ಮುಂಬೈ: ಟೀಂ ಇಂಡಿಯಾದ ಆಲ್‍ರೌಂಡರ್ ಹಾರ್ದಿಕ್ ಪಾಂಡ್ಯ ಐಪಿಎಲ್‍ನಲ್ಲಿ ಉತ್ತಮ ಪ್ರದರ್ಶನ ನೀಡಿ ಟೀಂ ಇಂಡಿಯಾಗೆ ಕಂಬ್ಯಾಕ್ ಮಾಡಿದ್ದಾರೆ. ಇದೀಗ ತಮ್ಮ ಉತ್ತಮ ಪ್ರದರ್ಶನಕ್ಕೆ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ನೀಡಿದ ಆ ಒಂದು ಸಲಹೆ ನೆರವಾಗಿದೆ ಎಂದು ಪಾಂಡ್ಯ ಸ್ಮರಿಸಿಕೊಂಡಿದ್ದಾರೆ.
Advertisement
ನಾನು ಧೋನಿ ಬಳಿ ಕೇಳಿದೆ ನೀವು ಒತ್ತಡದ ಸಮಯದಲ್ಲಿ ಯಾವ ರೀತಿ ಆ ಒತ್ತಡವನ್ನು ನಿಭಾಯಿಸುತ್ತಿರಿ. ಈ ಪ್ರಶ್ನೆಗೆ ಉತ್ತರಿಸಿದ ಧೋನಿ, ನಾವು ನಮ್ಮ ಸ್ಕೋರ್ ಬಗ್ಗೆ ಚಿಂತಿಸಬಾರದು ತಂಡಕ್ಕೆ ಎಷ್ಟು ಸ್ಕೋರ್ ಅವಶ್ಯಕತೆ ಇದೆ ಅದರತ್ತ ಗಮನ ಹರಿಸಬೇಕು ಎಂದಿದ್ದರು. ಈ ಮಾತು ನನಗೆ ಸ್ಪೂರ್ತಿ ನೀಡಿತು ಎಂದಿದ್ದಾರೆ. ಇದನ್ನೂ ಓದಿ: ನಾಳೆ IND Vs SA ಹೈ ಓಲ್ಟೇಜ್ ಮ್ಯಾಚ್ – ಬೆಂಗ್ಳೂರಿನತ್ತ ಎಲ್ಲರ ಚಿತ್ತ
Advertisement
Advertisement
ಪಾಂಡ್ಯ 2021ರ ಟಿ20 ವಿಶ್ವಕಪ್ ಬಳಿಕ ಫಿಟ್‍ನೆಸ್ ಸಮಸ್ಯೆಯಿಂದ ಟೀಂ ಇಂಡಿಯಾದಿಂದ ಹೊರಗುಳಿದಿದ್ದರು. ಆ ಬಳಿಕ ಐಪಿಎಲ್‍ನಲ್ಲಿ ಭರ್ಜರಿ ಪ್ರದರ್ಶನ ತೋರಿ ನಾಯಕನಾಗಿ ಗುಜರಾತ್ ತಂಡವನ್ನು ಚಾಂಪಿಯನ್ ಪಟ್ಟಕ್ಕೆ ಏರಿಸಿದ್ದರು. ನಂತರ ಭಾರತ ತಂಡಕ್ಕೆ ಮರು ಆಯ್ಕೆಗೊಂಡ ಪಾಂಡ್ಯ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲಿ 4 ಪಂದ್ಯಗಳಿಂದ ಕ್ರಮವಾಗಿ 31, 9, 31, 46 ಸೇರಿ ಒಟ್ಟು 117 ರನ್ ಬಾರಿಸಿ ತಂಡಕ್ಕೆ ಅಗತ್ಯ ಬಿದ್ದಾಗ ರನ್ ಏರಿಸುವ ಮೂಲಕ ನೆರವಾಗಿ ಭರ್ಜರಿ ಕಂಬ್ಯಾಕ್ ಮಾಡಿದ್ದಾರೆ. ಇದನ್ನೂ ಓದಿ: 2026ರ ಫಿಫಾ ವಿಶ್ವಕಪ್‌ಗೆ ಮೂರು ರಾಷ್ಟ್ರಗಳ ಆತಿಥ್ಯ – 32 ರಾಷ್ಟ್ರಗಳ 48 ತಂಡಗಳು ಭಾಗಿ
Advertisement
ಪಾಂಡ್ಯ ಆಫ್ರಿಕಾ ಸರಣಿಯಲ್ಲಿ ಮಿಂಚುತ್ತಿದ್ದಂತೆ ಇದೀಗ ಮುಂದಿನ ಐರ್ಲೆಂಡ್ ಸರಣಿಗೆ ಭಾರತ ತಂಡದ ನಾಯಕತ್ವವನ್ನು ನೀಡಲಾಗಿದೆ. ಈ ಮೂಲಕ ಪಾಂಡ್ಯ ತಂಡದ ಶಕ್ತಿಯಾಗಿ ರೂಪುಗೊಳ್ಳುತ್ತಿದ್ದಾರೆ.