Connect with us

Districts

ವಿಜಯಪುರದ ಭೀಮಾ ನದಿ ನೀರಿಗೆ ಮಹಾರಾಷ್ಟ್ರ ಜನರ ಕಣ್ಣು!

Published

on

Share this

ವಿಜಯಪುರ: ಒಂದೆಲ್ಲೊಂದು ವಿಷಯಕ್ಕೆ ಮಹಾರಾಷ್ಟ್ರ ಸರಕಾರ ಮತ್ತು ಜನರು ಕರ್ನಾಟಕದೊಂದಿಗೆ ಕ್ಯಾತೆ ತಗಿತಾನೇ ಇರುತ್ತಾರೆ. ಈಗ ವಿಜಯಪುರದ ಭೀಮಾ ನದಿ ನೀರಿಗೆ ಮಹಾರಾಷ್ಟ್ರದ ಜನರು ದುಂಬಾಲು ಬಿದ್ದಿದ್ದಾರೆ.

ಮಂಗಳವಾರ ತಡರಾತ್ರಿ ಜಿಲ್ಲೆಯ ಇಂಡಿ ತಾಲೂಕಿನ ಉಮರಾಣಿ ಗ್ರಾಮ ಬಳಿಯ ಭೀಮಾನದಿಯ ಬ್ಯಾರೇಜ್ ನ 18 ಗೇಟ್‍ಗಳನ್ನು ಮಹಾರಾಷ್ಟ್ರ ರೈತರು ಕಿತ್ತು ಹಾಕಿದ್ದಾರೆ. ಉಮರೇಜ್ ಬ್ಯಾರೇಜ್‍ನ ಗೇಟ್ ಗಳನ್ನು ತಗೆಯಲು ಯತ್ನಿಸಿದಾಗ ಚಡಚಣ ಪೋಲಿಸರು ಸ್ಥಳಕ್ಕೆ ದೌಡಾಯಿಸಿ ಆರೋಪಿಗಳನ್ನು ಸೆರೆ ಹಿಡಿದಿದ್ದಾರೆ. ಈ ಕೃತ್ಯವನ್ನು ಮಹಾರಾಷ್ಟ್ರದ ಚನೇಗಾಂವ್ ಬಳಿಯ ಬರೂರು ಗ್ರಾಮದ ರೈತರು ಎಸಗಿದ್ದಾರೆ ಎಂದು ಹೇಳಲಾಗುತ್ತಿದೆ. ಸದ್ಯ ಗೇಟ್ ಕಿತ್ತಾಕಿದ 30 ಜನರನ್ನು ಚಡಚಣ ಪೊಲೀಸರು ಬಂಧಿಸಿದ್ದು, ತನಿಖೆ ಮುಂದುವರಿಸಿದ್ದಾರೆ.

ಮಹಾರಾಷ್ಟ್ರ ರೈತರ ಈ ಕೃತ್ಯವನ್ನು ವಿಜಯಪುರ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಅಧ್ಯಕ್ಷ ಪಂಚಪ್ಪ ಕಲಬುರ್ಗಿ ಖಂಡಿಸಿದ್ದು, ಈ ಘಟನೆಗೆ ರಾಜ್ಯ ಸರಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿದ್ದಾರೆ. ಅಲ್ಲದೆ ಕೂಡಲೆ ನಮ್ಮ ಬ್ಯಾರೇಜ್ ಗಳಿಗೆ ಪೋಲಿಸ್ ಭದ್ರತೆ ಒದಗಿಸಬೇಕೆಂದು ರಾಜ್ಯ ಸರಕಾರಕ್ಕೆ ಒತ್ತಾಯಿಸಿದ್ದಾರೆ.

Click to comment

Leave a Reply

Your email address will not be published. Required fields are marked *

Advertisement