– ಮನುಷ್ಯನ ದುರಾಸೆಯಿಂದ ಪ್ರಕೃತಿ ಹಾಳಾಗುತ್ತಿದೆ
ಬೆಂಗಳೂರು: ಬಲಪಂಥೀಯರೇ ಗಾಂಧಿಯನ್ನು (Mahatma Gandhi) ಕೊಂದು ಹಾಕಿರೋದು. ಗಾಂಧಿ ಕೊಂದ ಗೋಡ್ಸೆಯನ್ನು ಪೂಜೆ ಮಾಡ್ತಾರೆ ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಬೇಸರ ವ್ಯಕ್ತಪಡಿಸಿದರು.
’21ನೇ ಶತಮಾನಕ್ಕೆ ಮಹಾತ್ಮ ಗಾಂಧೀಜಿ’ ವಿಚಾರ ಕುರಿತ ಅಂತರರಾಷ್ಟ್ರೀಯ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗಾಂಧೀಜಿಯವರ ವಿಚಾರಗಳು, ಸಮಾಜಕ್ಕೆ ನೀಡಿದ ಮಾರ್ಗದರ್ಶನಗಳು ಪ್ರಸ್ತುತತೆ 19-20ನೇ ಶತಮಾನಕ್ಕೆ ಮಾತ್ರ ಸೀಮಿತವಾಗಿರಲಿಲ್ಲ. ಇಂದಿಗೂ ಅದು ಪ್ರಸ್ತುತ. ಗಾಂಧಿಯನ್ನ ಮರೆತರೆ ಇಡೀ ಸಮಾಜವನ್ನೇ ಮರೆತ ಹಾಗೆ, ವಿಶ್ವವನ್ನ ಮರೆತ ಹಾಗೆ. ಗಾಂಧಿ ವಿಚಾರ ಮೆಲುಕು ಹಾಕಬೇಕು. ಆ ದಾರಿಯಲ್ಲಿ ನಡೆಯುವ ಪ್ರಯತ್ನ ಮಾಡುವುದು ಅವಶ್ಯಕ ಎಂದು ತಿಳಿಸಿದರು. ಇದನ್ನೂ ಓದಿ: MUDA Scam | ಪ್ರಾಸಿಕ್ಯೂಷನ್ ಸಮರದಲ್ಲಿ ಸೈಲೆಂಟ್ ಅಸ್ತ್ರ ಪ್ರಯೋಗಿಸಿದ ರಾಹುಲ್ ಗಾಂಧಿ!
ಕೋಮು ಸಂಘರ್ಷ ಶುರು ಆಗಿದೆ, ಇದು ಇರಬಾರದು. ಹುಟ್ಟುವಾಗ ಎಲ್ಲ ವಿಶ್ವಮಾನವ, ಬೆಳೆಯುತ್ತ ಅಲ್ಪ ಮಾನವರಾಗುತ್ತಾರೆ ಅಂತಾ ಕುವೆಂಪು ಹೇಳಿದ್ದಾರೆ. ವಿಶ್ವ ಮಾನವ ಆಗೋದು ಕಷ್ಟ. ಆ ದಾರಿಯಲ್ಲಿ ಬೆಳೆಯೋದು ಕಷ್ಟ ಆಗಲ್ಲ. ಅಸಹನೆ ಬೆಳೆಸಿಕೊಳ್ಳುವುದು ಇರಬಾರದು. ಹೊಂದಾಣಿಕೆ, ಸೌಹಾರ್ದತೆಯಿಂದ ಬಾಳಬೇಕು ಎಂದರು.
ಮನುಷ್ಯನ ಸ್ವಯಂಕೃತ ಅಪಮಾನದಿಂದ ಜಾಗತಿಕ ತಾಪಮಾನ ಜಾಸ್ತಿ ಆಗ್ತಿದೆ. ನಮ್ಮ ಅವಶ್ಯಕತೆಗಳನ್ನು ಪ್ರಕೃತಿ ಈಡೇರಿಸುತ್ತದೆ. ನಮ್ಮ ದುರಾಸೆಗಳನ್ನ ಪೂರೈಸಲು ಸಾಧ್ಯವಿಲ್ಲ. ಮನುಷ್ಯನ ದುರಾಸೆಯಿಂದ ಪ್ರಕೃತಿ ಹಾಳಾಗುತ್ತಿದೆ ಎಂದು ಈ ವೇಳೆ ಕೇರಳ, ಶಿರೂರು ಘಟನೆಯನ್ನೂ ಮೆಲುಕು ಹಾಕಿದರು. ಇದನ್ನೂ ಓದಿ: Karkala | ಮದ್ಯದಲ್ಲಿ ಮಾದಕ ವಸ್ತು ನೀಡಿ ಅತ್ಯಾಚಾರ – ಗ್ಯಾಂಗ್‌ರೇಪ್ ಶಂಕೆ?
ಜಾಗತಿಕ ತಾಪಮಾನ ಹೆಚ್ಚಾಗುತ್ತದೆ. ಭೂಮಿ ವೇಗವಾಗಿ ಬಿಸಿಯಾಗುತ್ತದೆ. ಆಗ ಬರ, ಪ್ರವಾಹ ಜಾಸ್ತಿಯಾಗುತ್ತದೆ. ಸಿದ್ದರಾಮಯ್ಯ ಅಧಿಕಾರಕ್ಕೆ ಬಂದಾಗ ಬರಗಾಲ ಅಂತಾ ಕೆಲವರು ಮೌಢ್ಯವನ್ನ ನಂಬುವವರು ಟೀಕೆ ಮಾಡಿದರು. ಮೌಢ್ಯವನ್ನ ಬಿತ್ತುವ ಪ್ರಯತ್ನ ಮಾಡ್ತಿದ್ದಾರೆ. ಸಿದ್ದರಾಮಯ್ಯ ಕಾಲು ಗುಣದಿಂದ ಬರ ಅಂದ್ರು. ಸಾರ್ವಜನಿಕ ಜೀವನದಲ್ಲಿದ್ದವರು ಹೇಳುವ ಮಾತಿದು. ಪ್ರಕೃತಿ ವಿಕೋಪ ಆದ್ರೆ ಯಾರೋ ವ್ಯಕ್ತಿ ಜವಾಬ್ದಾರರು ಅನ್ನೋದು ಕುಟಿಲ ಪ್ರಯತ್ನ. ವೈಜ್ಞಾನಿಕ, ವೈಚಾರಿತೆಯಿಂದ ಯೋಚನೆ ಮಾಡ್ಬೇಕು. ವಿದ್ಯಾವಂತರೇ ಮೌಢ್ಯಗಳನ್ನ ಆಚರಣೆ ಮಾಡುವವರಿದ್ದಾರೆ. ಬುದ್ಧನ ಕಾಲದಲ್ಲೇ ಕರ್ಮ ಸಿದ್ಧಾಂತವನ್ನು ತಿರಸ್ಕಾರ ಮಾಡಿದ್ರು ಎಂದು ಬೇಸರಿಸಿದರು.