ಬೀದರ್: ಮಹಾಶಿವರಾತ್ರಿಗಾಗಿ ಜಿಲ್ಲೆಯಲ್ಲಿ ಶ್ರೀರಾಮ ಪ್ರತಿಷ್ಠಾಪಿಸಿದ ಐತಿಹಾಸಿಕ ಶಿವಲಿಂಗ ದರ್ಶನಕ್ಕೆ ಭಕ್ತಸಾಗರವೇ ಹರಿದು ಬರುತ್ತಿದೆ.
ಲಕ್ಷಾಂತರ ಭಕ್ತರು ಪಾಪನಾಶ ಐತಿಹಾಸಿಕ ಶಿವಲಿಂಗದ ದರ್ಶನಕ್ಕೆ ಹರಿದು ಬಂದಿದ್ದು, ಒಂದರಿಂದ ಎರಡು ಕಿ.ಮೀ ಸರತಿ ಸಾಲಿನಲ್ಲಿ ನಿಂತು ದರ್ಶನ ಪಡೆಯುತ್ತಿದ್ದಾರೆ. ನಾಲ್ಕೈದು ಸಾಲಿನಲ್ಲಿ ಕ್ಯೂ ನಿಂತಿದ್ದು ಭಕ್ತ ಸಾಗರ ನಿಯಂತ್ರಿಸಲು ಪೊಲೀಸರು ಹರಸಾಹಸಪಡುತ್ತಿದ್ದಾರೆ. ಇದನ್ನೂ ಓದಿ: ಮುಂಡರಗಿ| ಮಹಾ ಶಿವರಾತ್ರಿ ದಿನವೇ ಶಿವ, ನಂದಿ ವಿಗ್ರಹ ಭಗ್ನ
ಈ ಐತಿಹಾಸಿಕ ಪಾಪನಾಶ ಶಿವಲಿಂಗವನ್ನು ಸ್ವತ ಶ್ರೀರಾಮಚಂದ್ರ ಕೈಯಾರೆ ಪ್ರತಿಷ್ಠಾಪನೆ ಮಾಡಿದ್ದು, ವನವಾಸ ಸಮಯದಲ್ಲಿ ಶ್ರೀರಾಮ, ಸೀತೆ ಮತ್ತು ಲಕ್ಷ್ಮಣ ಹಲವು ದಿನಗಳ ಕಾಲ ಇಲ್ಲಿಯೇ ತಂಗಿದ್ದರು. ಹೀಗಾಗಿ ಈ ವಿಶೇಷ ಶಿವಲಿಂಗದ ದರ್ಶನ ಪಡೆಯಲು ರಾಜ್ಯ, ಹೊರರಾಜ್ಯ ಸೇರಿದಂತೆ ಜಿಲ್ಲೆಯ ಮೂಲೆ ಮೂಲೆಯಿಂದ ಲಕ್ಷಾಂತರ ಭಕ್ತರು ಬಂದು ದರ್ಶನ ಪಡೆಯುತ್ತಿದ್ದಾರೆ.

