ರಾಯಚೂರು: ಮಹಾಶಿವರಾತ್ರಿ ಹಿನ್ನೆಲೆ ರಾಯಚೂರಿನ (Raichuru) ಚಂದ್ರಮೌಳೇಶ್ವರ ದೇವಾಲಯದ ಆವರಣದಲ್ಲಿ ಪಾರ್ವತಿ ಪರಮೇಶ್ವರ ಕಲ್ಯಾಣೋತ್ಸವ ಭಕ್ತಿಭಾವದ ಜೊತೆ ಸಂಭ್ರಮ ಸಡಗರದಿಂದ ಅದ್ದೂರಿಯಾಗಿ ನಡೆಯಿತು.
ಐತಿಹಾಸಿಕ ಉದ್ಭವ ಶಿವಲಿಂಗ ದೇವಸ್ಥಾನದಲ್ಲಿ ಪ್ರತಿ ವರ್ಷ ಶಿವರಾತ್ರಿಯನ್ನ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಈ ಬಾರಿ ವಿಶೇಷವಾಗಿ ಪಾರ್ವತಿ ಪರಮೇಶ್ವರ ಕಲ್ಯಾಣೋತ್ಸವ ಆಯೋಜಿಸಲಾಗಿತ್ತು. ವಾದ್ಯಗಳ ಸಹಿತ ಬಸವನಭಾವಿ ಆಂಜನೇಯ ದೇವಸ್ಥಾನದಿಂದ ಪಾರ್ವತಿ ದೇವಿಯ ಮೂರ್ತಿಯನ್ನ ಮೆರವಣಿಗೆ ಮೂಲಕ ಕರೆತಂದು ಕಲ್ಯಾಣೋತ್ಸವ ನಡೆಸಲಾಯಿತು. ಇದನ್ನೂ ಓದಿ: ಮಗಳ ಆಧಾರ್ ಬಳಸಿ ಅಮ್ಮ ಬಸ್‌ನಲ್ಲಿ ಉಚಿತ ಪ್ರಯಾಣ
ಶಿವ ಪಾರ್ವತಿ ಕಲ್ಯಾಣೋತ್ಸವದಲ್ಲಿ 101 ದಂಪತಿಗಳಿಗೆ ಶಿವ ಪೂಜೆ ಮಾಡಿಕೊಳ್ಳಲು ಅನುವು ಮಾಡಿಕೊಡಲಾಗಿತ್ತು. ಕಲ್ಯಾಣೋತ್ಸವದಲ್ಲಿ ನೂರಾರು ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿದ್ದರು. ಇನ್ನೂ ಮಧ್ಯರಾತ್ರಿಯಿಂದಲೇ ಶಿವಲಿಂಗ ಸ್ಪರ್ಶ ದರ್ಶನಕ್ಕೆ ಅವಕಾಶ ನೀಡಲಾಗಿದ್ದು, ಸಾವಿರಾರು ಭಕ್ತರು ಸರತಿ ಸಾಲಿನಲ್ಲಿ ನಿಂತು ದರ್ಶನ ಪಡೆದುಕೊಂಡಿದ್ದಾರೆ.

