸಿಂಹ (Pratap Simha), ಈ ಬಾರಿಯೂ ಧ್ವನಿ ಜೋರು ಮಾಡಿದ್ದಾರೆ. ಯಾವುದೇ ಕಾರಣಕ್ಕೂ ಚಾಮುಂಡಿ ಬೆಟ್ಟದಲ್ಲಿ ಮಹಿಷಾ ದಸರಾ ಮಾಡಲು ಬಿಡಲ್ಲ. ಒಂದು ವೇಳೆ ಅವರು ಅಲ್ಲೇ ಆಚರಿಸಲು ಹೊರಟರೆ ನಾವು ಕೂಡ ಚಾಮುಂಡಿ ಚಲೋ ಮಾಡ್ತಿವಿ. ನಾವಾ ಅವರ ನೋಡೇಬಿಡೋಣಾ ಅಂತ ಸವಾಲು ಹಾಕಿದ್ದಾರೆ. ಇದನ್ನೂ ಓದಿ: ಇಸ್ರೇಲ್ ರಾಕೆಟ್ ದಾಳಿಗೆ ಲೆಬನಾನ್ ಛಿದ್ರ ಛಿದ್ರ – ಸಾವಿನ ಸಂಖ್ಯೆ 492ಕ್ಕೆ ಏರಿಕೆ!