ಟಾಲಿವುಡ್ ನಟ ಮಹೇಶ್ ಬಾಬು ತಮ್ಮ ಪತ್ನಿ ನಮ್ರತಾ ಜೊತೆ ಹೈದರಾಬಾದ್‌ನ ಏರ್‌ಪೋರ್ಟ್‌ನಲ್ಲಿ ಸ್ಟೈಲ್ ಆಗಿ ಕಾಣಿಸಿಕೊಂಡಿದ್ದಾರೆ. ಪತ್ನಿ ನಮ್ರತಾ ಶಿರೋಡ್ಕರ್ ಜೊತೆ ಹೈದರಾಬಾದ್‌ನ ಏರ್‌ಪೋರ್ಟ್‌ನಿಂದ ತಮ್ಮ ಸಿನಿಮಾದ ಶೂಟಿಂಗ್‌ಗಾಗಿ ಹೊರಟಿದ್ದಾರೆ ಎನ್ನಲಾಗ್ತಿದೆ. ಈ ವೇಳೆ ಕ್ಯಾಮೆರಾದ ಕಣ್ಣಲ್ಲಿ ಕ್ಯಾಪ್ಚರ್ ಆಗಿದೆ ಈ ಜೋಡಿ. ಮಹೇಶ್ ಬಾಬು ಕಣ್ಣಿಗೆ ಕೂಲಿಂಗ್ ಗ್ಲಾಸ್, ತಲೆಗೆ ಕ್ಯಾಪ್ ಹಾಕಿ ನಮ್ರತಾ ಜೊತೆ ನಡೆದಿದ್ದಾರೆ.
ಮಹೇಶ್ ಬಾಬು ಹಾಗೂ ನಿರ್ದೇಶಕ ರಾಜಮೌಳಿ ಕಾಂಬಿನೇಷನ್‌ನ ಎಸ್‌ಎಸ್‌ಎಂಬಿ-29 ಸಿನಿಮಾದ ಶೂಟಿಂಗ್ ವಿದೇಶದಲ್ಲಿ ಭರ್ಜರಿಯಾಗಿ ಮಾಡಲು ಚಿತ್ರತಂಡ ಪ್ಲ್ಯಾನ್ ಮಾಡಿದೆ. ದಟ್ಟವಾದ ಅರಣ್ಯಪ್ರದೇಶದಲ್ಲಿ ಸಿನಿಮಾದ ಶೂಟಿಂಗ್ ಕೂಡಾ ಮಾಡಲು ಚಿತ್ರತಂಡ ತಯಾರಿ ಮಾಡಿಕೊಂಡಿದೆ. ಇದಕ್ಕಾಗಿ ದಕ್ಷಿಣ ಆಫ್ರಿಕಾದಲ್ಲಿ ಶೂಟಿಂಗ್ ಮಾಡಲಿದೆ ಚಿತ್ರತಂಡ. ಅಂದಹಾಗೆ ಈ ಸಿನಿಮಾ 900-1000 ಕೋಟಿ ಬಂಡವಾಳದಲ್ಲಿ ಮೂಡಿಬರಲು ಸಜ್ಜಾಗಿದೆ.
ಮಹೇಶ್ ಬಾಬು ಜೊತೆಗೆ ಈ ಸಿನಿಮಾದಲ್ಲಿ ಪ್ರಿಯಾಂಕಾ ಚೋಪ್ರಾ, ಆರ್.ಮಾಧವನ್ ಚಿತ್ರದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈಗಾಗ್ಲೆ ಪ್ರಿಯಾಂಕಾ ಛೋಪ್ರಾ ಭಾಗದ ಕೆಲ ದೃಶ್ಯಗಳನ್ನ ಹೈದರಾಬಾದ್‌ನ ಒಳಾಂಗಣ ಸ್ಟುಡಿಯೋದಲ್ಲಿ ಚಿತ್ರೀಕರಣ ಮಾಡಿದೆಯಂತೆ ಚಿತ್ರತಂಡ. ಸದ್ಯ ಎಸ್‌ಎಸ್‌ಎಂಬಿ-29 ಸಿನಿಮಾದ ಶೂಟಿಂಗ್‌ಗಾಗಿ ಪತ್ನಿ ನಮ್ರತಾ ಜೊತೆ ಮಹೇಶ್ ಬಾಬು ವಿದೇಶಕ್ಕೆ ಹಾರಿದ್ದಾರೆ ಎನ್ನಲಾಗ್ತಿದೆ. ಆದಷ್ಟು ಬೇಗ ಶೂಟಿಂಗ್ ಮುಗಿಸಿ 2026ರ ವೇಳೆಗೆ ಸಿನಿಮಾವನ್ನ ತೆರೆಗೆ ತರುವ ನಿಟ್ಟಿನಲ್ಲಿ ಕೆಲಸಗಳು ನಡೆದಿವೆ.