ಧಾರವಾಡ: ಉತ್ತರ ಪ್ರದೇಶದಲ್ಲಿ ಗಾಂಧಿ ಭಾವಚಿತ್ರಕ್ಕೆ ಗುಂಡಿಕ್ಕಿ, ಗೋಡ್ಸೆಗೆ ಜೈಕಾರ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಗಾಂಧೀಜಿ ಮೊಮ್ಮಗ ರಾಜಮೋಹನ್ ಗಾಂಧಿ, ಈ ರೀತಿಯ ಹುಚ್ಚಾಟಗಳು ಎಲ್ಲ ಕಾಲದಲ್ಲಿ ನಡೆದಿವೆ ಎಂದು ಅಸಮಾಧಾನ ಹೊರಹಾಕಿದ್ದಾರೆ.
ಧಾರವಾಡದಲ್ಲಿ ಮಾತನಾಡಿದ ಅವರು, ಇದರ ಬಗ್ಗೆ ಗಾಂಧಿ ಪರಿವಾರದವರು ಹೇಳಲೇ ಬೇಕಿಲ್ಲ, ದೇಶದ ಜನರೇ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಇಂತಹ ಘಟನೆಗಳು ಆದಾಗ ಆ ಕ್ಷಣಕ್ಕೆ ದೇಶದ ಪ್ರಧಾನಿಯಿಂದ ಯಾಕೆ ಪ್ರತಿಕ್ರಿಯೆ ಬರೋಲ್ಲ, ಪ್ರಧಾನಿಯ ಈ ಮೌನ ನಮಗೆ ಆಶ್ಚರ್ಯವಾಗುವಂತೆ ಮಾಡಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನು ಓದಿ: ಗಾಂಧೀಜಿ ಭಾವಚಿತ್ರಕ್ಕೆ ಗುಂಡಿಟ್ಟು ಗೋಡ್ಸೆ ಅಮರ್ ರಹೇ ಎಂದ ಹಿಂದೂ ಮಹಾಸಭಾ ನಾಯಕಿ!
ಗಾಂಧೀಜಿ ಭಾವಚಿತ್ರಕ್ಕೆ ಅವಮಾನ ಮಾಡಿದ್ದಕ್ಕೆ ನಮಗೆ ಆಶ್ಚರ್ಯ ಆಗ್ತಿಲ್ಲ. ಆದರೆ ಈ ವಿಷಯದಲ್ಲಿ ಏನೂ ಮಾತನಾಡದ ಪ್ರಧಾನಿ ಬಗ್ಗೆ ನಮಗೆ ಆಶ್ಚರ್ಯ ಆಗುತ್ತಿದೆ. ದೇಶದ ಪ್ರಧಾನಿ ಪ್ರತಿ ಸಮಯದಲ್ಲಿಯೂ ಗಾಂಧೀಜಿ ಸ್ಮರಣೆ ಮಾಡ್ತಾನೆ ಇರುತ್ತಾರೆ. ಹೊರದೇಶದಿಂದ ಬಂದವರನ್ನು ಕರೆದುಕೊಂಡು ಹೋಗಿ ಸಾಬರಮತಿ ತೋರಿಸ್ತಾರೆ. ಗಾಂಧೀಜಿ ಚರಕ ತಿರುಗಿಸಿ ತೋರಿಸ್ತಾರೆ. ಆದರೆ ಅದೇ ಗಾಂಧೀಜಿಗೆ ಹೀಗಾದಾಗ ಯಾಕೆ ಪ್ರತಿಕ್ರಿಯೆ ನೀಡುತ್ತಿಲ್ಲ. ಇದೇ ವೇಳೆ ಪ್ರಜಾಪ್ರಭುತ್ವದ ಮೇಲೆ ಇಂತಹ ಹಲ್ಲೆ ನಡೆಯುತ್ತಲೇ ಇವೆ. ಆದರೆ ಅದು ಶಕ್ತಿಯುತವಾಗಿಯೇ ಇದೆ ಎಂದು ರಾಜಮೋಹನ್ ಗಾಂಧಿ ಆಕ್ರೋಶ ಹೊರ ಹಾಕಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv