ಮುಂಬೈ: ಇಬ್ಬರ ಯುವಕರ ಜೊತೆ ಸೇರಿ ಪ್ರಿಯತಮನನ್ನು ಕೊಲೆಗೈದು ರೈಲ್ವೇ ಟ್ರ್ಯಾಕ್ ಮೇಲೆ ಹಾಕಿಹೊದ ಘಟನೆ ಮಹಾರಾಷ್ಟ್ರದ ರಾಯಗಡ್ ಜಿಲ್ಲೆಯಲ್ಲಿ ನಡೆದಿದ್ದು, ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ನಿಶಾ ವಿರ್ಲೆ (22), ಅನಿಲ್ ರಾವತ್ (27) ಹಾಗೂ ಮಾಂಗೇಶ್ ಭಾವರೆ (22) ಬಂಧಿತ ಆರೋಪಿಗಳು. ಕರ್ಜತ್ ತಾಲೂಕಿನ ವಂಜಾರ್ಪದ ಗ್ರಾಮದ ನಂದು ಕೇಳ್ಕರ್ (26) ಕೊಲೆಯಾದ ಯುವಕ. ರಾಯಗಡ್ ಪೊಲೀಸ್ ಠಾಣೆ ವ್ಯಾಪ್ತಿಯ ದಮತ್ ಗ್ರಾಮ ಸಮೀಪದ ರೈಲ್ವೇ ಟ್ರ್ಯಾಕ್ ಮೇಲೆ ಗುರುವಾರ ನಂದು ಕೇಳ್ಕರ್ ಮೃತದೇಹ ಪತ್ತೆಯಾಗಿತ್ತು. ಈ ಕುರಿತು ತನಿಖೆ ಚುರುಕುಗೊಳಿಸಿದ್ದ ಪೊಲೀಸರ ಕೈಗೆ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ.
Advertisement
Advertisement
ಏನಿದು ಪ್ರಕರಣ?:
ಕರ್ಜತ್ ತಾಲೂಕಿನ ವಂಜಾರ್ಪದ ಗ್ರಾಮದ ನಂದು ಕೇಳ್ಕರ್ ಅಕ್ಟೋಬರ್ 13ರಂದು ತನ್ನ ಪ್ರಿಯತಮೆ ನಿಶಾ ವಿರ್ಲೆ ಜೊತೆಗೆ ಸೇರಿ ನಾಪತ್ತೆಯಾಗಿದ್ದ. ಆತನ ಮೂಲಕ ಹಾಲಿ ಪ್ರೇಮಿ ಅನಿಲ್ ರಾವತ್ ಸೇರಿಕೊಂಡಿದ್ದ ನಿಶಾ, ನಂದು ಕೇಳ್ಕರ್ ಗೆ ಮತ್ತು ಬರುವ ಔಷಧಿ ಹಾಕಿ, ತಂಪು ಪಾನೀಯ ಕುಡಿಸಿದ್ದಾಳೆ. ಬಳಿಕ ಪ್ರಜ್ಞೆ ಕಳೆದುಕೊಂಡ ನಂದು ಕೇಳ್ಕರ್ ನನ್ನು ಅನಿಲ್ ರಾವತ್ ಹಾಗೂ ಮಾಂಗೇಶ್ ಭಾವರೆ ಜೊತೆ ಸೇರಿ ಕೊಲೆಗೈದು ರೈಲ್ವೇ ಹಳಿಯ ಮೇಲೆ ಹಾಕಿ, ಆತ್ಮಹತ್ಯೆ ಎನ್ನುವಂತೆ ಬಿಂಬಿಸಿದ್ದರು.
Advertisement
ಶವವನ್ನು ಪರಿಶೀಲಿಸಿದ ಪೊಲೀಸರಿಗೆ ನಂದು ಕೇಳ್ಕರ್ ಮೊಬೈಲ್ ಸಿಕ್ಕಿದ್ದು, ಕಾಲ್ ಹಿಸ್ಟರಿ ನೋಡಿದಾಗ ನಿಶಾಗೆ ಫೋನ್ ಮಾಡಿರುವುದು ಪತ್ತೆಯಾಗಿದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಚುರುಕುಗೊಳಿಸಿದ ಪೊಲೀಸರು, ನಿಶಾ ಹಾಗೂ ಅನಿಲ್‍ನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದರು. ಈ ವೇಳೆ ಇಬ್ಬರೂ ತಪ್ಪು ಒಪ್ಪಿಕೊಂಡಿದ್ದು, ಕೃತ್ಯದಲ್ಲಿ ಮತ್ತೊಬ್ಬ ಸಹಾಯ ಮಾಡಿದ್ದಾಗಿ ತಿಳಿಸಿದ್ದಾರೆ ಎಂದು ವರದಿಯಾಗಿದೆ.
Advertisement
ಆರೋಪಿಗಳನ್ನು ಕೋರ್ಟ್ ಗೆ ಹಾಜರುಪಡಿಸಿದ್ದು, ನವೆಂಬರ್ 21ರ ವರೆಗೆ ಪೊಲೀಸ್ ಸುಪರ್ದಿಗೆ ಒಪ್ಪಿಸಿ ನ್ಯಾಯಾಲಯ ಆದೇಶ ಹೊರಡಿಸಿದೆ. ಈ ಕುರಿತಾಗಿ ತನಿಖೆ ಚುರುಕುಗೊಳಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews