ಚಿಕ್ಕಮಗಳೂರು: ಶಿವರಾತ್ರಿಯಂದು ಮಹಾಮಂಗಳಾರತಿ ವೇಳೆ ಸೃಷ್ಠಿಕರ್ತ ಶಿವ, ಶಿರದ ಮೇಲೆ ಒಂದೂ ಹೂವನ್ನಿಟ್ಟುಕೊಳ್ಳದೆ ಮುಡಿಸಿದ್ದ ಎಲ್ಲಾ ಹೂವುಗಳನ್ನ ಪ್ರಸಾದದ ರೂಪದಲ್ಲಿ ಚೆಲ್ಲಿರುವ ಅಪರೂಪ ಹಾಗೂ ಪವಾಡ ಸದೃಶ್ಯದ ಘಟನೆಗೆ ವಿನಯ್ ಗುರೂಜಿ ದತ್ತಾಶ್ರಮ ಸಾಕ್ಷಿಯಾಗಿದೆ.
ಜಿಲ್ಲೆಯ ಕೊಪ್ಪ ತಾಲೂಕಿನ ಹರಿಹರಪುರ ಸಮೀಪದ ಸ್ವರ್ಣಪೀಠಿಕೇಶ್ವರಿ ದತ್ತಾಶ್ರಮದಲ್ಲಿ, ವಿನಯ್ ಗುರೂಜಿ 24 ಗಂಟೆಗಳ ಕಾಲ ನಿರಂತರ ಶಿವರಾತ್ರಿ ಆಚರಣೆಗೆ ಮುಂದಾಗಿದ್ದಾರೆ. ಈ ವೇಳೆ ಶಿವನಿಗೆ ವಿಶೇಷ ಅಲಂಕಾರ ಮಾಡಿ ವಿನಯ್ ಗೂರೂಜಿ ಪೂಜೆ ಮಾಡುವ ವೇಳೆ ಶಿವನಿಗೆ ಮುಡಿಸಿದ್ದ ಎಲ್ಲಾ ಹೂವಗಳು ಕೆಳಗೆ ಬಿದ್ದಿವೆ.
ಶಿವ ಶಿರದ ಮೇಲೆ ಒಂದೇ ಒಂದು ಹೂವನ್ನೂ ಇಟ್ಟುಕೊಳ್ಳದೆ ಎಲ್ಲಾ ಹೂವುಗಳನ್ನ ಚೆಲ್ಲಿದ್ದಾನೆ. ಈ ದೃಶ್ಯವನ್ನ ಕಣ್ಣಾರೆ ಕಂಡ ಭಕ್ತ ಸಮೂಹ ಉಘೇ ಶಂಕರ ಅಂತ ಕೈಮುಗಿದಿದ್ದಾರೆ. ಸ್ವರ್ಣಪೀಠಿಕೇಶ್ವರಿ ದತ್ತಾಶ್ರಮದ ಅವಧೂತ ವಿನಯ್ ಗುರೂಜಿ ಆಶ್ರಮದಲ್ಲಿ 24 ಗಂಟೆಗಳ ಕಾಲ ನಿರಂತರ ಶಿವರಾತ್ರಿ ಕಾರ್ಯಕ್ರಮಕ್ಕೆ ಮುಂದಾಗಿದ್ದಾರೆ. ಈಗಾಗಲೇ ಶಿವರಾತ್ರಿ ಆಚರಣೆಗೆ ಆಶ್ರದಮದಲ್ಲಿ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ. ಇಂದು ಬೆಳಗ್ಗೆ ಆರು ಗಂಟೆಯಿಂದ ನಾಳೆ ಬೆಳಗ್ಗೆ ಆರು ಗಂಟೆವರೆಗೆ ನಿರಂತರ ಪೂಜಾ ಕೈಂಕರ್ಯ, ಹೋಮ-ಹವನ ನಡೆಯಲಿದೆ. ಇದನ್ನೂ ಓದಿ: ಅನ್ನ, ನೀರು, ಮೊಬೈಲ್ ಚಾರ್ಜಿಂಗ್ ಮಾಡಲಾಗದೆ ವಿದ್ಯಾರ್ಥಿಗಳ ಪರದಾಟ
24 ಗಂಟೆಗಳ ಕಾಲ ನಿರಂತರ ವಿಶೇಷ ಲಿಂಗ ಪೂಜೆ ಜೊತೆಗೆ ರುದ್ರಾಭಿಷೇಕ ಕೂಡ ನಡೆಯಲಿದೆ. ಜೊತೆಗೆ ಐದು ಯಾಮ ಪೂಜೆ ಕೂಡ ನಡೆಯಲಿದೆ. ಇಡೀ ರಾತ್ರಿ ಭಕ್ತ ಸಂಗೀತ, ಭಜನೆ ನಡೆಯಲಿದ್ದು, ಅವಧೂತ ವಿನಯ್ ಗುರೂಜಿ ಅವರಿಂದ ಪ್ರವಚನ ಆಶ್ರಮದ ಆವರಣದಲ್ಲಿ ವಿಶೇಷ ಪೂಜೆಗಳು ನಡೆಯಲಿವೆ. ಈಗಾಗಲೇ ಆಶ್ರದಲ್ಲಿರುವ ದೇವತೆಗಳಿಗೆ ವಿಶೇಷ ಅಲಂಕಾರ ಮಾಡಲಾಗಿದೆ. ಆಶ್ರಮದ ಆವರಣದಲ್ಲಿರುವ ನೀಲಕಂಠನಿಗೂ ವಿಶೇಷವಾದ ಅಲಂಕಾರ ಮಾಡಿದ್ದಾರೆ. ಶಿವರಾತ್ರಿ ಅಂಗವಾಗಿ ಆಶ್ರಮದ ಆವರಣದಲ್ಲಿ ಕೃತಕ ಲಿಂಗನನ್ನೂ ಕೂಡ ನಿರ್ಮಿಸಿ ವಿಶೇಷ ಅಲಂಕಾರಗೈದು ಪೂಜೆ ನಡೆಸುತ್ತಿದ್ದಾರೆ.