CrimeLatestMain PostNational

ಗಾಂಧಿ ಪ್ರತಿಮೆಯನ್ನು ಹಾನಿಗೊಳಿಸಿದ ದುಷ್ಕರ್ಮಿಗಳು

ಭೋಪಾಲ್: ಮಹಾತ್ಮ ಗಾಂಧಿಯ (Mahatma Gandhi) ಪ್ರತಿಮೆಯನ್ನು (Statue) ದುಷ್ಕರ್ಮಿಗಳು ಹಾನಿಗೊಳಿಸಿರುವ ಘಟನೆ ಮಧ್ಯಪ್ರದೇಶದ ಖಾಂಡ್ವಾ ಜಿಲ್ಲೆಯಲ್ಲಿ ನಡೆದಿದೆ.

ಮಧ್ಯಪ್ರದೇಶದ (Madhya Pradesh) ಖಾಂಡ್ವಾ ಜಿಲ್ಲೆ ರಂಗಾವ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಘಟನೆಗೆ ಸಂಬಂಧಿಸಿ ಜಾವರ್ ಗ್ರಾಮ ಪಂಚಾಯತ್ ಕಾರ್ಯದರ್ಶಿ ದೇವರಾಜ್ ಸಿಂಗ್ ನೀಡಿದ ದೂರಿನ ಮೇರೆಗೆ ಜವರ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

POLICE JEEP

ಸ್ಥಳೀಯ ಕಾಂಗ್ರೆಸ್ ಕಾರ್ಯಾಧ್ಯಕ್ಷ ಕುಂದನ್ ಮಾಳವಿಯಾ ಮಾತನಾಡಿ, ಘಟನೆಯು ಗ್ರಾಮಸ್ಥರನ್ನು ಕೆರಳಿಸಿದೆ. ಇದರಲ್ಲಿ ಭಾಗಿಯಾದವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು. ಇದನ್ನೂ ಓದಿ: BJPಯಂತೆ ಒಂದೊಂದು ಸಮಾಜಕ್ಕೆ ಒಂದೊಂದು ಸಮಾವೇಶ ಮಾಡಲ್ಲ – HDK

YouTube video

ಗಾಂಧಿ ಪ್ರತಿಮೆಗೆ ಕಿಡಿಗೇಡಿಗಳು ಹಾನಿ ಮಾಡಿರುವುದು ಇದೇ ಮೊದಲಲ್ಲ. ಈ ವರ್ಷದ ಆರಂಭದಲ್ಲಿ ಪಂಜಾಬ್‍ನ ಬಟಿಂಡಾ ಜಿಲ್ಲೆಯ ಸಾರ್ವಜನಿಕ ಉದ್ಯಾನವನದಲ್ಲಿ ಹಾಗೂ ಕೆನಡಾದ ಒಂಟಾರಿಯೊ ಪ್ರಾಂತ್ಯದಲ್ಲಿ ಸ್ಥಾಪಿಸಲಾದ ಗಾಂಧಿ ಪ್ರತಿಮೆಗಳನ್ನು ದುಷ್ಕರ್ಮಿಗಳು ಹಾನಿಗೊಳಿಸಿದ್ದರು. ಇದನ್ನೂ ಓದಿ: ಬೆಳಗಾವಿಯಲ್ಲಿ ನಡೆಯಲಿದೆ ಅದ್ಧೂರಿ ಕನ್ನಡ ರಾಜ್ಯೋತ್ಸವ – ಕನ್ನಡಿಗರಿಗೆ 1 ಲಕ್ಷ ಹೋಳಿಗೆ ಊಟ

Live Tv

Leave a Reply

Your email address will not be published. Required fields are marked *

Back to top button