ಮುಂಬೈ: ಸಾಮಾನ್ಯವಾಗಿ ಭಾರೀ ಮಳೆಯಾದ ಸಂದರ್ಭದಲ್ಲಿ ಕಾರುಗಳು ನೀರಿನಲ್ಲಿ ಕೊಚ್ಚಿಕೊಂಡು ಹೋದ ಘಟನೆಗಳನ್ನು ನಾವು ನೋಡಿದ್ದೆವೆ. ಆದರೆ ಮುಂಬೈನ ಬೋರಿವಲಿ ಎಂಬ ಪ್ರದೇಶದಲ್ಲಿ ನೀರಿನ ಪೈಪ್ ಒಡೆದ ರಭಸಕ್ಕೆ ಬೋಲೆರೋ ವಾಹನವೊಂದು ಗಾಳಿಯಲ್ಲಿ ಹಾರಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಲದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಮುಂಬೈನ ಬೋರಿವಲಿ ಮತ್ತು ಕಂಡಿವಾಲಿ ನಡುವೆ ನೀರು ಪೂರೈಸುವ ಪೈಪ್ ಲೈನ್ ಒಡೆದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಪೈಪ್ ಒಡೆದು ಭಾರೀ ಪ್ರಮಾಣದಲ್ಲಿ ನೀರು ಹರಿಯುತ್ತಿದ್ದ ಕಾರಣ ಹಲವು ವಾಹನಗಳು ನೀರಿನಲ್ಲಿ ಸಿಲುಕ್ಕಿದ್ದವು. ಈ ವೇಳೆ ಸುಮಾರು 1.5 ಟನ್ ತೂಕದ ಮಹಿಂದ್ರಾ ಬೋಲೆರೊ ವಾಹನವು ನೀರಿನ ರಭಸಕ್ಕೆ ಮೇಲೆ ಹಾರಿ ಜಖಂಗೊಂಡಿದೆ. ಘಟನೆ ವೇಳೆ ವಾಹನದಲ್ಲಿ ಯಾರು ಇಲ್ಲದ ಕಾರಣ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
Advertisement
Advertisement
ಘಟನೆ ಕುರಿತು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದು, ಮುಂಬೈ ನೀರು ಪೂರೈಕೆ ಮಂಡಳಿ ಯಾವ ರೀತಿ ಕಾರ್ಯನಿವಹಿಸುತ್ತಿದೆ ಎಂಬುವುದಕ್ಕೆ ಸ್ಪಷ್ಟ ಉದಾಹಣೆ ಎಂದು ಕಿಡಿಕಾರಿದ್ದಾರೆ. ನೀರಿನ ಸಂಪರ್ಕ ವ್ಯವಸ್ಥೆ ಸರಿಯಾದ ರೀತಿ ನಿರ್ವಹಣೆ ಮಾಡದೆ ಇರುವುದರಿಂದ ಭಾರೀ ಪ್ರಮಾಣದ ನೀರು ವ್ಯರ್ಥವಾಗುತ್ತಿದೆ ಎಂದು ಆರೋಪಿಸಿದ್ದಾರೆ.