ನವದೆಹಲಿ: ಮಹಾರಾಷ್ಟ್ರ ವಿಧಾನಸಭೆಯಲ್ಲಿ ನಾಳೆ ವಿಶ್ವಾಸಮತ ಯಾಚನೆಗೆ ಸೂಚಿಸಿರುವ ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿ ನಿರ್ಧಾರವನ್ನು ಪ್ರಶ್ನಿಸಿ ಶಿವಸೇನೆ ಸಲ್ಲಿಸಿರುವ ಅರ್ಜಿಯನ್ನು ಸುಪ್ರೀಂಕೋರ್ಟ್ ಇಂದು ಸಂಜೆ 5 ಗಂಟೆಗೆ ವಿಚಾರಣೆ ನಡೆಸಲಿದೆ.
Supreme Court agrees to hear at 5 pm plea of Shiv Sena chief whip Sunil Prabhu challenging Maharashtra Governor Bhagat Singh Koshyari's direction to Chief Minister Uddhav Thackeray to prove his majority support on the floor of the House on June 30.#MaharashtraPolitcalCrisis pic.twitter.com/3PqhbmDWZ2
— ANI (@ANI) June 29, 2022
Advertisement
ನಾಳೆ ಬೆಳಗ್ಗೆ 11 ಗಂಟೆಗೆ ವಿಶ್ವಾಸಮತ ಯಾಚನೆಗೆ ಸೂಚಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯ ಬಗ್ಗೆ ಹಿರಿಯ ವಕೀಲ ಅಭಿಷೇಕ್ ಮನುಸಿಂಘ್ವಿ, ನ್ಯಾ. ಸೂರ್ಯಕಾಂತ್ ನೇತೃತ್ವದ ದ್ವಿ ಸದಸ್ಯ ಪೀಠದ ಮುಂದೆ ಪ್ರಸ್ತಾಪಿಸಿ ತುರ್ತು ವಿಚಾರಣೆಗೆ ಮನವಿ ಮಾಡಿದರು.
Advertisement
Advertisement
ರಾಜ್ಯಪಾಲರು ವಿಶ್ವಾಸಮತ ಯಾಚನೆಗೆ ಸೂಚಿಸಿರುವುದು ಸರಿಯಾದ ಕ್ರಮವಲ್ಲ, 16 ಶಾಸಕರ ವಿರುದ್ಧ ಅನರ್ಹತೆ ಅರ್ಜಿ ಸಲ್ಲಿಸಿದ್ದು ಇದು ಕೋರ್ಟ್ ನಲ್ಲಿ ವಿಚಾರಣೆ ಹಂತದಲ್ಲಿದೆ. ಈ ಹಂತದಲ್ಲಿ ವಿಶ್ವಾಸಮತ ಯಾಚನೆಗೆ ಸೂಚಿಸುವುದು ಕಾನೂನು ಬಾಹಿರ ಎಂದರು. ಒಂದು ವೇಳೆ ಬಹುಮತ ಸಾಬೀತು ಮಾಡಲೇಬೇಕು ಎನ್ನುವುದಾದರೆ ಏಕನಾಥ ಶಿಂಧೆ ಗುಂಪಿನಲ್ಲಿರುವ ಬಂಡಾಯ ಶಾಸಕರಿಗೆ ವಿಶ್ವಾಸಮತ ಯಾಚನೆ ಸಂದರ್ಭದಲ್ಲಿ ಭಾಗವಹಿಸಲು ಅವಕಾಶ ನೀಡಬಾರದು ಎಂದು ಮನವಿ ಮಾಡಿದರು.
Advertisement
Shiv Sena Chief Whip Sunil Prabhu moves Supreme Court challenging Maharashtra Governor Bhagat Singh Koshyari's direction to #Maharashtra CM Uddhav Thackeray to prove his majority support on the floor of the House on June 30. pic.twitter.com/aRzw4t504B
— ANI (@ANI) June 29, 2022
ಅಭಿಷೇಕ್ ಮನುಸಿಂಘ್ವಿ ವಾದಕ್ಕೆ ಏಕನಾಥ್ ಶಿಂಧೆ ಪರ ವಕೀಲ ನೀರಜ್ ಕಿಶನ್ ಕೌಲ್ ವಿರೋಧ ವ್ಯಕ್ತಪಡಿಸಿದರು. ಕೋರ್ಟ್ ವಿಶ್ವಾಸಮತ ಯಾಚನೆಗೆ ಅವಕಾಶ ನೀಡಬೇಕು ಎಂದರು. ಅಲ್ಲದೇ ಶಿವಸೇನೆ ಅರ್ಜಿ ವಿಚಾರಗೆ ಅವಕಾಶ ನೀಡಬಾರದು ಎಂದರು.
People are with us and we will win the floor test tomorrow and will form the government. There is no need to worry: Rebel Shiv Sena MLA Gulabrao Patil at the Radisson Blu Hotel in Guwahati#MaharashtraPolitcalCrisis pic.twitter.com/c59VsMkbKw
— ANI (@ANI) June 29, 2022
ಆದರೆ ನೀರಜ್ ಕಿಶನ್ ಕೌಲ್ ವಾದ ಒಪ್ಪದ ಕೋರ್ಟ್, ಆದೇಶ ಏನೇ ಇದ್ದರೂ ಮೊದಲು ತುರ್ತು ವಿಚಾರಣೆಗೆ ಅನುಮತಿ ನೀಡಬೇಕು. ಹೀಗಾಗಿ ಪ್ರಕರಣ ಎಲ್ಲ ಮಾಹಿತಿಯನ್ನು ನೀಡಿ ಸಂಜೆ 5 ಗಂಟೆಗೆ ವಿಚಾರಣೆ ನಡೆಸೋಣ ಎಂದು ನ್ಯಾ. ಸೂರ್ಯಕಾಂತ್ ಹೇಳಿದರು.