ವಿರೋಧದ ನಡ್ವೆ ಮೈಸೂರಲ್ಲಿ ಮಹಿಷ ದಸರಾ ಆಚರಣೆ – ಜಿಲ್ಲಾಡಳಿತ, ಪೊಲೀಸರ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ

Public TV
2 Min Read
Mahisha Dasara 2

ಮೈಸೂರು: ತೀವ್ರ ವಿರೋಧದ ನಡುವೆಯೂ ಮೈಸೂರಿನಲ್ಲಿ `ಮಹಿಷ ಮಂಡಲೋತ್ಸವ’ ಹೆಸರಿನಲ್ಲಿ ಮಹಿಷ ದಸರಾ (Mahisha Dasara) ಆಚರಣೆ ನಡೆದಿದೆ. ಮೈಸೂರಿನ ಟೌನ್‌ಹಾಲ್ (Mysuru TownHall) ಬಳಿ ಮಹಿಷ ಮಂಡಲೋತ್ಸವ ಹೆಸರಲ್ಲಿ ಕಾರ್ಯಕ್ರಮ ನಡೆಯಿತು. ಕೇವಲ ವೇದಿಕೆ ಕಾರ್ಯಕ್ರಮಕ್ಕಷ್ಟೇ ಅನುಮತಿ ನೀಡಿ ನಿಷೇಧಾಜ್ಞೆ ವಿಧಿಸಲಾಗಿತ್ತು.

Mahisha Dasara

ಮಹಿಷಾ ದಸರಾ ಮಂಡಲೋತ್ಸವದ ವೇಳೆ ಗಲಾಟೆ-ಗದ್ದಲ ನಡೆಯಿತು. ಮಹಿಷ ಮೂರ್ತಿಗೆ ಮಾಲಾರ್ಪಣೆ ಮಾಡ್ಬೇಕು ಅಂತಾ ಸಮಿತಿಯವರು ಪಟ್ಟು ಹಿಡಿದಿದ್ರು. ಆದ್ರೆ, ಪ್ರತಿಭಟನಾಕಾರರನ್ನ ಮನವೊಲಿಸಿದ ಪೊಲೀಸರು (Mysuru Police) ಐವರಿಗೆ ಪುಪ್ಪಾರ್ಚನೆ ಮಾಡಲು ಅವಕಾಶ ನೀಡಿದ್ರು. ಇದೇ ವೇಳೆ ಸಾಹಿತಿ ಪ್ರೊ.ಕೆ.ಎಸ್ ಭಗವಾನ್ ಹಿಂದೂಗಳ ಬಗ್ಗೆ ನಾಲಿಗೆ ಹರಿಬಿಟ್ಟಿದ್ದಾರೆ. ಇದನ್ನೂ ಓದಿ: ವೈಯಾಲಿಕಾವಲ್ ಮಹಾಲಕ್ಷ್ಮಿ ಕೊಲೆ ಪ್ರಕರಣ – ಹತ್ಯೆ ಬಳಿಕ ಪಶ್ಚಾತ್ತಾಪ ಪಟ್ಟಿದ್ದ ಹಂತಕ

mahisha dasara

ಮಹಿಷಾ ಮಂಡಲೋತ್ಸವ ಹೆಸರಿನಲ್ಲಿ ಮೈಸೂರಿನ ಪುರಭವನ ಆವರಣದಲ್ಲಿ ವೇದಿಕೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಪೊಲೀಸರು ಟೌನ್‌ಹಾಲ್ ಹೊರತುಪಡಿಸಿ ಮೈಸೂರು ನಗರದಲ್ಲಿ ನಿಷೇಧಾಜ್ಞೆ ಜಾರಿ ಮಾಡಿದ್ರು. ಕೇವಲ ವೇದಿಕೆ ಕಾರ್ಯಕ್ರಮಕ್ಕಷ್ಟೆ ಅನುಮತಿ ನೀಡಲಾಗಿತ್ತು. ಮೆರವಣಿಗೆ, ಬೈಕ್ ರ‍್ಯಾಲಿಗೆ ಅವಕಾಶ ನೀಡಿರಲಿಲ್ಲ. ಇದನ್ನೂ ಓದಿ: Kolara | ತಾಂತ್ರಿಕ ದೋಷ – ಸೇನಾ ಹೆಲಿಕಾಪ್ಟರ್‌ ತುರ್ತು ಭೂಸ್ಪರ್ಶ; ತಪ್ಪಿದ ದುರಂತ

k.s.bhagavan

ಮಹಿಷಾ ದಸರಾ ಆಚರಣೆ ಸ್ಥಳದಲ್ಲಿ ಹೈಡ್ರಾಮವೇ ನಡೆದು ಹೋಯಿತು. ಪೊಲೀಸರು ಹಾಗೂ ಜಿಲ್ಲಾಡಳಿತ ಮಹಿಷ ಮೂರ್ತಿ ಮಾಲಾರ್ಪಣೆ ಮಾಡಲು ಅವಕಾಶ ನೀಡ್ಲಿಲ್ಲ. ಇದ್ರಿಂದ ರೊಚ್ಚಿಗೆದ್ದ ಮಹಿಷಾ ದಸರಾ ಸಮಿತಿ ಜಿಲ್ಲಾಡಳಿತ ಹಾಗೂ ಪೊಲೀಸರ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ರು. ಈ ವೇಳೆ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣ ಆಗಿತ್ತು. ಬಳಿಕ ಎಚ್ಚೆತ್ತ ಪೊಲೀಸರು ಕೇವಲ ಐವರು ಮಾತ್ರ ಬೆಟ್ಟಕ್ಕೆ ತೆರಳಿ ಪುಪ್ಪಾರ್ಚನೆ ಮಾಡಲು ಅವಕಾಶ ಮಾಡಿಕೊಟ್ಟರು. ಪುಷ್ಪಾರ್ಚನೆ ಮಾಡಲು ಐವರನ್ನ ಪೊಲೀಸರು ತಮ್ಮ ಜೀಪ್‌ನಲ್ಲೇ ಕರೆದೊಯ್ದರು. ಈ ಮೂಲಕ ಪೊಲೀಸರೇ ನಿಷೇಧಾಜ್ಞೆಯನ್ನ ಉಲ್ಲಂಘನೆ ಮಾಡಿದ್ರು.

ಈ ವೇಳೆ ಮಾಜಿ ಸಂಸದ ಪ್ರತಾಪ್ ಸಿಂಹ ಹಾಗೂ ಮಹಿಷ ದಸರಾ ಆಚರಣೆ ಸಮಿತಿ ನಡುವೆ ಮಾತಿನ ಜಟಾಪಟಿ ನಡೆಯಿತು. ಇದನ್ನೂ ಓದಿ: Mysuru | ಅನುಮತಿ ಪಡೆಯದೇ ಪಾರ್ಟಿ – 8 ಯುವತಿಯರು ಸೇರಿ 64 ಮಂದಿ ವಿರುದ್ಧ ಕೇಸ್‌ 

Share This Article