– ಇಂದು ಬೆಳ್ತಂಗಡಿ ಠಾಣೆಗೆ ಹಾಜರಾಗಲು ಪೊಲೀಸರ ಸೂಚನೆ
ಮಂಗಳೂರು: ಬುರುಡೆ ಗ್ಯಾಂಗ್ ಮಹೇಶ್ ಶೆಟ್ಟಿ ತಿಮರೋಡಿಗೆ (Mahesh Shetty Thimarody) ಬಂಧನ ಭೀತಿ ಎದುರಾಗಿದೆ. ಅಕ್ರಮ ಶಸ್ತ್ರಾಸ್ತ್ರ ಸಂಗ್ರಹಿಸಿಟ್ಟಿದ್ದ ಹಿನ್ನೆಲೆ ಇಂದು ಬೆಳ್ತಂಗಡಿ ಪೊಲೀಸ್ ಠಾಣೆಗೆ (Belthangady Police Station) ಹಾಜರಾಗಲು ಪೊಲೀಸರು ಸೂಚಿಸಿದ್ದಾರೆ. ಇಂದು ಹಾಜರಾದರೂ, ಆಗದಿದ್ದರೂ ತಿಮರೋಡಿ ಬಂಧನ ಆಗುವ ಸಾಧ್ಯತೆ ಇದೆ.
ಧರ್ಮಸ್ಥಳ ಗ್ರಾಮದಲ್ಲಿ ಶವ ಹೂತಿಟ್ಟ ಪ್ರಕರಣ ಷಡ್ಯಂತ್ರ ಅನ್ನೋದು ಇದೀಗ ಸಾಬೀತಾಗುವ ಹಂತಕ್ಕೆ ಬಂದಿದೆ. ಈ ಷಡ್ಯಂತ್ರ ನಡೆಸಿರೋ ಬುರುಡೆ ಗ್ಯಾಂಗ್‌ನ ಮಹೇಶ್ ಶೆಟ್ಟಿ ತಿಮರೋಡಿಗೆ ಒಂದರ ಮೇಲೊಂದು ಸಂಕಷ್ಟ ಎದುರಾಗಿದೆ. ಒಂದೆಡೆ ಷಡ್ಯಂತ್ರ ನಡೆಸಿರುವ ಪ್ರಕರಣದ ಸೂತ್ರಧಾರಿ ಇದೇ ಮಹೇಶ್ ಶೆಟ್ಟಿ ತಿಮರೋಡಿ ಅನ್ನೋದು ಭಾಗಶಃ ಕನ್ಫರ್ಮ್ ಆಗಿದ್ದು, ಎಸ್‌ಐಟಿ ತನಿಖೆಯಲ್ಲೂ ಇದಕ್ಕೆ ಬೇಕಾದ ಸಾಕ್ಷಿ, ದಾಖಲೆಗಳು ಸಿಕ್ಕಿದೆ. ಇನ್ನೊಂದೆಡೆ ಅಕ್ರಮ ಶಸ್ತ್ರಾಸ್ತ್ರ ಸಂಗ್ರಹಿಸಿಟ್ಟಿದ್ದ ಪ್ರಕರಣದಲ್ಲೂ ತಿಮರೋಡಿಗೆ ಬಂಧನ ಆಗುವ ಭೀತಿ ಎದುರಾಗಿದೆ. ಇದನ್ನೂ ಓದಿ: ತುಮಕೂರಲ್ಲಿ ಇಬ್ಬರು ಮಕ್ಕಳ ಜೊತೆ ತಾಯಿ ನೇಣುಬಿಗಿದುಕೊಂಡು ಆತ್ಮಹತ್ಯೆ ಕೇಸ್; ಮಹಿಳೆಯ ಪತಿ, ಅತ್ತೆ ಬಂಧನ
ಆರೋಪಿ ಚಿನ್ನಯ್ಯ ಬಂಧನವಾದ ಬಳಿಕ ತನಗೆ ಆಶ್ರಯ ಕೊಟ್ಟಿದ್ದು ಷಡ್ಯಂತ್ರದ ಸೂತ್ರಧಾರಿ ಮಹೇಶ್ ಶೆಟ್ಟಿ ತಿಮರೋಡಿ ಎಂದು ಆತ ಬಾಯ್ಬಿಟ್ಟಿದ್ದ. ಹೀಗಾಗಿ ತಿಮರೋಡಿಯ ಉಜಿರೆಯಲ್ಲಿರೋ ಮನೆಗೆ ಎಸ್‌ಐಟಿ ಅಧಿಕಾರಿಗಳು ದಾಳಿ ನಡೆಸಿ ಶೋಧ ನಡೆಸಿದ್ದರು. ಈ ವೇಳೆ ಮನೆಯಲ್ಲಿ ಮಾರಕಾಸ್ತ್ರಗಳು ಸೇರಿ 5.5 ಎಂಎಂನ ಏರ್ ಗನ್ ಪತ್ತೆಯಾಗಿದ್ದು, ಅದನ್ನ ವಶಪಡಿಸಿಕೊಳ್ಳಲಾಗಿದೆ. ಇದನ್ನೂ ಓದಿ: ನಾಳೆಯಿಂದಲೇ ಹಿಂದುಳಿದ ಆಯೋಗದಿಂದ ಸಮೀಕ್ಷೆ – 60 ಪ್ರಶ್ನೆಗಳಿಗೆ ಉತ್ತರ ಪಡೆಯಲಿರೋ ಸರ್ವೇಯರ್ಸ್
ಇನ್ನು ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆದುಕೊಂಡ ಬಳಿಕ ಎಸ್‌ಐಟಿ ಅಧಿಕಾರಿಗಳು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ತಿಮರೋಡಿ ವಿರುದ್ಧ ಪ್ರಕರಣ ದಾಖಲಿಸಿದ್ದರು. ಈ ಬಗ್ಗೆ ತನಿಖೆಗೆ ಬೆಳ್ತಂಗಡಿ ಪೊಲೀಸ್ ಠಾಣೆಗೆ ವಿಚಾರಣೆಗೆ ಹಾಜರಾಗಲು ಸೂಚಿಸಲಾಗಿದೆ. ವಶಕ್ಕೆ ಪಡೆದ ಗನ್‌ಗೆ ಲೈಸೆನ್ಸ್ ಇಲ್ಲದಿದ್ದರೆ ತಿಮರೋಡಿಯನ್ನು ಇಂದು ಬಂಧಿಸುವ ಸಾಧ್ಯತೆ ಇದೆ. ಇದರಿಂದ ಮಹೇಶ್ ಶೆಟ್ಟಿ ತಿಮರೋಡಿ ಎದೆಬಡಿತ ಜೋರಾಗಿದೆ. ಇದನ್ನೂ ಓದಿ: Hassan | ಕಲ್ಲಿನ ಗಣೇಶ ಮೂರ್ತಿಗೆ ಚಪ್ಪಲಿ ಹಾರ ಹಾಕಿದ ಕಿಡಿಗೇಡಿಗಳು
ಆರ್ಮ್ ರೂಲ್ಸ್ 2016ರ ಪ್ರಕಾರ ಏರ್ ಗನ್ ವಿಥ್ ಮಝಲ್ ಎನರ್ಜಿ 0.177 ಇಂಚಿಗೆ (4.5ಎಂಎಂ) ಲೈಸೆನ್ಸ್ ಬೇಡ. ಆದರೆ ತಿಮರೋಡಿ ಬಳಿ 22 ಕ್ಯಾಲಿಬ್ರೆ (5.5 ಎಂಎಂ) ಬಂದೂಕು ಪತ್ತೆಯಾಗಿತ್ತು. 22 ಕ್ಯಾಲಿಬ್ರೆ (5.5 ಎಂಎಂ) ಏರ್ ಗನ್‌ಗಳಿಗೆ ಆರ್ಮ್ ಆಕ್ಟ್ ಅಡಿಯಲ್ಲಿ ಲೈಸೆನ್ಸ್ ಕಡ್ಡಾಯವಾಗಿದ್ದು, ತಿಮರೋಡಿ ಬಳಿ ಇರುವ ಜೆಎಎಂಆರ್-65, ಡಿಎಡಬ್ಲ್ಯೂ ಎ060 ಸಿಎಎಲ್.22/5.5 ಎಂಎಂ ಬಂದೂಕಿಗೆ ಲೈಸೆನ್ಸ್ ಕಡ್ಡಾಯ. ಹೀಗಾಗಿ ಲೈಸೆನ್ಸ್ ಇಲ್ಲದೇ ಇದ್ದರೆ ತಿಮರೋಡಿ ವಿರುದ್ಧ ಕಾನೂನು ಕ್ರಮ ಫಿಕ್ಸ್ ಆಗಲಿದ್ದು, ಬಂಧನ ಆಗೋ ಸಾಧ್ಯತೆ ಇದೆ. ಇದನ್ನೂ ಓದಿ: ಮಹಾಲಯ ಅಮಾವಾಸ್ಯೆ; ಮಲೆ ಮಹದೇಶ್ವರ ಬೆಟ್ಟಕ್ಕೆ ಭಕ್ತರ ದಂಡು