ಮಡಿಕೇರಿ: ಗಿರಿಜನರು ಎಂದಾಕ್ಷಣ ಸಾಮಾನ್ಯವಾಗಿ ನೆನಪಾಗೋದು ಸಂಕಷ್ಟದ ಬದುಕು. ಮುರುಕಲು ಗುಡಿಸಲು, ಕೂಲಿ ಮಾಡಿಕೊಂಡು ಒಪ್ಪತ್ತಿನ ಊಟಕ್ಕೂ ಪರದಾಡುವ ಅವರ ಸ್ಥಿತಿಗತಿ. ಆದ್ರೆ, ಮಡಿಕೇರಿಯ ಇವತ್ತಿನ ಪಬ್ಲಿಕ್ ಹೀರೋ ಆಗಿರೋ ಮಹೇಶ್ ಅನ್ನೋವ್ರು ಸ್ವಾವಲಂಬಿ ಬದುಕು ಕಟ್ಟಿಕೊಂಡು ಮಾದರಿ ರೈತರಾಗಿದ್ದಾರೆ.
ಹೌದು. ಮಡಿಕೇರಿಯ ಕುಶಾಲನಗರದ ಬಳಿಯ ಹೊಸಕಾಡು ಗ್ರಾಮದ ಮಹೇಶ್ ಕುಟುಂಬ ಗಿರಿಜನರಿಗೆ ಪುನರ್ವಸತಿಗಾಗಿ ಮೂರು ದಶಕದ ಹಿಂದೆ ಸರ್ಕಾರ ನೀಡಿದ ಎರಡು ಎಕರೆ ಜಮೀನನಲ್ಲಿ ಬದುಕು ಕಟ್ಟಿಕೊಂಡಿದ್ದಾರೆ. ವಿವಿಧ ಬಗೆಯ ಜೋಳದ ಜೊತೆಗೆ ಹೈನುಗಾರಿಕೆ ನಡೆಸಿ ಜೀವನವನ್ನ ಹಸನು ಮಾಡಿಕೊಂಡಿದ್ದಾರೆ.
Advertisement
ತಮ್ಮ ಜಮೀನಿನ ಜೊತೆಗೆ ನೆರೆಯವರ 8 ಎಕರೆ ಜಮೀನನ್ನು ಲೀಸ್‍ಗೆ ಪಡೆದು ಅಲ್ಲಿಯೂ ಜೋಳ, ಶುಂಠಿ ಬೆಳೆಯುತ್ತಿದ್ದಾರೆ. ಹೈನುಗಾರಿಕೆ ಜೊತೆಗೆ ರೇಷ್ಮೆ ಹುಳು ಸಾಕಾಣೆಯನ್ನೂ ನಡೆಸುತ್ತಿದ್ದಾರೆ. ರೇಷ್ಮೆ ಇಲಾಖೆ ಸಹಾಯದಿಂದ ಒಂದು ಎಕರೆಯಲ್ಲಿ ಹಿಪ್ಪುನೇರಳೆ ಬೆಳೆದಿದ್ದಾರೆ.
Advertisement
ಒಟ್ಟಿನಲ್ಲಿ ಗಿರಿಜನರಾದರೂ ಮಹೇಶ್ ಅವರ ದೃಢ ನಿರ್ಧಾರದಿಂದಾಗಿ ಸುಂದರ ಬದುಕು ಕಟ್ಟಿಕೊಂಡಿದ್ದಾರೆ.
Advertisement
https://www.youtube.com/watch?v=3L9wtokj19k