ಮುಂಬೈ: ಮದ್ಯ ಸೇವಿಸಿ ಶಾಲೆಗೆ ತೂರಾಡುತ್ತಾ ಬಂದು, ಕುಡಿದ ಅಮಲಿನಲ್ಲಿ ಕಚೇರಿಯ ಅಧಿಕಾರಿಯನ್ನು ಥಳಿಸಿದ ಆರೋಪದಡಿ ಶಿಕ್ಷಕನನ್ನು ಅಮಾನತಗೊಳಿಸಿರುವ ಘಟನೆ ಮಹಾರಾಷ್ಟ್ರದ (Maharashtra) ಪಾಲ್ಘರ್ (Palghar) ಜಿಲ್ಲೆಯಲ್ಲಿ ನಡೆದಿದೆ. ಇದೀಗ ಶಿಕ್ಷಕನನ್ನು ಕೆಲಸದಿಂದ ಅಮಾನತುಗೊಳಿಸಲಾಗಿದೆ.
ದಹಾನು ತಾಲೂಕಿನ ದ್ಯಾಮಂಗಾವ್‍ನ ಪ್ರಾಥಮಿಕ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಶಿಕ್ಷಕ ನಿದ್ದೆ ಮಾಡುತ್ತಿದ್ದಾಗ ಸಿಕ್ಕಿಬಿದ್ದಿದ್ದು, ಶಾಲೆಯಲ್ಲಿದ್ದ ಕೆಲವರನ್ನು ಏಕಾಏಕಿ ನಿಂದಿಸುತ್ತಿದ್ದಾನೆ. ನಂತರ ಶಿಕ್ಷಕನ ವಿರುದ್ಧದ ದೂರು ದಾಖಲಿಸಿದ ಬಳಿಕ ಆತನನ್ನು ನವೆಂಬರ್ 22ರಂದು ಅಮಾನತುಗೊಳಿಸಲಾಗಿದೆ. ಇದನ್ನೂ ಓದಿ: ದೆವ್ವವಿಲ್ಲ ಎಂದು ಸಾರಲು ಸ್ಮಶಾನದಲ್ಲಿ ಅದ್ಧೂರಿಯಾಗಿ ಹುಟ್ಟುಹಬ್ಬ ಆಚರಿಸಿಕೊಂಡ
Advertisement
Advertisement
ಸೇವಾ ನಿಯಮಗಳ ನಿಬಂಧನೆಗಳಿಗೆ ಅನುಗುಣವಾಗಿ ಹೊರಡಿಸಲಾದ ಅಮಾನತು ಪತ್ರದಲ್ಲಿ, ಅಮಾನತುಗೊಂಡ ಅವಧಿಯಲ್ಲಿ ಶಿಕ್ಷಕ ಪ್ರಧಾನ ಕಚೇರಿಯನ್ನು ಬಿಡುವಂತಿಲ್ಲ ಮತ್ತು ಬೇರೆ ಯಾವುದೇ ಕೆಲಸಕ್ಕೆ ಸೇರಿಕೊಳ್ಳುವಂತಿಲ್ಲ ಎಂದು ತಿಳಿಸಲಾಗಿದೆ. ಇದನ್ನೂ ಓದಿ: ಮತ್ತೆ ಹೊಸ ವರಸೆ ಶುರು ಮಾಡಿದ ಮಹಾರಾಷ್ಟ್ರ ಸಿಎಂ, ಗಡಿ ವಿವಾದ ಮಾತುಕತೆಯಿಂದ ಬಗೆಹರಿಯಲಿ: ಏಕನಾಥ ಶಿಂಧೆ