ನವದೆಹಲಿ: ಕೆರೆಬಿಯನ್ ಬೌಲರ್ ಸದ್ಯ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಟಗಾರ ಬ್ರಾವೋ ಹಾಡಿಗೆ ಎಂಎಸ್ ಧೋನಿ ಪುತ್ರಿ ಜಿವಾ ಡಾನ್ಸ್ ಮಾಡಿರುವ ವಿಡಿಯೋವನ್ನು ಸಿಎಸ್‍ಕೆ ತನ್ನ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದೆ.
ಬ್ರಾವೋ ಕ್ರೀಡಾಂಗಣದಲ್ಲಿ ಉತ್ತಮ ಬೌಲರ್ ಎಂಬುವುದರೊಂದಿಗೆ ಉತ್ತಮ ಹಾಡುಗಾರ ಎಂಬುವುದು ಎಲ್ಲರಿಗೂ ತಿಳಿದ ಸಂಗತಿ. 2016 ರಲ್ಲಿ ಬಿಡುಗಡೆಯಾದ ಬ್ರಾವೋ ರ `ಚಾಂಪಿಯನ್’ ಹಾಡು ಹಿಟ್ ಆಗಿತ್ತು. ಈಗಾಗಲೇ ಹಲವು ಸಂಗೀತ ವಿಡಿಯೋಗಳನ್ನು ಬ್ರಾವೋ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು ಅಭಿಮಾನಿಗಳಿಗೆ ಮನರಂಜನೆಯನ್ನು ನೀಡಿದೆ. ಈಗ ಈ ಹಾಡಿಗೆ ಧೋನಿ ಪುತ್ರಿ ಡಾನ್ಸ್ ಮಾಡಿದ್ದಾಳೆ.
ಇತ್ತೀಚೆಗೆ ಏರ್ಪಡಿಸಿದ್ದ ಖಾಸಗಿ ಕಾರ್ಯಕ್ರಮದಲ್ಲಿ ಬ್ರಾವೋ ತಮ್ಮ ಗಾಯನದ ಪ್ರದರ್ಶನ ನೀಡುತ್ತಿದ್ದರು, ಈ ವೇಳೆ ಸಿಎಸ್‍ಕೆ ತಂಡದ ಮತ್ತೊಬ್ಬ ಆಟಗಾರ ರೈನಾರ ಪುತ್ರಿ ಜರೀಕಾ ಜೊತೆ ಸೇರಿ ಜಿವಾ ಡಾನ್ಸ್ ಮಾಡಿದ್ದಾಳೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲಾತಾಣದಲ್ಲಿ ವೈರಲ್ ಆಗಿದ್ದು, ಪುಟ್ಟ ಜಿವಾ ಡ್ಯಾನ್ಸ್ ಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದನ್ನು ಓದಿ: ಪಂದ್ಯ ಮುಗಿತು, ಡ್ಯಾಡಿ ಡ್ಯೂಟಿಗೆ ಹಾಜರಾದ ಧೋನಿ: ವಿಡಿಯೋ ವೈರಲ್
ಕಳೆದ ಕೆಲ ದಿನಗಳ ಹಿಂದೆ ಸಹ ಧೋನಿ ತಮ್ಮ ಮಗಳು ಡಾನ್ಸ್ ಮಾಡುತ್ತಿದ್ದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು. ಅಲ್ಲದೇ ಪಂದ್ಯ ಮುಕ್ತಾಯವಾದ ಬಳಿಕ ಧೋನಿ ಮಗಳ ತಲೆಗೂದಲನ್ನು ಒಣಗಿಸುತ್ತಿರುವ ಫೋಟೋ ಸಹ ತುಂಬಾ ವೈರಲ್ ಆಗಿತ್ತು.
https://www.instagram.com/p/Bi1BLNiltYJ/?utm_source=ig_embed