– 8 ದಿನಗಳಲ್ಲಿ ಕ್ರಮ; ಗ್ರೀನ್ ಎನರ್ಜಿಗೆ ಉತ್ತೇಜನ ನೀಡಲು ವ್ಯವಸ್ಥೆ
ಮುಂಬೈ: ಹೊಸ ವರ್ಷ ಸಮೀಪಿಸುತ್ತಿರುವ ಹೊತ್ತಿನಲ್ಲೇ ಮಹಾರಾಷ್ಟ್ರ ಸರ್ಕಾರ ಎಲೆಕ್ಟ್ರಿಕ್ ವಾಹನ ಸವಾರರಿಗೆ ಬಂಪರ್ ಗಿಫ್ಟ್ ಕೊಡೋದಕ್ಕೆ ಮುಂದಾಗಿದೆ. ಗ್ರೀನ್ ಎನರ್ಜಿಗೆ ಉತ್ತೇಜನ ನೀಡುವ ಸಲುವಾಗಿ ರಾಜ್ಯದ ಪ್ರಮುಖ ಹೆದ್ದಾರಿಗಳಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ (Electric Vehicles) ಟೋಲ್ ವಿನಾಯಿತಿ ನೀಡುವುದಕ್ಕೆ ಮುಂದಾಗಿದೆ.
ನಾಗ್ಪುರದಲ್ಲಿ ನಡೆದ ವಿಧಾನಸಭಾ ಅಧಿವೇಶನದಲ್ಲಿ ಸ್ಪೀಕರ್ ರಾಹುಲ್ ನರವೇಕರ್ ಈ ಕುರಿತು ಆದೇಶ ಹೊರಡಿಸಿದ್ದಾರೆ. ಮಹಾರಾಷ್ಟ್ರ ಸರ್ಕಾರ (Maharashtra Government) ನಿರ್ವಹಣೆ ಮಾಡುತ್ತಿರುವ ಟೋಲ್‌ಗಳಲ್ಲಿ ಮುಂದಿನ 8 ದಿನಗಳಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಟೋಲ್ ವಿನಾಯಿತಿ ಕ್ರಮವನ್ನ ಜಾರಿಗೆ ತರಬೇಕೆಂದು ನಿರ್ದೇಶನ ನೀಡಿದ್ದಾರೆ. ಇದನ್ನೂ ಓದಿ: CIC ಆಯ್ಕೆ| ಮೋದಿ, ಶಾ ಜೊತೆ ಸಭೆ – ಸರ್ಕಾರ ಪ್ರಸ್ತಾಪಿಸಿದ ಹೆಸರುಗಳಿಗೆ ರಾಹುಲ್ ಆಕ್ಷೇಪ

ಅಲ್ಲದೇ ಟೋಲ್ (Toll Collection) ವಿನಾಯಿತಿ ಜೊತೆಗೆ ವಿದ್ಯುತ್ ವಾಹನ ಚಾರ್ಜಿಂಗ್ ಕೇಂದ್ರಗಳ ವಿಸ್ತರಣೆಯನ್ನೂ ವೇಗಗೊಳಿಸುವಂತೆ ಸ್ಪೀಕರ್ ನರವೇಕರ್ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ಟೋಲ್ ಪ್ಲಾಜಾಗಳಲ್ಲಿ ವ್ಯವಸ್ಥೆಯನ್ನ ನವೀಕರಿಸಿ ಪ್ರತಿ ನೋಂದಾಯಿತ ವಿದ್ಯುತ್ ಚಾಲಿತ ವಾಹನಗಳನ್ನ ಸೂಕ್ತವಾಗಿ ಖಚಿತಪಡಿಸಿಕೊಳ್ಳುವಂತೆ ಮಾಡಬೇಕು ಎಂದು ತಾಕೀತು ಮಾಡಿದ್ದಾರೆ. ಇದನ್ನೂ ಓದಿ: ಇಂಡಿಗೋ ಸಮಸ್ಯೆ ಇದ್ದಾಗಲೂ ಟಿಕೆಟ್ ದರ 39 ಸಾವಿರಕ್ಕೆ ಏರಿದ್ದು ಹೇಗೆ – ಕೇಂದ್ರಕ್ಕೆ ದೆಹಲಿ ಹೈಕೋರ್ಟ್ ಪ್ರಶ್ನೆ
ಎಲೆಕ್ಟ್ರಿಕ್ ವಾಹನಗಳಿಗೆ ಟೋಲ್ ವಿನಾಯಿತಿ ನೀಡುವ ಕ್ರಮ ಜಾರಿಗೆ ತಕ್ಷಣವೇ ಕರೆ ನೀಡಬೇಕು. ಜೊತೆಗೆ ವಿದ್ಯುತ್ ವಾಹನ ಬಳಕೆದಾರರಿಂದ ಕಾನೂನು ಬಾಹಿರವಾಗಿ ಈವರೆಗೆ ಸಂಗ್ರಹಿಸಲಾದ ಟೋಲ್ ಮೊತ್ತವನ್ನ ಮರುಪಾವತಿಸಲು ಸರಿಯಾದ ಕಾರ್ಯವಿಧಾನ ಅನುಷ್ಠಾನಗೊಳಿಸಬೇಕು. ಏಕೆಂದರೆ ನೀತಿ ಜಾರಿಗೆ ಬಂದ ಬಳಿಕವೂ ಟೋಲ್ ಸಂಗ್ರಹ ಮಾಡುತ್ತಿರುವುದು ಕಾನೂನು ಬಾಹಿರ. ಈ ಕ್ರಮವನ್ನ ವಿಳಂಬವಿಲ್ಲದೇ ಹಾಗೂ ಲೋಪಗಳೂ ಇಲ್ಲದಂತೆ ಅನುಷ್ಠಾನಗೊಳಿಸಬೇಕು ಎಂದು ಎಚ್ಚರಿಕೆ ನೀಡಿದರು.

ಯಾವ್ಯಾವ ಟೋಲ್‌ಗಳಲ್ಲಿ ವಿನಾಯ್ತಿ?
ಇನ್ನೂ ಅಧಿಕಾರಿಗಳು ಹೇಳುವಂತೆ, ರಾಜ್ಯ ಸರ್ಕಾರವು ಶೀಘ್ರದಲ್ಲೇ ಈ ಕ್ರಮ ಅನುಷ್ಠಾನಗೊಳಿಸುವ ಭರವಸೆ ನೀಡಿದೆ. ಅದರಂತೆ ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇ, ಸಮೃದ್ಧಿ ಮಹಾಮಾರ್ಗ್ ಮತ್ತು ಅಟಲ್ ಸೇತು ಸೇರಿದಂತೆ ಪ್ರಮುಖ ಮಾರ್ಗಗಳಿಗೆ ವಿನಾಯಿತಿ ನೀಡಲಾಗುತ್ತದೆ ಎಂದಿದ್ದಾರೆ. ಇದನ್ನೂ ಓದಿ: ಮತಕಳ್ಳತನ ಮಾಡಿದ್ದು ಇಂದಿರಾ ಗಾಂಧಿ, ಚುನಾವಣಾ ಆಯುಕ್ತರಿಗೆ ಕಾಂಗ್ರೆಸ್‌ನಿಂದ ರಾಜ್ಯಪಾಲ ಹುದ್ದೆ: ನಿಶಿಕಾಂತ್ ದುಬೆ
ಗೊಂದಲ ಉಂಟಾಗಿದ್ದು ಹೇಗೆ?
ಈ ಹಿಂದೆಯೇ ಮಹಾರಾಷ್ಟ್ರ ಸರ್ಕಾರ ʻಎಲೆಕ್ಟ್ರಿಕ್ ವಾಹನ ನೀತಿ 2025ʼ ಅನ್ನು ಪ್ರಾರಂಭಿಸಿತ್ತು. ಈ ನೀತಿ ಅನ್ವಯ ಎಲೆಕ್ಟ್ರಿಕ್ ವಾಹನಗಳಿಗೆ ಟೋಲ್ ವಿನಾಯಿತಿ, ನೋಂದಣಿ ಶುಲ್ಕ ವಿನಾಯಿತಿ ಹಾಗೂ ಎಲೆಕ್ಟ್ರಿಕ್ ವಾಹನಗಳ ಉತ್ತೇಜನಕ್ಕೆ ಸಹಾಯಧನವನ್ನೂ ನೀಡಲಾಗಿತ್ತು. ಆದ್ರೆ ಫಾಸ್ಟ್‌ಟ್ಯಾಗ್ ವ್ಯವಸ್ಥೆಯಲ್ಲಿ ಸಮಸ್ಯೆಯಾಗಿ ಗೊಂದಲ ಉಂಟಾಗಿತ್ತು. ಆದ್ದರಿಂದ ಮುಂದಿನ 8 ದಿನಗಳ ವರೆಗೂ ಇವಿ ವಾಹನಗಳಿಗೆ ಟೋಲ್ ವಿಧಿಸಬಾರದು, ಜೊತೆಗೆ ಈಗಾಗಲೇ ಕಾನೂನು ಬಾಹಿರವಾಗಿ ಸಂಗ್ರಹಿಸಲಾದ ಟೋಲ್ ಮೊತ್ತವನ್ನ ಮರುಪಾವತಿಸಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ರಾಜ್ಯ ಸರ್ಕಾರಕ್ಕೆ ಸ್ಪೀಕರ್ ನರವೇಕರ್ ನಿರ್ದೇಶನ ನೀಡಿದ್ದಾರೆ.

