– ಗುರುವಾರ ಸಂಜೆ ಪ್ರಮಾಣವಚನ ಸ್ವೀಕಾರ
– ‘ಏಕ್ ಹೈ, ಸೇಫ್ ಹೈ’ ಪುನರುಚ್ಚರಿಸಿದ ಫಡ್ನವಿಸ್
ಮುಂಬೈ: ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ ವಿಚಾರವಾಗಿ ಉಂಟಾಗಿದ್ದ ಬಿಕ್ಕಟ್ಟು ಬಗೆಹರಿದಿದೆ. ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ದೇವೇಂದ್ರ ಫಡ್ನವಿಸ್ ಅವರನ್ನು ಮುಂದಿನ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಲಾಗಿದೆ. ಗುರುವಾರ ಸಂಜೆ 5 ಗಂಟೆಗೆ ಮುಂಬೈನ ಆಜಾದ್ ಮೈದಾನದಲ್ಲಿ ನಡೆಯುವ ಸಮಾರಂಭದಲ್ಲಿ ಫಡ್ನವಿಸ್ ಸಿಎಂ ಆಗಿ ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆ.
ಹಿರಿಯ ನಾಯಕರ ನೇತೃತ್ವದಲ್ಲಿ ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಫಡ್ನವಿಸ್ ಅವರನ್ನ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ. ಶಾಸಕಾಂಗ ಪಕ್ಷದ ನಾಯಕರಾಗಿಯೂ ಫಡ್ನವಿಸ್ ಆಯ್ಕೆಯಾದ್ರು. ಈ ಬೆನ್ನಲ್ಲೇ ಹಾಲಿ ಸಿಎಂ ಏಕನಾಥ್ ಶಿಂಧೆ, ಎನ್‌ಸಿಪಿ ಅಜಿತ್ ಪವಾರ್ ಜೊತೆಗೂಡಿ ರಾಜ್ಯಪಾಲರನ್ನು ಭೇಟಿ ಮಾಡಿದ ಫಡ್ನವಿಸ್, ಸರ್ಕಾರ ರಚಿಸಲು ಹಕ್ಕು ಮಂಡಿಸಿದರು.
ಏಕನಾಥ್ ಶಿಂಧೆ-ಅಜಿತ್ ಪವಾರ್‌ಗೆ ಡಿಸಿಎಂ ಹುದ್ದೆಯ ಆಫರ್ ಅನ್ನು ಬಿಜೆಪಿ ನೀಡಿದೆ ಎಂದು ಹೇಳಲಾಗುತ್ತಿದೆ. ಇದರ ಮಧ್ಯೆ, ಗುರುವಾರ ಸಂಜೆ 5 ಗಂಟೆಗೆ ನಡೆಯಲಿರುವ ಸಿಎಂ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಮುಂಬೈನ ಆಜಾದ್ ಮೈದಾನದಲ್ಲಿ ಸಕಲ ಸಿದ್ಧತೆ ನಡೆದಿವೆ. ಪ್ರಧಾನಿ ಮೋದಿ ಸೇರಿ ಎರಡು ಸಾವಿರ ಗಣ್ಯರು, 40,000 ಸಾವಿರ ಕಾರ್ಯಕರ್ತರಿಗೆ ಆಸನ ವ್ಯವಸ್ಥೆ ಮಾಡಲಾಗಿದೆ. ಇದನ್ನೂ ಓದಿ: ತಟಸ್ಥ ನಿಲುವಿನ ಬಿಜೆಪಿ ನಾಯಕರಿಗೆ ಯಡಿಯೂರಪ್ಪ ಕುಟುಂಬದ ಮೇಲೆ ಆಕ್ರೋಶ ಇದೆ: ಯತ್ನಾಳ್
ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸಲು ಹಕ್ಕು ಮಂಡಿಸಿದ ನಂತರ ಪಕ್ಷದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಫಡ್ನವಿಸ್, ಪ್ರಧಾನಿ ಮೋದಿಯವರ ‘ಏಕ್ ಹೈ, ಸೇಫ್ ಹೈ’ ಘೋಷಣೆಯನ್ನು ಪುನರುಚ್ಚರಿಸಿದರು. ಇದನ್ನೂ ಓದಿ: ದೇವೇಂದ್ರ ಫಡ್ನವೀಸ್‌ಗೆ ‘ಮಹಾ’ ಸಿಎಂ ಪಟ್ಟ – ನಾಳೆ ಪ್ರಮಾಣವಚನ ಸ್ವೀಕಾರ
ಶಿಂಧೆ ಅವರು ಈ ಸರ್ಕಾರದಲ್ಲಿ ನಮ್ಮೊಂದಿಗೆ ಇರಬೇಕು ಎಂಬುದು ಮಹಾಯುತಿ ಕಾರ್ಯಕರ್ತರ ಆಶಯವಾಗಿದೆ. ಅವರು ನಮ್ಮೊಂದಿಗಿರುತ್ತಾರೆ ಅನ್ನೋ ಭರವಸೆ ನನಗಿದೆ, ಅವರು ನೀಡಿದ ಬೆಂಬಲಕ್ಕೆ ನಾನು ಕೃತಜ್ಞನಾಗಿದ್ದೇನೆ. ಜನರಿಗೆ ಕೊಟ್ಟ ಎಲ್ಲ ಭರವಸೆಗಳನ್ನು ಈಡೇರಿಸುತ್ತೇವೆ. ಮಹಾರಾಷ್ಟ್ರಕ್ಕೆ ಉತ್ತಮ ಆಡಳಿತ ನೀಡಲು ಎಲ್ಲಾ ಅಗತ್ಯ ನಿರ್ಧಾರಗಳನ್ನು ಸಾಮೂಹಿಕವಾಗಿ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಪಂಜಾಬ್ ಮಾಜಿ ಡಿಸಿಎಂ ಮೇಲೆ ಗುಂಡಿನ ದಾಳಿ; ಆರೋಪಿ ಹಿಡಿದು ಪೊಲೀಸರಿಗೆ ಒಪ್ಪಿಸಿದ ಜನ
ಫಡ್ನವಿಸ್ ರಾಜಕೀಯ ಪಥ
* 1970ರ ಜುಲೈ 22ರಂದು ನಾಗ್ಪುರದಲ್ಲಿ ಫಡ್ನವಿಸ್ ಜನನ
* ಜನಸಂಘದಲ್ಲಿ ಕೆಲಸ ಮಾಡಿದ್ದ ತಂದೆ ಗಂಗಾಧರ ಫಡ್ನವಿಸ್
* 1989ರಲ್ಲಿ ಎಬಿವಿಪಿಗೆ ಸೇರ್ಪಡೆ.. ನಾಗ್ಪುರ ಪಾಲಿಕೆ ಸದಸ್ಯರಾಗಿ ಆಯ್ಕೆ
* 1997ರಲ್ಲಿ ನಾಗ್ಪುರ ಪಾಲಿಕೆಯ ಮೇಯರ್ ಆಗಿ ಆಯ್ಕೆ.. ಆಗ ಅವರ ವಯಸ್ಸು 27 ವರ್ಷ
* 1999ರಿಂದ ಈವರೆಗೂ ನಾಲ್ಕು ಬಾರಿ ಶಾಸಕರಾಗಿ ಆಯ್ಕೆ
* 2014ರಲ್ಲಿ ಮೊದಲ ಬಾರಿಗೆ ಸಿಎಂ… ಆಗ ಅವರ ವಯಸ್ಸು 44 ವರ್ಷ
* 2019ರಲ್ಲಿ 2ನೇ ಬಾರಿ ಸಿಎಂ… ಬರೀ ಐದು ದಿನದಲ್ಲೇ ಸರ್ಕಾರ ಪತನ
* ಶಿಂಧೆ ಸರ್ಕಾರದಲ್ಲಿ ಡಿಸಿಎಂ ಆಗಿ ಸೇವೆ..
* 2024… ಮೂರನೇ ಬಾರಿ ಮುಖ್ಯಮಂತ್ರಿಯಾಗಿ ಆಯ್ಕೆ